Advertisement

ಕಂದಮ್ಮಗಳ ಜೀವ ಉಳಿಸಲು ವ್ಯಾಘ್ರನೊಂದಿಗೆ ಸೆಣಸಾಡಿದ ಕರಡಿ!

01:39 PM Feb 07, 2023 | Team Udayavani |

ಹುಣಸೂರು: ತಾಯಿ ಕರಡಿಯೊಂದು ತನ್ನ ಪುಟ್ಟ ಕಂದಮ್ಮಗಳನ್ನು ಹುಲಿ ಬಾಯಿಂದ ರಕ್ಷಿಸಿಕೊಳ್ಳಲುಸೆಣಸಾಡಿ ವ್ಯಾಘ್ರನನ್ನೇ ಹಿಮ್ಮೆಟ್ಟಿಸಿರುವ ಅಪರೂಪದ ಘಟನೆ ನಾಗರಹೊಳೆ ಉದ್ಯಾನದಲ್ಲಿ ನಡೆದಿದ್ದು ಪ್ರವಾಸಿಗರು ದೃಶ್ಯವನ್ನು ಸೆರೆ ಹಿಡಿದಿದ್ದಾರೆ.

Advertisement

ವನ್ಯ ಪ್ರಿಯರಲ್ಲಿ ಸಂತಸ: ಉದ್ಯಾನದಲ್ಲಿ ಕಳೆದ ಶನಿವಾರ ನಾಗರಹೊಳೆ ಸಫಾರಿಗೆ ತೆರಳಿದ್ದ ವೇಳೆ ಪ್ರವಾಸಿಗರಿಗೆಮೊದಲು ತಾಯಿಯೊಂದಿಗೆ ತೆರಳುತ್ತಿದ್ದ ಎರಡು ಕರಡಿಮರಿಗಳನ್ನು ವೀಕ್ಷಿಸಿ, ಕಣ್ತುಂಬಿಕೊಳ್ಳುತ್ತಿದ್ದರು. ಈವೇಳೆಯೇ ಹಿಂದಿನಿಂದ ಬಂದ ಹುಲಿ, ಒಮ್ಮೆಲೆ ಮರಿಗಳಮೇಲೆ ದಾಳಿಗೆ ಮುಂದಾಗುತ್ತಿ ದ್ದಂತೆ ಎಚ್ಚೆತ್ತ ತಾಯಿಕರಡಿ, ಒಮ್ಮೆಲೆ ಹುಲಿ ಮೇಲೆರಗುತ್ತಿದ್ದಂತೆ ಬೆದರಿದ ಹುಲಿ,ಪರಾರಿಯಾಯಿತು. ಆದರೂ, ಬಿಡದ ಕರಡಿ ಅಟ್ಟಿಸಿಕೊಂಡು ಹೋಯಿತು. ಈ ದೃಶ್ಯ ಜಾಲತಾಣದಲ್ಲಿ ಹರಿದಾಡುತ್ತಿದ್ದು, ವನ್ಯಪ್ರಿಯರಲ್ಲಿ ಸಂತಸ ಇಮ್ಮಡಿಗೊಳಿಸಿದೆ.

ಉದ್ಯಾನದ ಎಲ್ಲಾ ವಲಯಗಳಲ್ಲಿ ಆಗಾಗ್ಗೆ ಪ್ರವಾಸಿಗರಿಗೆ ಕಾಡಂಚಿನ ಗ್ರಾಮಸ್ಥರಿಗೆ ಹುಲಿಗಳು ದರ್ಶನ ನೀಡುತ್ತಿವೆ.ಆದರೆ, ಕರಡಿಗಳು ಮಾತ್ರ ನಾಗರಹೊಳೆ ವಲಯ,ಅಂತರಸಂತೆ, ಡಿ.ಬಿ.ಕುಪ್ಪೆ, ಕಲ್ಲಹಳ್ಳ ವಲಯದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು, ಈ ಮಾರ್ಗದಲ್ಲಿ ತೆರಳುವಪ್ರಯಾಣಿಕರೂ ಹುಲಿ, ಆನೆ, ಕರಡಿಗಳನ್ನು ಕಂಡುಸಂತಸದಿಂದ ತೆರಳುತ್ತಿದ್ದರು. ಈ ದೃಶ್ಯವನ್ನು ಸಂತೋಷ್‌ಎಂಬವರು ವಿಡಿಯೋ ಮಾಡಿದ್ದು, ವನ್ಯಜೀವಿ ಛಾಯಾಗ್ರಾಹಕ ರವಿಶಂಕರ್‌ ಮೂಲಕ ಕಳುಹಿಸಿದ್ದಾರೆ.

ಸಿಬ್ಬಂದಿ ಕಾರ್ಯ ಶ್ಲಾಘನೀಯ: ನಾಗರಹೊಳೆ ಉದ್ಯಾನದಲ್ಲಿ 843 ಚ.ಕಿ.ಮೀ ಇದ್ದು, ಸಿಬ್ಬಂದಿಜತನದಿಂದ ಕಾರ್ಯ ನಿರ್ವಹಿಸುತ್ತಿರುವುದರಿಂದವನ್ಯಪ್ರಾಣಿಗಳ ಸಂಖ್ಯೆ ಹೆಚ್ಚುತ್ತಿವೆ. ಕಳೆದ ಬಾರಿಯ ಹುಲಿಗಣತಿ ವೇಳೆ ಸುಮಾರು 135ಕ್ಕೂ ಹೆಚ್ಚುಹುಲಿಗಳಿರಬಹುದೆಂದು ಅಂದಾಜಿಸಲಾಗಿದೆ. ಈ ಬಾರಿಯೂ ಗಣತಿ ನಡೆದಿದ್ದು, ಅಧಿಕೃತವಾಗಿ ಸಂಖ್ಯೆಯನ್ನು ಇಲಾಖೆ ಘೋಷಣೆ ಮಾಡಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next