Advertisement
ಮಲಗುವ ಕೋಣೆಯ ಸ್ವಚ್ಛತೆ ಹಾಗೂ ಅದರ ಅಲಂಕಾರ ಮನಸ್ಸಿಗೆ ಮುದ ನೀಡುವಂತಿರಬೇಕು. ಮಲಗುವ ಕೋಣೆಯನ್ನು ಸುಸಜ್ಜಿತವಾಗಿಟ್ಟುಕೊಂಡರೆ ದಣಿದು ಬಂದ ಮನಸ್ಸಿಗೆ ಸಮಾಧಾನ, ಒಂದಿಷ್ಟು ಚೈತನ್ಯ ಹಾಗೂ ಉತ್ಸಾಹ ಭಾವನೆ ಸೃಷ್ಟಿಯಾಗುತ್ತದೆ. ಅದೇ ಮಲಗುವ ಕೋಣೆಯು ಆಸಕ್ತಿದಾಯಕವಾಗಿಲ್ಲ ಅಥವಾ ಸ್ವಚ್ಛತೆಯಿಂದ ಕೂಡಿಲ್ಲ ಎಂದಾದರೆ ಒಂದು ಬಗೆಯ ಬೇಸರ ಹಾಗೂ ಕಿರಿಕಿರಿಯ ಭಾವನೆ ಕಾಡಬಹುದು. ಹಾಗಾಗಿ ಈ ಕೋಣೆಯನ್ನು ಸುಂದರವಾಗಿಸಿಕೊಳ್ಳುವುದು ಉತ್ತಮ.
ಕೋಣೆಯ ಗೋಡೆಗಳಲ್ಲಿ ಕೆಲ ಆಸಕ್ತಿದಾಯಕ ಚಿತ್ರಗಳ ಜೋಡಣೆ ಮಾಡುವುದರಿಂದ ಮನಸ್ಸು ಶಾಂತ ಹಾಗೂ ವಿನೋದದಿಂದ ಕೂಡಿರುತ್ತದೆ. ಮಾರುಕಟ್ಟೆಯಲ್ಲಿ ಲಭ್ಯವಿರುವ ಆಲಂಕಾರಿ ವಸ್ತುಗಳನ್ನು ಸೂಕ್ತ ರೀತಿಯಲ್ಲಿ ಬಳಸಿಕೊಂಡು ಹೊಸ ಮೆರುಗು ನೀಡಬಹುದು. ಬೆಡ್ ಶೀಟ್ ಬಳಕೆ
ಋತುಗಳಿಗೆ ಅನುಗುಣವಾಗಿ ಬೆಡ್‌ಶೀಟ್‌ಗಳನ್ನು ಬದಲಿಸಿಕೊಳ್ಳಬೇಕು. ಆಗ ಮಲಗುವ ಕೋಣೆಯ ಕೇಂದ್ರಬಿಂದುವಾದ ಹಾಸಿಗೆ ಅಥವಾ ಬೆಡ್ ಆಕರ್ಷಕವಾಗಿ ಕಾಣುವುದು. ಜತೆಗೆ ಬೆಚ್ಚನೆಯ ಅನುಭವ ನೀಡುವುದು. ಹೂವಿನ ಮುದ್ರಣ ಇರುವ ಬೆಡ್‌ಶೀಟ್‌ಗಳು ಹಾಗೂ ಕೆಲವು ನಿಮ್ಮ ಮೆಚ್ಚಿನ ಬಣ್ಣಗಳ ಬೆಡ್‌ಶೀಟ್ ಒಂದಿಷ್ಟು ಖುಷಿಯನ್ನು ನೀಡುವುದು.
Related Articles
ಕೆಲವರಿಗೆ ಅನಗತ್ಯ ವಸ್ತುಗಳನ್ನು ಮಲಗುವ ಕೋಣೆಯಲ್ಲಿ ಜೋಡಿಸಿಡುವ ಹವ್ಯಾಸ ಇರುತ್ತದೆ. ಇದರಿಂದ ಮಲಗುವ ಕೋಣೆಯ ನೋಟ ಹಾಳಾಗುವುದು. ಜತೆಗೆ ನಿತ್ಯ ಕಿರಿಕಿರಿ ಉಂಟು ಮಾಡುತ್ತದೆ. ಹಾಗಾಗಿ ಅನಗತ್ಯ ವಸ್ತುಗಳನ್ನು ಹೊರಹಾಕಿ.
Advertisement
ಪ್ರತಿದಿನ ಸ್ವಚ್ಛಗೊಳಿಸಿಮಲಗುವ ಕೋಣೆ ಮಲಗಲು ಮಾತ್ರ ಸೀಮಿತವಾಗಿರುವುದಿಲ್ಲ. ವೈಯಕ್ತಿಕ ಕೆಲಸಗಳಿಗೆ ಹೆಚ್ಚಿನವರು ಮಲಗುವ ಕೋಣೆಗಳನ್ನು ಉಪಯೋಗಿಸುತ್ತಾರೆ. ಹೀಗಾಗಿ ಮಲಗುವ ಕೋಣೆ ಎಂದೂ ಸ್ವಚ್ಛವಾಗಿರಬೇಕು. ಒಳಾಂಗಣ ಗಿಡಗಳ ಜೋಡಣೆ
ಒಳಾಂಗಣ ಗಿಡವನ್ನು ಮಲಗುವ ಕೋಣೆಯಲ್ಲಿ ಜೋಡಿಸುವುದರಿಂದ ಎರಡು ಉಪಯೋಗವನ್ನು ಪಡೆದುಕೊಳ್ಳಬಹುದು. ಒಂದು ಕೋಣೆಗೆ ಸುಂದರ ನೋಟವನ್ನು ನೀಡುವುದು. ಇನ್ನೊಂದು ಕಾರಣ ತಾಜಾ ಗಾಳಿ ಕೋಣೆಯ ಒಳಗೆ ಸುಳಿದಾಡುವುದು. ಜತೆಗೆ ಗಾಳಿಯನ್ನು ಶುಚಿಗೊಳಿಸುವುದು. ಸೂಕ್ತವಾದ ಒಳಾಂಗಣ ಗಿಡಗಳ ಆಯ್ಕೆ ಮಾಡಿಕೊಂಡರೆ ಋಣಾತ್ಮಕ ಶಕ್ತಿಯನ್ನು ದೂರ ಮಾಡಬಹುದು. •ಕಾರ್ತಿಕ್ ಚಿತ್ರಾಪುರ