Advertisement
ಕಡೂರು: ತಾಲೂಕು ಕಚೇರಿ ಆವರಣದಲ್ಲಿ ಭಾನುವಾರ ನಡೆದ ಸಾವಯವ ಸಂತೆ ಎಲ್ಲರ ಗಮನ ಸೆಳೆಯಿತು. ಸಾವಯವ ಪದಾರ್ಥಗಳನ್ನು ಗ್ರಾಹಕರು ಮುಗಿಬಿದ್ದು ಖರೀದಿಸಿದರು.
Related Articles
Advertisement
ಇದಲ್ಲದೆ ರೈತರೊಬ್ಬರು ತಯಾರಿಸಿ ತಂದಿದ್ದ ನವಣೆಯ ಬಿಸಿಬೇಳೆ ಬಾತ್ ಕೇವಲ ಅರ್ಧಗಂಟೆಯಲ್ಲಿಯೇ ಖಾಲಿಯಾಯಿತು. ಸಾವಯವ ಕೃಷಿಯಲ್ಲಿ ಬೆಳೆದ ಬಾಳೆಹಣ್ಣು, ತರೀಕೆರೆ ರೈತ ರುದ್ರಯ್ಯ ತಂದಿದ್ದ ಕಾಳು ಮೆಣಸು, ಗಿರಿಯಾಪುರದ ಚಂದ್ರಶೇಖರ್, ಕಡೂರಿನ ರಶ್ಮಿ ಮತ್ತು ತಂಡ ಅಚ್ಚುಕಟ್ಟಾಗಿ ವ್ಯಾಪರಕ್ಕಾಗಿ ವೇದಿಕೆ ಸಿದ್ದಪಡಿಸಿದ್ದರು. ಮಧ್ಯಾಹ್ನದೊಳಗೆ ಬಹುತೇಕ ಎಲ್ಲಾ ವಸ್ತುಗಳು ಮಾರಾಟವಾದವು. ಸಿರಿಧಾನ್ಯಗಳು ಬೆಂಗಳೂರಿನಲ್ಲಿ ಬಹು ತುಟ್ಟಿ. ಈ ಸಂತೆಯಲ್ಲಿ ಕಡಿಮೆ ಬೆಲೆಗೆ ಸಿಕ್ಕಿರುವುದು ತೃಪ್ತಿಯಾಗಿದೆ ಎಂದು ಬೆಂಗಳೂರಿನ ರೇಖಾ ರಂಗನಾಥ್ ತಿಳಿಸಿದರು.
ಸಾವಯವ ಕೃಷಿಯ ಬಗ್ಗೆ ರೈತರಲ್ಲಿ ಹೆಚ್ಚು ಆಸಕ್ತಿ ಮೂಡಬೇಕು. ಆರೋಗ್ಯ ಮತ್ತು ಆರ್ಥಿಕ ಅಭಿವೃದ್ಧಿಗೆ ಪೂರಕ ಸಾವಯವ ಕೃಷಿ. ಅದು ಅನಿವಾರ್ಯ. ರೈತರು ಇದನ್ನು ಅರಿಯಬೇಕು ಎಂದು ಕೃಷಿಕರಾದ ಬಿ.ಎಂ. ಕೊಪ್ಪಲು, ಧನಂಜಯ ತಿಳಿಸಿದರು.