Advertisement
ಬಿಜೆಪಿ ಸಂಸದ ರಮೇಶ್ ಬಿಧೂರಿ ಅವರು 103 ಖಾಸಗಿ ಸದಸ್ಯರ ಭಗವದ್ಗೀತೆ ಪಾಠ ಕಡ್ಡಾಯ ಮಸೂದೆ ಮಂಡಿಸಿದರು. ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಆರಂಭದಲ್ಲಿಯೇ ಭಗವದ್ಗೀತೆಯನ್ನು ಪ್ರತಿಯೊಂದು ಶಾಲೆಗಳಲ್ಲಿ ಕಡ್ಡಾಯಗೊಳಿಸಬೇಕೆನ್ನುವ ಮಾತುಗಳು ಕೇಳಿಬಂದಿತ್ತು. ಇದೀಗ ಮಸೂದೆ ಪರಿಚಯಿಸಲಾಗಿದ್ದು, ಇನ್ನಷ್ಟೇ ಅಂಗೀಕಾರಗೊಳ್ಳಬೇಕಿದೆ. ಇದೇ ವೇಳೆ ಬಿಜೆಪಿಯ ಸಂಸದ ಮಹೈಶ್ ಗಿರ್ರಿ ಶುಚಿತ್ವ ನಿರ್ವಹಣಾ ಮಸೂದೆ ಮಂಡಿಸಿದರು.
ನವದೆಹಲಿ: ವಿರೋಧ ಪಕ್ಷಗಳ ಸಭಾತ್ಯಾಗದ ನಡುವೆಯೇ 49 ವರ್ಷದ ಹಳೆಯ “ಶತ್ರು ಆಸ್ತಿ ಕಾಯ್ದೆ’ಗೆ ರಾಜ್ಯಸಭೆ ತಿದ್ದುಪಡಿ ತಂದಿದೆ. ಭಾರತದಲ್ಲಿನ ಆಸ್ತಿಯನ್ನು ತೊರೆದು ಪಾಕಿಸ್ತಾನ, ಚೀನಾಕ್ಕೆ ವಲಸೆ ಹೋಗಿರುವ ವ್ಯಕ್ತಿಗಳ ಆಸ್ತಿಯ ಮೇಲೆ ಅಧಿಕಾರ ಹೊಂದಲು ಈ ಶತ್ರು ಆಸ್ತಿ ಕಾಯ್ದೆ ನೆರವಾಗಲಿದೆ. ಈ ಒಂದು ವರ್ಷದಲ್ಲಿ ಕೇಂದ್ರ ಸರ್ಕಾರ 5 ಬಾರಿ ಇದನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಿತ್ತು. ಪ್ರತಿಪಕ್ಷಗಳು ಆಗಲೂ ವಿರೋಧ ವ್ಯಕ್ತಪಡಿಸಿದ್ದವು. ರಾಷ್ಟ್ರಪತಿ ಪ್ರಣಬ್ ಕೂಡ ಈ ಕುರಿತು ಕೆಲವು ಪ್ರಶ್ನೆಗಳನ್ನೆತ್ತಿದ್ದರು. ಆಸ್ತಿಯ ಹಕ್ಕುದಾರ ಬದುಕಿದ್ದಾನೋ ಅಥವಾ ಮರಣ ಹೊಂದಿದ್ದಾನೋ ಎಂಬುದನ್ನು ಪರಿಗಣಿಸದೆ ಆಸ್ತಿಯನ್ನು ಪರಭಾರೆ ಮಾಡುವ ಅವಕಾಶ ಈ ಕಾಯ್ದೆಯಲ್ಲಿದೆ.