Advertisement

ಗಡ್ಡದ ಹುಡುಗಿ

08:43 AM Sep 19, 2019 | mahesh |

ಹರ್‌ನಾಮ್‌ ಕೌರ್‌, ಭಾರತೀಯ ಮೂಲದ ಇಂಗ್ಲೆಂಡ್‌ ನಿವಾಸಿ. 29 ವರ್ಷದ ಈ ಯುವತಿಯ ಹೆಸರು 2015ರಲ್ಲಿ ಗಿನ್ನೆಸ್‌ ಪುಸ್ತಕಕ್ಕೆ ಸೇರಿತು. “ಅತಿ ಉದ್ದ ಗಡ್ಡ ಹೊಂದಿರುವ ಜಗತ್ತಿನ ಕಿರಿಯ ಮಹಿಳೆ’ ಎಂಬ ದಾಖಲೆ ಅವಳ ಹೆಸರಿನಲ್ಲಿದೆ. “ಏನಂದ್ರೀ? ಗಡ್ಡ ಇರುವ ಹುಡುಗೀನಾ?’ ಅಂತ ಅಚ್ಚರಿಯಾಗಬೇಡಿ. ಹೌದು, ಗಡ್ಡವೇ!

Advertisement

ಹರ್‌ನಾಮ್‌ಗೆ 11 ವರ್ಷವಾಗಿದ್ದಾಗ ಮುಖದ ಮೇಲೆ ಕೂದಲು ಬೆಳೆಯತೊಡಗಿತು. ಆಗ ಎಲ್ಲ ಹುಡುಗಿಯರಂತೆ ಆಕೆ ಕೂಡಾ ಹೆದರಿಕೊಂಡಳು. ಯಾರಿಗೂ ಗೊತ್ತಾಗಬಾರದೆಂದು ಕದ್ದು ಮುಚ್ಚಿ ಶೇವ್‌ ಮಾಡಿದಳು, ವ್ಯಾಕ್ಸಿಂಗ್‌ನ ಮೊರೆ ಹೋದಳು. ಆದರೆ, ಕೈ,ಕಾಲು, ಮುಖ, ಎದೆ ಮೇಲೆಲ್ಲಾ ರೋಮಗಳು ಬೆಳೆಯತೊಡಗಿದಾಗ ಅದನ್ನು ಮುಚ್ಚಿಡುವುದು ಆಕೆಗೆ ಸಾಧ್ಯವಾಗಲಿಲ್ಲ.ಆ ಸಂದರ್ಭದಲ್ಲಿ ಹರ್‌ನಾಮ್‌ ಅನುಭವಿಸಿದ ಯಾತನೆ, ಅವಮಾನ ಅಷ್ಟಿಷ್ಟಲ್ಲ. ಕೊನೆಗೆ ಡಾಕ್ಟರ್‌ ಬಳಿ ಹೋದಾಗ ಗೊತ್ತಾಯ್ತು ಆಕೆಗೆ ಪಿಸಿಓಎಸ್‌ ಸಮಸ್ಯೆ ಇದೆ ಎಂದು. ವಾಸ್ತವವನ್ನು ಒಪ್ಪಿಕೊಂಡ ಹರ್‌ನಾಮ್‌ ಆ ದಿನ ಒಂದು ನಿರ್ಧಾರಕ್ಕೆ ಬಂದಳು. ಅದೇನೆಂದರೆ, ಇನ್ಮುಂದೆ ಶೇವ್‌ ಮಾಡುವುದಿಲ್ಲ, ಗಂಡಸರಂತೆ ಉದ್ದ ಗಡ್ಡ ಬಿಡುತ್ತೇನೆ ಎಂದು!

“ಸಮಾಜದ ಪ್ರಕಾರ ಹೆಣ್ಣಿನ ಸೌಂದರ್ಯದ ಮಾನದಂಡ ಏನೇ ಇರಲಿ. ನಾನು ನನ್ನ ಮೀಸೆ, ಗಡ್ಡವನ್ನು ಪ್ರೀತಿಸುತ್ತೇನೆ. ಆ ಕುರಿತು ಖಂಡಿತಾ ನನಗೆ ಕೀಳರಿಮೆ ಇಲ್ಲ. ಯಾವ ಕಾರಣದಿಂದ ಜನ ನನ್ನನ್ನು ವಿಚಿತ್ರವಾಗಿ ನೋಡುತ್ತಿದ್ದರೋ, ಅದೇ ಕಾರಣಕ್ಕೆ ಗಿನ್ನೆಸ್‌ ದಾಖಲೆ ಮಾಡಿದ್ದೇನೆ ಎಂಬ ಹೆಮ್ಮೆಯಿಂದೆ’ ಅಂತಾಳೆ ಹರ್‌ನಾಮ್‌ ಕೌರ್‌.

Advertisement

Udayavani is now on Telegram. Click here to join our channel and stay updated with the latest news.

Next