Advertisement

ಉದ್ಘಾಟನೆ ಕಾಣದ ಬಿಇಒ ಕಚೇರಿ

03:29 PM Jan 01, 2018 | Team Udayavani |

ದೇವದುರ್ಗ: ಪಟ್ಟಣದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಕಟ್ಟಡ ಕಾಮಗಾರಿ ಪೂರ್ಣಗೊಂಡು
ಆರು ತಿಂಗಳಾದರೂ ಉದ್ಘಾಟನೆಗೆ ಮೀನ-ಮೇಷ ಎಣಿಸಲಾಗುತ್ತಿದೆ. ಪರಿಣಾಮ ಕಟ್ಟಡದ ಕಿಟಕಿ ಗಾಜುಗಳು ಪುಂಡರ ಪುಂಡಾಟಕ್ಕೆ ಒಡೆದು ಹಾಳಾಗಿವೆ. ಇನ್ನು ನೀರಿಗಾಗಿ ಅಳವಡಿಸಿದ ಸಿಂಟೆಕ್‌ ಟ್ಯಾಂಕ್‌ ಕೂಡ ಕಳುವಾಗಿದೆ.

Advertisement

40 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ಬಿಇಒ ಕಚೇರಿ ಉದ್ಘಾಟನೆಗೆ ಜನಪ್ರತಿನಿಧಿಗಳು, ಅಧಿಕಾರಿಗಳು ಮುಂದಾಗದ್ದರಿಂದ ಕಟ್ಟಡ ಪುಂಡ, ಪೋಕರಿಗಳ, ಕಿಡಿಗೇಡಿಗಳಿಗೆ ಮದ್ಯ ಸೇವನೆ ಸೇರಿದಂತೆ ಇತರೆ ಚಟುವಟಿಕೆಗಳಿಗೆ ಅನೈತಿಕ ತಾಣವಾಗಿ ಮಾರ್ಪಟ್ಟಿದೆ ಎಂದು ಸಾರ್ವಜನಿಕರು ದೂರಿದ್ದಾರೆ.

ಸ್ಥಳೀಯ ಶಾಸಕರ ಅನುದಾನದಲ್ಲಿ ಕಚೇರಿಗೆ ಪೀಠೊಪಕರಣಗಳು ಖರೀದಿ ಮಾಡಿದ ನಂತರವೇ ಕಚೇರಿ ಉದ್ಘಾಟನೆಗೆ ಉದ್ದೇಶಿಸಿರುವುದು ಕಚೇರಿ ಉದ್ಘಾಟನೆ ವಿಳಂಬಕ್ಕೆ ಕಾರಣ ಎನ್ನಲಾಗುತ್ತಿದೆ. ಹಳೆ ಕಚೇರಿಯ ಸಾಮಗ್ರಿಗಳು ತಾತ್ಕಾಲಿಕ ಅಲ್ಲಿಗೆ ಸ್ಥಳಾಂತರಿಸಿ ಕಟ್ಟಡ ಉದ್ಘಾಟಿಸಬಹುದಾಗಿತ್ತು. ಬಳಿಕ ಪೀಠೊಪಕರಣಗಳು ಖರೀದಿ ಪ್ರಕ್ರಿಯೆ ಆರಂಭಿಸಬೇಕಿತ್ತು ಎಂದು ಪ್ರಜ್ಞಾವಂತರು ಅಭಿಪ್ರಾಯಪಟ್ಟಿದ್ದಾರೆ. 

ಇತ್ತೀಚೆಗೆ ದೇವದುರ್ಗಕ್ಕೆ ಭೇಟಿ ನೀಡಿದ್ದ ಶಿಕ್ಷಣ ಸಚಿವ ತನ್ವೀರ್‌ ಸೇಠ್ಠ್… ತಾಲೂಕಿನ ವಿವಿಧ ಶಾಲಾ ಕಟ್ಟಡಗಳನ್ನು
ಉದ್ಘಾಟನೆ ಮಾಡಿದ್ದರು. ಇದೇ ವೇಳೆ ಬಿಇಒ ಕಚೇರಿ ಉದ್ಘಾಟಿಸಲು ಅವಕಾಶವಿತ್ತು. ಆದರೆ ಕಚೇರಿ
ಉದ್ಘಾಟನೆಗೆ ಮುಂದಾಗದಿರುವುದು ಚರ್ಚೆಗೆ ಗ್ರಾಸವಾಗಿದೆ.
 
ಆಗ್ರಹ: ಶಿಕ್ಷಣ ಇಲಾಖೆ ವ್ಯಾಪ್ತಿಗೆ ಒಳಪಡುವ ಕ್ಷೇತ್ರ ಸಂಪನ್ಮೂಲ, ಬಾಲಕರ ಕಾಲೇಜು, ಬಾಲಕರ
ಪ್ರೌಢಶಾಲೆ, ಸರ್ಕಾರಿ ಕೇಂದ್ರ ಹಿರಿಯ ಪ್ರಾಥಮಿಕ ಶಾಲೆ, ಅಕ್ಷರ ದಾಸೋಹ ಕಚೇರಿ ಸೇರಿ ಇತರೆ ಕಟ್ಟಡಗಳಿಗೆ ರಾತ್ರಿ
ಕಾವಲುಗಾರರು ಮತ್ತು ಬೆಳಕಿನ ವ್ಯವಸ್ಥೆ ಇಲ್ಲ. ಕಿಡಿಗೇಡಿಗಳು ಮದ್ಯ ಸೇವಿಸಿ ಬಾಟಲಿ ಎಸೆದು ಹೋಗುತ್ತಿದ್ದಾರೆ. ಇದಲ್ಲದೇ ಅಧಿಕಾರಿಗಳ ನಿರ್ಲಕ್ಷéದಿಂದ ಬಿಇಒ ಕಚೇರಿಯಲ್ಲಿ ಕಂಪ್ಯೂಟರ್‌ಗಳು ಕಳುವಾಗಿವೆ. ಪಕ್ಕದ ಶಾಲೆಯಲ್ಲಿ ಕಳ್ಳತನ ಪ್ರಕರಣಗಳು ನಡೆದಿವೆ. ಇನ್ನಾದರೂ ಸಂಬಂಧಪಟ್ಟ ಶಿಕ್ಷಣ ಇಲಾಖೆ ಅಧಿಕಾರಿಗಳು ಕಚೇರಿ ಉದ್ಘಾಟಿಸುವ
ಜೊತೆಗೆ ಕಚೇರಿಗಳಲ್ಲಿ ಕಾವಲುಗಾರರ ನೇಮಕಕ್ಕೆ ಮತ್ತು ಬೆಳಕಿನ ವ್ಯವಸ್ಥೆಗೆ ಕ್ರಮ ವಹಿಸಬೇಕೆಂದು ಕಸಾಪ ಜಿಲ್ಲಾ
ಸಂಘಟನಾ ಕಾರ್ಯದರ್ಶಿ ಎಚ್‌. ಶಿವರಾಜ ಆಗ್ರಹಿಸಿದ್ದಾರೆ.
 
ಬಿಇಒ ಕಚೇರಿ ಕಟ್ಟಡ ಕಾಮಗಾರಿ ಪೂರ್ಣಗೊಂಡರೂ ಉದ್ಘಾಟನೆಗೆ ವಿಳಂಬ ಕುರಿತು ಅಧಿಕಾರಿಗಳಿಂದ ಮಾಹಿತಿ
ಪಡೆಯುತ್ತೇನೆ. ಸ್ಥಳೀಯ ಶಾಸಕರ ಗಮನಕ್ಕೆ ತಂದು ಆದಷ್ಟು ಬೇಗನೆ ಉದ್ಘಾಟಿಸಿ ಕಚೇರಿ ಬಳಕೆಗೆ ಅನುಕೂಲ ಕಲ್ಪಿಸಲಾಗುತ್ತದೆ.  
ಬಷೀರ್‌ ಅಹ್ಮದ್‌ ನಂದನೂರು, ಉಪನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ, ರಾಯಚೂರು.

ಪಟ್ಟಣದ ಕೆಲ ಶಾಲಾ-ಕಾಲೇಜು ಆವರಣದಲ್ಲಿ ರಾತ್ರಿ ವೇಳೆ ಕಿಡಿಗೇಡಿಗಳು ಮದ್ಯ ಸೇವಿಸುತ್ತಾರೆ ಎಂಬುದು ಗಮನಕ್ಕೆ ಬಂದ ಮೇಲೆ ನಿತ್ಯ ರಾತ್ರಿ ಪೊಲೀಸರ ಗಸ್ತಿಗೆ ವ್ಯವಸ್ಥೆ ಮಾಡಲಾಗಿದೆ. 
 ಎಸ್‌.ಬಿ.ಹೊಸಳ್ಳಿ ಪ್ರಭಾರಿ ಪಿಎಸ್‌ಐ

Advertisement
Advertisement

Udayavani is now on Telegram. Click here to join our channel and stay updated with the latest news.

Next