Advertisement

ಶಿಕ್ಷಕರ ವರ್ಗಾವಣೆಯಲ್ಲಿ ಕಟ್ಟುನಿಟ್ಟಿನ ಕ್ರಮ

03:51 PM Jan 27, 2018 | Team Udayavani |

ರಾಯಚೂರು: ಶಿಕ್ಷಕರ ನೇಮಕಾತಿ ಪ್ರಕಿಯೆ ಅಂತಿಮ ಅಂತದಲ್ಲಿದ್ದು, ಹೈ-ಕ ಭಾಗದಲ್ಲಿ ಕೆಲ ವಿಷಯಗಳಿಗೆ ನಿರೀಕ್ಷೆಯಷ್ಟು ಅರ್ಜಿ ಬಂದಿಲ್ಲ. ಉಳಿದ ಹುದ್ದೆಗಳ ನೇಮಕಕ್ಕೆ ಶೀಘ್ರದಲ್ಲೇ ಮರು ಅಧಿಸೂಚನೆ ಹೊರಡಿಸಲಾಗುವುದು ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಖಾತೆ ಸಚಿವ ತನ್ವಿರ್‌ ಸೇಠ್ಠ್… ತಿಳಿಸಿದರು.
 
ನಗರದ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೈ-ಕ ಭಾಗಕ್ಕೆ 4750 ಹುದ್ದೆಗಳನ್ನು ಮೀಸಲಿಡಲಾಗಿತ್ತು. ಆದರೆ, ಕೆಲ ಹುದ್ದೆಗಳಿಗೆ ನಿರೀಕ್ಷಿತ ಮಟ್ಟದ ಅರ್ಜಿಗಳು ಸಲ್ಲಿಕೆಯಾಗಿಲ್ಲ. ಒಂದು ತಿಂಳಗೊಳಗೆ ಶಿಕ್ಷಕರ ನೇಮಕ ಪ್ರಕ್ರಿಯೆ ಮುಗಿಸಲಾಗುವುದು ಎಂದು ತಿಳಿಸಿದರು. ಶಿಕ್ಷಕರ ವರ್ಗಾವಣೆ ವಿಚಾರದಲ್ಲಿ ಸರ್ಕಾರ
ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ.

Advertisement

ಈ ಮುಂಚೆ ಶೇ.15ರಷ್ಟಿದ್ದ ಅನುಪಾತ ಈಗ ಶೇ.20ಕ್ಕೆ ಹೆಚ್ಚಿಸಿದ್ದೇವೆ. ಆದರೆ, ದಂಪತಿ ವರ್ಗಾವಣೆ ವಿಚಾರದಲ್ಲಿ
ನಾವೇನು ಮಾಡಲು ಬರುವುದಿಲ್ಲ. ಸತಿ ಪತಿ ಇಬ್ಬರು ಸರ್ಕಾರಿ ಹುದ್ದೆಯಲ್ಲಿದ್ದರೂ ಕನಿಷ್ಠ ಐದು ವರ್ಷಗಳಾದರೂ ಒಂದೇ ಸ್ಥಳದಲ್ಲಿ ಸೇವೆ ಸಲ್ಲಿಸುವುದು ಕಡ್ಡಾಯ. ಈ ಬಗ್ಗೆ ನಾವು ಮೊದಲೇ ಮುಚ್ಚಳಿಕೆ ಬರೆಯಿಸಿಕೊಳ್ಳುತ್ತಿದ್ದೇವೆ.

ಇಂಥ ಸಮಸ್ಯೆಗಳ ನಿವಾರಣೆಗೇ ನಾವು ಸ್ಥಳೀಯ ಅಭ್ಯರ್ಥಿಗಳಿಗೆ ಆದ್ಯತೆ ನೀಡುತ್ತಿರುವುದು ಎಂದು ತಿಳಿಸಿದರು. ಕೇಂದ್ರ ಸರ್ಕಾರ ಜಿಲ್ಲೆಗೆ ಐಐಐಟಿ ಮಂಜೂರು ಮಾಡಿರುವುದು ಸ್ವಾಗತಾರ್ಹ. ಅದಕ್ಕೆ ಬೇಕಾದ ಸ್ಥಳ ಹಾಗೂ ಸಹಕಾರ ನೀಡಲು ರಾಜ್ಯ ಸರ್ಕಾರ ಬದ್ಧವಾಗಿದೆ.

ಆದರೆ, ಜಿಲ್ಲೆಗೆ ಏಮ್ಸ್‌ ನೀಡುವಂತೆ ನಮ್ಮ ಸರ್ಕಾರ ಮಾಡಿದ ಮನವಿಗೆ ಕೇಂದ್ರ ಸರ್ಕಾರ ಸ್ಪಂದಿಸಿಲ್ಲ. ಏಮ್ಸ್‌ ಸಂಸ್ಥೆಯನ್ನು ಮೊದಲು ಕಲಬುರಗಿಗೆ ನೀಡಬೇಕು ಎಂಬ ಒತ್ತಡಗಳಿದ್ದವು. ಆದರೆ, ನಂತರ ರಾಯಚೂರಿಗೆ ಕೊಡಿಸುವ ಬಗ್ಗೆ ನಿರ್ಧರಿಸಲಾಗಿತ್ತು ಎಂದು ವಿವರಿಸಿದರು. 

ತುಂಗಭದ್ರಾ ಜಲಾಶಯದಿಂದ ತೆಲಂಗಾಣದ ಪಾಲಿನ ಎರಡು ಟಿಎಂಸಿ ಅಡಿ ನೀರು ಕೇಳಲಾಗಿತ್ತು. ಈಗ ಟಿಬಿ ಡ್ಯಾಂನಿಂದ ನೀರು ಪಡೆದು ಕೃಷ್ಣಾ ನದಿಯಿಂದ ನೀಡುವ ಭರಸವೆ ನೀಡಿದ್ದೇವೆ. ಅದಕ್ಕೆ ಸಕರಾತ್ಮಕ ಪ್ರತಿಕ್ರಿಯೆ ಬಂದಿದೆ. ಆದರೆ, ಆಂಧ್ರಪ್ರದೇಶದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ತಿಳಿಸಿದರು.

Advertisement

ಮುಜರಾಯಿ ವ್ಯಾಪ್ತಿಯ ಶಿಕ್ಷಣ ಸಂಸ್ಥೆಗಳಿಗೆ ಅನುದಾನ ನೀಡುವ ವಿಚಾರವಾಗಿ ಫೆ.5ರಂದು ಮುಜರಾಯಿ ಖಾತೆ ಸಚಿವ ಹಾಗೂ ಕಮಿಶನರ್‌ ಸಭೆ ಕರೆಯಲಾಗಿದೆ ಎಂದು ಸಚಿವ ತನ್ವೀರ್‌ ಸೇಠ್ಠ್… ತಿಳಿಸಿದರು. ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿ ನಡೆಸುವ ಶಾಲೆಗಳಿಗೆ ಸರ್ಕಾರ ಅನುದಾನ ನೀಡುತ್ತಿಲ್ಲ. ಈ ಕುರಿತು ಸರ್ಕಾರದ ಮಟ್ಟದಲ್ಲಿ ನಿಯಮಾವಳಿಗೆ ತಿದ್ದುಪಡಿ ತಂದು ಕ್ರಮ ಕೈಗೊಳ್ಳಬೇಕು. ತಾಲೂಕಿನ ಶಕ್ತಿನಗರದಲ್ಲಿ ಕಳೆದ ಐದು ದಿನದಿಂದ ಶಿಕ್ಷಕರು ಹೋರಾಟ ನಡೆಸುತ್ತಿರುವ ವಿಚಾರ ಗಮನಕ್ಕಿದೆ. ಅಂಥ ಸಾಕಷ್ಟು ಶಾಲೆಗಳು ರಾಜ್ಯದಲ್ಲಿವೆ ಎಂದರು. ಶಿಕ್ಷಕರನ್ನು
ಕಾರ್ಮಿಕರೆಂದು ಪರಿಗಣಿಸಲು ಬರುವುದಿಲ್ಲ. ಹೀಗಾಗಿ ಅವರಿಗೆ ಕನಿಷ್ಠ ವೇತನ ಅನ್ವಯ ಆಗುವುದಿಲ್ಲ. ಬದಲಿಗೆ ನಿಯಮ ತಿದ್ದುಪಡಿ ಮಾಡಿ ವೇತನ ಹೆಚ್ಚಿಸುವ ಕ್ರಮ ಕೈಗೊಳ್ಳಲಾಗುವುದು.
 ತನ್ವಿರ್‌ ಸೇಠ್ಠ್…, ಪ್ರೌಢ ಶಿಕ್ಷಣ ಖಾತೆ ಸಚಿವ
 

Advertisement

Udayavani is now on Telegram. Click here to join our channel and stay updated with the latest news.

Next