Advertisement

ರೊಬೋಟಿಕ್ ‌ಕೇಂದ್ರ ಆರಂಭ

03:01 PM Nov 30, 2020 | Suhan S |

ತುಮಕೂರು: ಎಂಜಿನಿಯರಿಂಗ್‌ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಪೂರಕವಾಗಿ ರೊಬೋಟಿಕ್‌ (ಮಾನವ ರಹಿತ) ಕ್ಷೇತ್ರದಲ್ಲಿ ಹೆಚ್ಚಿನ ಅಧ್ಯಯನ, ತರಬೇತಿ ಮತ್ತು ಉದ್ಯೋಗ ಕುರಿತಾದ ಪರಸ್ಪರ ವಿನಿಮಯಕ್ಕಾಗಿ ಸಿಂಗಾಪುರ್‌ನ ಬ್ಲೂಪ್ರಿಸಮ್‌ ಸಂಸ್ಥೆ ಹಾಗೂ ಬೆಂಗಳೂರಿನ ನತೆಲ್ಲಾ ಕಂಪನಿಗಳ ಸಹಯೋಗದಲ್ಲಿ ನಗರದ ಶ್ರೀ ಸಿದ್ಧಾರ್ಥ ಎಂಜಿನಿಯರಿಂಗ್‌ ಕಾಲೇಜಿನಲ್ಲಿ 20 ಲಕ್ಷ ವೆಚ್ಚದಲ್ಲಿ ಅಂತಾರಾಷ್ಟ್ರೀಯ ಮಟ್ಟದ ರೊಬ್ಯಾಟಿಕ್‌ ಸಂಶೋಧನಾಕೇಂದ್ರ ಆರಂಭಿಸಲಾಗಿದೆ.

Advertisement

600 ಮಂದಿ ವಿದ್ಯಾರ್ಥಿಗಳಿಗೆ ಅವಕಾಶ: ಸಿದ್ಧಾರ್ಥ ಎಂಜಿನಿಯರಿಂಗ್‌ ಕಾಲೇಜಿನ ಎಲೆಕ್ಟ್ರಾನಿಕ್ಸ್‌ ಮತ್ತು ಕಮ್ಯೂನಿಕೇಷನ್‌ ಹಾಗೂ ಮಾಹಿತಿ ತಂತ್ರಜ್ಞಾನ ವಿಭಾಗದಲ್ಲಿ20 ಲಕ್ಷ ವೆಚ್ಚದಲ್ಲಿ ಆಧುನಿಕ ತಂತ್ರಜ್ಞಾನಗಳನ್ನು ಒಳಗೊಂಡಂತೆ ಈ ರೊಬೋಟಿಕ್‌ ಪ್ರೋಸಸ್‌ ಆಟೊಮೇಷನ್‌ ಕೇಂದ್ರದಲ್ಲಿ ಎರಡು ವರ್ಷದ ಈ ಪ್ರಾಜೆಕ್ಟ್‌ನಲ್ಲಿ ಸುಮಾರು 600 ಮಂದಿ ವಿದ್ಯಾರ್ಥಿಗಳಿಗೆ ರೊಬೋಟಿಕ್‌ ಕ್ಷೇತ್ರದಲ್ಲಿ ಅಧ್ಯಯನ, ತರಬೇತಿ ಮತ್ತು ಉದ್ಯೋಗ ಕುರಿತಾದ ಸಂಶೋಧನೆಗೆ ಅವಕಾಶವಿದೆ.

ನೋಡಲ್‌ ಕೇಂದ್ರ: ಇದು ಕಾಲೇಜಿನ ವಿದ್ಯಾರ್ಥಿಗಳಿಗಷ್ಟೇ ಅಲ್ಲದೆ ಜಿಲ್ಲೆಯ ಇತರೆ ಎಂಜಿನಿಯ ರಿಂಗ್‌ ಕಾಲೇಜು ವಿದ್ಯಾರ್ಥಿಗಳಿಗೂ ಉಪಯೋಗವಾಗಲಿದೆ. ಸಿಂಗಾಪುರ್‌ನ ಬ್ಲೂಪ್ರಿಸಮ್‌ ಸಂಸ್ಥೆ ಭಾರತದಲ್ಲಿ ರೊಬೋಟಿಕ್‌ ಕ್ಷೇತ್ರದಲ್ಲಿ ಯಾವುದೇ ಯೋಜನೆಗಳನ್ನು ಕೈಗೆತ್ತಿಕೊಂಡರೂ ಅವುಗಳ ಆರಂಭಿಸಲು ಮತ್ತು ನಿರ್ವಹಣೆ ಮಾಡಲು ತುಮಕೂರಿನಲ್ಲಿರುವ ಘಟಕವನ್ನು ನೋಡಲ್‌ ಕೇಂದ್ರವನ್ನಾಗಿ ಪರಿಗಣಿಸಲಾಗಿದೆ.

ಈ ಕೇಂದ್ರದಲ್ಲಿ ವಿದ್ಯಾರ್ಥಿಗಳಿಗೆ ಅಧ್ಯಯನಕ್ಕೆ ಅವಕಾಶ, ತರಬೇತಿ ನೀಡುವುದಲ್ಲದೆ, ಉದ್ಯೋಗದಲ್ಲಿ ವೃತ್ತಿ ನೈಪುಣ್ಯತೆಯನ್ನುಕಲಿಸಲಾಗುತ್ತದೆ. ಉದ್ಯೋಗ ಕೇತ್ರದಲ್ಲಿ ಹೆಚ್ಚುತ್ತಿರುವ ಒತ್ತಡ ಮತ್ತು ಕಡಿಮೆ ಸಮಯದಲ್ಲಿ ಹೆಚ್ಚು ಉತ್ಪಾದನೆ ಗುರಿಯನ್ನು ಸಾಧಿಸುವ ಹಿನ್ನೆಲೆಯಲ್ಲಿ ವೈದ್ಯಕೀಯ, ಶಿಕ್ಷಣ,ಕೈಗಾರಿಕಾ ಮುಂತಾದ ಪ್ರಮುಖಕೇತ್ರಗಳಲ್ಲಿ ರೊಬೋಟಿಕ್‌ ತಂತ್ರಜ್ಞಾನದ ಮೂಲಕ ಕಾರ್ಯ ನಿರ್ವಹಣೆ ಮತ್ತು ನಿಯಂತ್ರಣ ಮಾಡುವ ಕುರಿತು ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುತ್ತದೆ.

ಸಂಶೋಧನೆ ಮತ್ತು ತರಬೇತಿ ಕೇಂದ್ರಕ್ಕೆ ಚಾಲನೆ: ಶ್ರೀ ಸಿದ್ಧಾರ್ಥ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಎಲೆಕ್ಟ್ರಾನಿಕ್ಸ್‌ ಮತ್ತು ಕಮ್ಯೂನಿಕೇಷನ್‌ ವಿಭಾಗದಲ್ಲಿ ಆರಂಭಿಸಲಾಗಿರುವ ರೊಬೋಟಿಕ್‌ ಪ್ರೋಸಸ್‌ ಆಟೊಮೇಷನ್‌ ಕೇಂದ್ರವನ್ನು ಸಾಹೇ ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ.ಬಾಲಕೃಷ್ಣ ಪಿ.ಶೆಟ್ಟಿ ಉದ್ಘಾಟಿಸಿ ಮಾತನಾಡಿ, ರೊಬೋಟಿಕ್‌ ಆಟೊಮೇಷನ್‌ ಪ್ರಕ್ರಿಯೆಯಿಂದ ಜನಜೀವನ ನಿರ್ವಹಣೆಯ ಬಹುತೇಕ ಕ್ಷೇತ್ರಗಳಿಗೆ ಮಹತ್ತರವಾದ ಉಪಯೋಗವಾಗಲಿದೆ ಎಂದರು.

Advertisement

ಲೋಪದೋಷ ತಪ್ಪಿಸಬಹುದು: ಸದಾಒತ್ತಡದಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯಕೀಯ ಕ್ಷೇತ್ರದಹಲವು ಬಿಕ್ಕಟುಗಳಿಗೆ ರೊಬೋಟಿಕ್‌ ತಂತ್ರಜ್ಞಾನಅಳವಡಿಕೆಯಿಂದ ಪರಿಹಾರ ದೊರಕಲಿದೆ. ರೋಗಿಗಳ ವೈಯಕ್ತಿಕ ವಿವರಗಳ ಗೌಪ್ಯತೆ, ಆಸ್ಪ್ರತೆಯ ಕಚೇರಿ ದಾಖಲೆಗಳ ನಿರ್ವಹಣೆಯಲ್ಲಿ ಆಗುತ್ತಿರುವ ಲೋಪ ದೋಷಗಳು ಮತ್ತು ವಿಳಂಬವನ್ನು ತಪ್ಪಿಸಹುದು ಎಂದರು.

ಹೊಸ ಆವಿಷ್ಕಾರಗಳಿಗೆ ಆದ್ಯತೆ: ಇಂದಿನ ಡಿಜಿ ಟಲ್‌ ಯುಗದಲ್ಲಿ ಕಾಲಮಿತಿಯೊಳಗೆ ಯಾವುದೇ ಕೆಲಸ ಗಳು ಸಮರ್ಪಕವಾಗಿ ಆಗುತ್ತಿಲ್ಲದಿರು ವುದರಿಂದ ರೊಬೋಟಿಕ್‌ ಪ್ರಕ್ರಿಯೆ ಅಳವಡಿಕೆ ಅನಿವಾರ್ಯ ಮತ್ತು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಸಿದ್ದಾರ್ಥ ಶಿಕ್ಷಣ ಸಂಸ್ಥೆ ಸಮೂಹದಲ್ಲಿ ಹೊಸ ಆವಿಷ್ಕಾರಗಳಿಗೆ ಆದ್ಯತೆ ನೀಡಲಾಗುತ್ತಿದೆ ಎಂದು ಹೇಳಿದರು.

ವಿದ್ಯಾರ್ಥಿಗಳಿಗೆ ತರಬೇತಿ: ಬ್ಲೂಪ್ರಿಸಮ್‌

ಸಂಸ್ಥೆಯ ಬೆಂಗಳೂರು ವಿಭಾಗದ ಎಂ. ಮಂಜುನಾಥ್‌ ಮಾತನಾಡಿ, ವಿದ್ಯಾರ್ಥಿಗಳಿಗೆ ಜಾಗತಿಕ ಮಟ್ಟದಲ್ಲಿ ಉದ್ಯೋಗವಕಾಶಗಳನ್ನುಸೃಷ್ಟಿಸಿಕೊಳ್ಳುವ ವೃತ್ತಿ ನೈಪುಣ್ಯತೆಯನ್ನು ತರಬೇತಿಗಳ ಮೂಲಕ ಕಲಿಸಿ ಕೊಡಲಾಗುವುದು ಎಂದರು.ಬೆಂಗಳೂರಿನ ನತೆಲ್ಲಾ ಇನೋವೇಷನ್‌ ಕಂಪ ನಿಯ ನಿರ್ದೇಶಕ ಎಂ.ಪ್ರದೀಪ್‌ ಶ್ರೀ ಸಿದ್ಧಾರ್ಥ ಎಂಜಿನಿಯರಿಂಗ್‌ ಕಾಲೇಜಿನ ಪ್ರಾಂಶುಪಾಲಡಾ.ರವಿಪ್ರಕಾಶ್‌, ಸಾಹೇ ವಿಶ್ವವಿದ್ಯಾನಿಲಯದ ಕುಲಸಚಿವ ಡಾ. ಎಮ್‌.ಝೆಡ್‌.ಕುರಿಯನ್‌ ಮಾತನಾಡಿದರು.

ತ ‌ರಬೇತಿ ಕಾರ್ಯಕ್ರಮದ ಸಂಯೋಜಕ ಡಾ. ಎಂ.ಸಿ. ಚಂದ್ರಶೇಖರ್‌ ಹಾಗೂ ಪ್ರಾಧ್ಯಾಪಕರಾದ ಎಂ.ಸುಷ್ಮಾ ಅವರು ರೊಬೋಟಿಕ್‌ ಪ್ರೋಸಸ್‌ ಆಟೊಮೇಷನ್‌ ಕೇಂದ್ರದ ‌ ಕಾರ್ಯನಿರ್ವಹಣೆಯ ಮುನ್ನೋಟಗಳನ್ನು ವಿವ ರಿಸಿದರು. ಎಲೆಕ್ಟ್ರಾನಿಕ್ಸ್‌ ಮತ್ತು ಕಮ್ಯೂನಿಕೇಷನ್‌ ಹಾಗೂ ಮಾಹಿತಿ ತಂತ್ರಜ್ಞಾನ ವಿಭಾಗದ ಪ್ರಾಧ್ಯಾಪಕರುಗಳಾದ ‌ ಎಚ್‌.ಸಿ. ‌ರಶ್ಮಿ, ಎನ್‌ .ಪ್ರದೀಪ್‌, ನಿರ್ಮಲ.ಜಿ, ಪ್ರಿಯಾಂಕ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next