Advertisement

ತರಬೇತಿಯ ಲಾಭ

06:00 AM Oct 12, 2018 | |

ಶಿಕ್ಷಣ ಎಂಬುದು ಬಾಲ್ಯದಿಂದ ಆರಂಭಗೊಂಡು ನಮ್ಮ ಅಭಿಲಾಷೆಗೆ ತಕ್ಕಂತೆ ಹೊಂದಿಕೊಂಡು ಮುಂದುವರಿಕೆ ಕಾಣುತ್ತದೆ. ಕೆಲವರು ಪಿಯುಸಿ-ಪದವಿ ಜೀವನಕ್ಕೆ ಚುಕ್ಕೆ ಇಟ್ಟುಬಿಡುವವರಿದ್ದಾರೆ. ನಾನೋ ಪತ್ರಿಕಾ ಕ್ಷೇತ್ರದಲ್ಲಿ ತನ್ನನ್ನ ತಾನು ಗುರುತಿಸೋ ನೆಪದಲ್ಲಿ  ಪತ್ರಿಕಾ ವಿಭಾಗಕ್ಕೆ ದಾಖಲಾತಿ ಮಾಡಿಕೊಂಡವನು. ಬಿ.ಎ. ವಿಭಾಗದ ನಾನು ನಮ್ಮದೇ ಒಬ್ಬರು ಪ್ರೊಫೆಸರ್‌ ಪಾರ್ಟ್‌ಟೈಮ್‌ ಉದ್ಯೋಗಿಯಾಗಿ ಒಂದು ಹೆಸರಾಂತ ದೃಶ್ಯ ಮಾಧ್ಯಮದಲ್ಲಿ ಸೇವೆಯನ್ನು ಸಲ್ಲಿಸುತ್ತಿದ್ದುದ್ದರಿಂದ ಅವರ ಒಂದು ಸಲಹೆಯ ಮೇರೆಗೆ ಪತ್ರಿಕಾ ರಂಗದ ಉದ್ಯೋಗ ತರಬೇತಿಗೆ ಮುಂದಾದಾಗ ಪಾಂಶುಪಾಲರ ಪತ್ರದಿಂದಾಗಿ ಸಮ್ಮತಿ ಪಡೆದು ಒಂದೂವರೆ ತಿಂಗಳುಗಳ ಕಾಲ ತರಬೇತಿಗಾಗಿ ಮಂಗಳೂರಿನ ಹೆಸರಾಂತ ಕರಾವಳಿ ಕರ್ನಾಟಕದ ನಾಡಿಮಿತವಾಗಿದ್ದ  ದೃಶ್ಯಮಾಧ್ಯಮದಲ್ಲಿ 45 ದಿನಗಳ ತರಬೇತಿಗೆ ನನ್ನ ತರಗತಿಯ ಇನ್ನೊಬ್ಬಳು ಸಹೋದರಿಯೊಂದಿಗೆ ಅಪ್ಪಣೆ ಸಿಕ್ಕಿತ್ತು. 

Advertisement

ತರಬೇತಿಯ ಪ್ರಥಮ ದಿನ ಧೈರ್ಯದಿಂದ ಒಳನುಸುಳಿ ಎಲ್ಲರಿಂದಲೂ ವಿಶ್ವಾಸಗರಿಯನ್ನ ಸಂಪಾದಿಸಿ ನ್ಯೂಸ್‌ ಮೇಲಧಿಕಾರಿಯಿಂದ ಸ್ನೇಹದ ಭಾವವನ್ನ ಗಳಿಸಿದೆವು. ಪ್ರಾರಂಭದಲ್ಲಿ  ಸುದ್ದಿಯನ್ನು ಕಲೆಹಾಕುವುದರ ತರಬೇತಿಗೆ ಒಳಪಟ್ಟರೆ, ಬಳಿಕದ ದಿನಗಳಲ್ಲಿ  ರಿಪೋರ್ಟಿಂಗ್‌, ದೃಶ್ಯ ಮಾಧ್ಯಮದ ನೆಲೆಯಲ್ಲಿ ಸುದ್ದಿಗೆ ಹಿನ್ನಲೆ ಸ್ವರ, ಎಡಿಟಿಂಗ್‌, ಪ್ರೋಗ್ರಾಮ್‌ ತಯಾರಿ, ಜಾಹೀರಾತು ವಿಭಾಗದ ಕಡೆಗಳಲ್ಲಿಯೂ ಕಣ್ಣಾಡಿಸುವ ಅವಕಾಶ ಸಿಕ್ಕಿ ಎಲ್ಲರ ಆತ್ಮೀಯತೆ ಗಳಿಸಿದೆವು.

ಪದವಿ ಜೀವನದಲ್ಲೇ ಫೋಟೋಗ್ರಫಿ ವಿಚಾರದಲ್ಲಿ ಕೊಂಚ ಆಸಕ್ತಿ ಹೊಂದಿದ್ದರಿಂದ ತರಬೇತಿಯ ಸಮಯ ರಿಪೋರ್ಟಿಂಗ್‌ ಮಾಡಲು ಬಹಳ ಪೂರಕವಾಗಿತ್ತು. ಆ ದಿನಗಳಲ್ಲಿ ಚುನಾವಣಾ ರಂಗು ಬಿರುಸಾಗಿಯೇ ಬೀಸತೊಡಗಿತ್ತು. ನಮ್ಮದು ಜಾಹೀರಾತು ಆಧಾರಿತ ವಾಹಿನಿ ಆದದ್ದರಿಂದ ಈ ಪ್ರಚಾರದ ಹಿನ್ನಲೆಯಲ್ಲಿ ಎಲ್ಲ ಅಭ್ಯರ್ಥಿಗಳ ಸಾಕ್ಷ್ಯ ಚಿತ್ರ ರಚಿಸುವ ಸೂಚನೆಯ ಇದ್ದರಿಂದ ಛಾಯಾಗ್ರಹಣದ ನೆಲೆಯಲ್ಲಿ ಈ ಅವಕಾಶ ಒದಗಿಬಂತು.

ಈ ತರಬೇತಿಯಿಂದ ನನ್ನ ಕಲ್ಪನೆ ಲೋಕಕ್ಕೆ ಸೀಮಿತವಾದ ಮಾಧ್ಯಮ ಕ್ಷೇತ್ರದಲ್ಲಿ ಡೆಸ್ಕ್ನಿಂದ ಹಿಡಿದು, ರಿಪೋರ್ಟಿಂಗ್‌, ಹಿನ್ನಲೆ ಧ್ವನಿ, ನೇರ ಪ್ರಸಾರ, ವಾರ್ತೆಗಳು, ಜಾಹೀರಾತು ಕಾರ್ಯಗಳು- ಹೀಗೆ ದೃಶ್ಯ ಮಾಧ್ಯಮದ ವೈವಿಧ್ಯಮಯ ಕಾರ್ಯಗಳನ್ನು 45 ದಿನಗಳ ಅವಧಿಯಲ್ಲಿ ಒಂದು ಸಂಸ್ಥೆಯಿಂದ ಪಡೆಯುವಂತಾಯಿತು.

ಗಣೇಶ್‌ ಕುಮರ್‌
ಪತ್ರಿಕೋದ್ಯಮ ವಿಭಾಗ ಮಂಗಳೂರು ವಿಶ್ವವಿದ್ಯಾನಿಲಯ

Advertisement
Advertisement

Udayavani is now on Telegram. Click here to join our channel and stay updated with the latest news.

Next