Advertisement
ಗ್ರಂಥಾಲಯಕ್ಕೆ ಆಗಮಿಸುವ ಓದುಗರಿಗೆ ಥರ್ಮಲ್ ಸ್ಕ್ಯಾನಿಂಗ್ ಮಾಡಲಾಯಿತು. ಗ್ರಂಥಾಲಯದ ಸಹಾಯಕ ಮಂಜುನಾಥ್ ಮಾತನಾಡಿ, ಲಾಕ್‌ಡೌನ್ ಸಮಯದಲ್ಲಿ ಸಾರ್ವಜನಿಕ ಗ್ರಂಥಾಲಯ ಮುಚ್ಚಲಾಗಿತ್ತು. ಗ್ರಂಥಾಲಯದ ಉಪನಿರ್ದೇಶಕಿ ಸರೋಜಮ್ಮ ಮಾರ್ಗದರ್ಶನದಲ್ಲಿ ಮುಚ್ಚಿದ್ದ ಗ್ರಂಥಾಲಯದ ಬಾಗಿಲು ತೆರೆಯಲಾಗಿದೆ ಎಂದು ಹೇಳಿದರು.
Related Articles
Advertisement
ಹಾಲು ನೀಡದ ಡೇರಿ: ಪರಿಶೀಲನೆ : ದೇವನಹಳ್ಳಿ: ತಾಲೂಕಿನ ಸಾವಕನಹಳ್ಳಿ ಡೇರಿಯಿಂದ ಹಾಲು ನೀಡುತ್ತಿಲ್ಲ. ಡೇರಿ ಜಾಗದಲ್ಲಿ ಓಡಾಡಲು ಅವಕಾಶ ಕೊಡುತ್ತಿಲ್ಲ ಎಂದು ಆರೋಪಿಸಿ ಗ್ರಾಮದ 5 ಕುಟುಂಬ ಬೆಂಗಳೂರು ಕೇಂದ್ರ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯಕ್ಕೆ ದೂರು ನೀಡಿದ ಹಿನ್ನೆಲೆಯಲ್ಲಿ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಆರಕ್ಷಕ ಉಪನಿರೀಕ್ಷಕ ಶ್ರೀನಿವಾಸ್ ನೇತೃತ್ವದಲ್ಲಿ ಸ್ಥಳ ಪರಿಶೀಲನೆ ನಡೆಯಿತು.
ದೇವನಹಳ್ಳಿ ತಾಲೂಕಿನ ವಿಶ್ವನಾಥಪುರ ಠಾಣಾ ವ್ಯಾಪ್ತಿಯ ಸಾವಕನಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಆವರಣದಲ್ಲಿ ಪಿಎಸ್‌ಐ ಶ್ರೀನಿವಾಸ್ ಮಾತನಾಡಿ, ಈ ಗ್ರಾಮದ ಮುನಿಆಂಜಿನಪ್ಪ ಎಂಬವರು ನೀಡಿದ ದೂರಿನ ಅನ್ವಯಗ್ರಾಮದಲ್ಲಿ ನೈಜ ಘಟನೆ ವರದಿ ಮಾಡಲಾಗಿದ್ದು ಮೇಲಧಿಕಾರಿಗಳಿಗೆ ಸಲ್ಲಿಸಲಾಗುತ್ತದೆ. ಆರೋಪ ಸಾಬೀತಾಗಿ ಪ್ರಕರಣ ದಾಖಲಾದರೆ, 3-6ತಿಂಗಳವರೆಗೆ ಜಾಮೀನು ಸಿಗದ ಕಠಿಣ ಶಿಕ್ಷೆ ಇದೆ. 7ವರ್ಷಕ್ಕಿಂತ ಹೆಚ್ಚು ಕಾಲ ಕಠಿಣ ಶಿಕ್ಷೆ ಇದೆ ಎಂದು ಹೇಳಿದರು.
ಗ್ರಾಮಸ್ಥೆ ಲಕ್ಷ್ಮಮ್ಮ ಮಾತನಾಡಿ, ನಮಗೆ 2 ತಿಂಗಳಿನಿಂದ ಡೇರಿಯಿಂದ ಹಾಲು ನೀಡುತ್ತಿಲ್ಲ. ವಿಶ್ವನಾಥಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಲು ಹೋದರೆ ದೂರು ಸ್ವೀಕರಿಸುತ್ತಿಲ್ಲ. ಮಗುವಿಗೂ ಹಾಲು ನೀಡುತ್ತಿಲ್ಲ. ಬೇರೆಯವರನ್ನು ಕಳುಹಿಸಿದರೂ ಅವರಿಗೆ ಹಾಕಬೇಡಿ ಎಂದು ವಾಪಸ್ ಕಳುಹಿಸುತ್ತಾರೆಂದರು.ಎಂಪಿಸಿಎಸ್ ಅಧ್ಯಕ್ಷ ಎಸ್. ಪಿ.ಮುನಿರಾಜು, ಈ ಹಿಂದೆ ಡೇರಿ ಮೇಲೆ ಮೊದಲ ಅಂತಸ್ತು ಕಟ್ಟಲಾಗುತ್ತಿದೆ. ಅರ್ಜಿದಾರರು ಕರಾರು ತೆಗೆದಿದ್ದರು ಎಂದು ದೂರಿದ್ದಾರೆ. ಡೇರಿ ಸಂಬಂಧ ಯಾವುದೇ ಒಬ್ಬ ಅರ್ಜಿ ಹಾಕಿಕೊಂಡಿದ್ದರೆ, ಹಾಲು ಕೊಡಲು ಬರುವುದಿಲ್ಲ ಎಂಬುದು ಬೈಲಾದಲ್ಲಿದೆ. ಮುಂದಿನ ಹಂತದಲ್ಲಿ ಡೇರಿ ತೀರ್ಮಾನ ತೆಗೆದುಕೊಳ್ಳಲಾಗುವುದೆಂದು ತಿಳಿಸಿದರು.