Advertisement

ಭಟ್ಟಕೋಡಿ ಬಲವಿನ ಗುಡ್ಡೆ ರಸ್ತೆ ದುರಸ್ತಿಗೆ ಆಗ್ರಹ

02:25 PM Dec 13, 2017 | Team Udayavani |

ಕಿನ್ನಿಗೋಳಿ: ಭಟ್ಟಕೋಡಿಯಿಂದ ಬಲವಿನ ಗುಡ್ಡೆಗೆ ಹೋಗುವ ರಸ್ತೆಯ ಎರಡೂ ಬದಿಗಳಲ್ಲಿ ಡಾಮರು ಕಿತ್ತುಹೋಗಿ, ವಾಹನಗಳಿಗೆ ಸೈಡ್‌ ಕೊಡಲು ಹೋದರೂ ಅಪಾಯ ಮೈಮೇಲೆ ಎರಗುವ ಸ್ಥಿತಿಯಿದೆ.ಈ ರಸ್ತೆ ಎರಡು ವರ್ಷಗಳ ಹಿಂದಷ್ಟೇ ಡಾಮರು ಕಂಡಿತ್ತು. ಆದರೆ, ಅಲ್ಪ ಅವಧಿಯಲ್ಲೇ ಇಕ್ಕೆಲಗಳಲ್ಲಿ ದೊಡ್ಡ ಗಾತ್ರದ ಹೊಂಡಗಳು ನಿರ್ಮಾಣವಾಗಿದೆ.

Advertisement

ಮುಂದಿನ ವಾರ ಶಿಬರೂರು ಜಾತ್ರೆ ನಡೆಯಲಿದ್ದು, ಒಂದು ವಾರ ಕಾಲ ಇಲ್ಲಿ ವಾಹನ ದಟ್ಟಣೆಯಿದ್ದು, ಅದಕ್ಕಿಂತ ಮೊದಲು ದುರಸ್ತಿ ಅಗತ್ಯ. ಆದ್ಯತೆ ಮೇರೆಗೆ ಕಾಮಗಾರಿ ಈ ಸಲ ಟೆಂಡರ್‌ ಪ್ರಕ್ರಿಯೆ ವಿಳಂಬವಾಗಿದೆ. 1.3 ಕಿ.ಮೀ. ರಸ್ತೆ ನಿರ್ವಹಣೆ ಕಾಮಗಾರಿಯನ್ನು ಶೀಘ್ರ ಆರಂಭಿಸಲಾಗುವುದು. ಹೊಂಡಗಳನ್ನು ತುಂಬಿ, ಪ್ಯಾಚ್‌ವರ್ಕ್‌ ಮಾಡುವ ಕೆಲಸವನ್ನು ಆದ್ಯತೆ ಮೇರೆಗೆ ನಿರ್ವಹಿಸಲಾಗುವುದು ಎಂದು ಲೋಕೋಪಯೋಗಿ ಇಲಾಖೆ ತಿಳಿಸಿದೆ.

ಭಟ್ಟಕೋಡಿಯಿಂದ ನಡುಗೋಡು ಶಾಲೆಯ ತನಕ ರಸ್ತೆಯ ಎರಡೂ ಬದಿಗಳಲ್ಲಿ ಮಳೆಗಾಲದಲ್ಲಿ ನೀರು ಹರಿದು ಹೋಗಲು  ‌ಸರಿಯಾದ ಚರಂಡಿ ಇಲ್ಲ. ಕೆಲವೊಂದು ಕಡೆಗಳಲ್ಲಿ ರಸ್ತೆಯ ಮೇಲೆಯೇ ನೀರು ಹರಿಯುತ್ತಿರುತ್ತದೆ. ಕೆಲವು ಕಡೆಗಳಲ್ಲಿ ಗುಡ್ಡ ಕಡಿದು ಸಮತಟ್ಟು ಮಾಡಿದ್ದರಿಂದ ಅಲ್ಲಿನ ಕೆಸರು ನೀರೂ ರಸ್ತೆ ಮೇಲೆ ಹರಿದು ದೊಡ್ಡ ಹೊಂಡಗಳನ್ನು ನಿರ್ಮಿಸಿದೆ.

ಡಿ.15 ರಿಂದ ಶಿಬರೂರು ಆಯನ
ಡಿ. 15ರಿಂದ ಒಂದು ವಾರ ಕಾಲ ಶಿಬರೂರು ಜಾತ್ರೆ ನಡೆಯಲಿದೆ. ಕಿನ್ನಿಗೋಳಿ, ಮೂಲ್ಕಿ ಕಡೆಯಿಂದ ಸಾಗಲು ಭಕ್ತಾದಿಗಳು ಇದೇ ದಾರಿ ಬಳಸುವುದರಿಂದ ವಾಹನ ದಟ್ಟನೆ ಇರುತ್ತದೆ. ಕಳೆದ ವರ್ಷ ಈ ರಸ್ತೆಯಲ್ಲಿ ನಾಲ್ಕು ಅಪಘಾತಗಳು ಸಂಭವಿಸಿವೆ. ಅಲ್ಲದೆ, ಮಂಗಳೂರು, ಕೃಷ್ಣಾಪುರ, ಕಾಟಿಪಳ್ಳ ಕಡೆಗೆ ಸಂಚರಿಸಲೂ ಇದೇ ಹತ್ತಿರದ ರಸ್ತೆಯಾಗಿದೆ. ಆದರೆ, ಪೊದೆಗಳು ಬೆಳೆದಿದ್ದು, ತಿರುವುಗಳು ಗೋಚರವಾಗುವುದಿಲ್ಲ. ಎಚ್ಚರಿಕೆ ಫ‌ಲಕಗಳಿಲ್ಲ. ಕೆಲವು ಕಡೆಗಳಲ್ಲಿ ದಾರಿ ದೀಪಗಳೂ ಇಲ್ಲ. ಭಟ್ಟಕೋಡಿ ಕೆಳಗಿನ ಭಾಗದ ರಸ್ತೆಯಂತೂ ಹೊಂಡಮಯವಾಗಿದೆ.

ಟಯರ್‌ ಸವೆತ
ಇಲ್ಲಿನ ರಸ್ತೆಯಲ್ಲಿ ರಿಕ್ಷಾ ಚಾಲನೆಯ ಸಂದರ್ಭ ಬೇರೆ ವಾಹನಕ್ಕೆ ಸೈಡ್‌ ಕೊಡಲು ಹೋಗಿ ಕೆಲವರು ಬಿದ್ದಿದ್ದಾರೆ. ಕೊರಕರು ರಸ್ತೆಯಿಂದಾಗಿ ವಾಹನಗಳ ಟೈರ್‌ಗಳು ಬೇಗನೆ ಸವೆಯುತ್ತವೆ. ಬಿಡಿಭಾಗಗಳೂ ಹಾಳಾಗಿ ನಷ್ಟವಾಗುತ್ತಿದೆ.
   ಜೇಮ್ಸ್‌ ಮಾರ್ಕ್‌ಮಾರ್ಟಿಸ್‌, 
   ಅಧ್ಯಕ್ಷರು, ರಿಕ್ಷಾ ಚಾ.ಮಾ.ಸಂಘ

Advertisement

ದುರಸ್ತಿ ಆಗಲಿ
ದ್ವಿಚಕ್ರ ವಾಹನ ಚಾಲಕರು ದೊಡ್ಡ ವಾಹನಗಳಿಗೆ ಸೈಡ್‌ ಕೊಡಲು ಹೋಗಿ ಹೊಂಡಗಳಿಂದಾಗಿ ಬಿದ್ದು ಮೂಳೆ ಮುರಿದುಕೊಂಡ ಹಲವು ಘಟನೆಗಳು ಸಂಭವಿಸಿವೆ. ಇನ್ನಾದರೂ ರಸ್ತೆ ದುರಸ್ತಿ ಮಾಡಿಸಬೇಕು. ಆಯನಕ್ಕಿಂತ ಮೊದಲೇ ದುರಸ್ತಿಯಾದರೆ ಉತ್ತಮ.
   ಪ್ರಸನ್ನ ಶೆಟ್ಟಿ, ಅತ್ತೂರು ಗುತ್ತು,
   ಬೈಕ್‌ ಸವಾರ

ವಿಶೇಷ ವರದಿ

Advertisement

Udayavani is now on Telegram. Click here to join our channel and stay updated with the latest news.

Next