Advertisement
ಈ ಭಾಗದಲ್ಲಿ ಸ.ಪ.ಪೂ. ಕಾಲೇಜು, ಸರಕಾರಿ ಪ್ರೌಢಶಾಲೆ, ಸ.ಪ್ರ.ದ.ಕಾಲೇಜು ಹಾಗೂ ಸಮುದಾಯ ಆರೋಗ್ಯ ಕೇಂದ್ರಕ್ಕೆ ಹೋಗುವ ನೂರಾರು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ದಿನಾ ಇದೇ ತಂಗುದಾಣದ ಬಳಿ ನಿಲ್ಲುವ ಬಸ್ಸು ಏರಿ ಹೋಗಬೇಕಾಗುತ್ತದೆ. ಆದರೆ ತಂಗುದಾಣವೇ ಭಿಕ್ಷುಕರ ತಾಣವಾಗಿ, ಒಳಗೆ ಕಸಕಡ್ಡಿ, ಪೊದೆ ತುಂಬಿ ಕೊಂಡಿದೆ. ಪ್ರಯಾಣಿಕರಿಗೆ ನಿಲ್ಲಲು ಅನುಕೂಲವಾಗುವಂತೆ ನಿರ್ಮಿಸಿದ ತಂಗುದಾಣದಲ್ಲಿ ನಿಲ್ಲಲಾರದೆ ಮರದಡಿಯಲ್ಲಿ ನಿಂತು ಆಶ್ರಯ ಪಡೆಯುವ ಪರಿಸ್ಥಿತಿ ಪ್ರಯಾಣಿಕರರಿಗೆ ಬಂದೊದಗಿದೆ.
ಬಸ್ ತಂಗುದಾಣದ ಬಗ್ಗೆ ನಮಗೆ ದೂರು ಬಂದಿದೆ. ಈ ಬಸ್ ತಂಗು ದಾಣದಲ್ಲಿ ಕುಳಿತರೆ ಬಸ್‌ಗಳು ಬರುವುದು ಕಾಣುವುದಿಲ್ಲವಾದ್ದರಿಂದ ಬದಲಿ ತಂಗುದಾಣದ ವ್ಯವಸ್ಥೆಯನ್ನು ಮಾಡಲಾಗುವುದು. ಗ್ರಾ.ಪಂ. ಅನುದಾನದಿಂದ ಈಗಾಗಲೇ ಇರುವ ಬಸ್ ತಂಗುದಾಣದ ಎದುರು ನೂತನ ಬಸ್ ತಂಗುದಾಣ ಶೀಘ್ರದಲ್ಲಿ ಆಗಲಿದ್ದು ಸಮಸ್ಯೆ ಬಗೆಹರಿಯಲಿದೆ.
-ಸುಧಾಕರ ಹೆಗ್ಡೆ, ಅಧ್ಯಕ್ಷರು, ಗ್ರಾ.ಪಂ. ಹೆಬ್ರಿ