Advertisement

ಸ್ನಾನಕ್ಕಿಳಿದ ಸಹೋದರರು ನೀರುಪಾಲು

08:25 AM Sep 06, 2017 | Harsha Rao |

ಸವಣೂರು: ಕುದ್ಮಾರು ಗ್ರಾಮದ ಶಾಂತಿಮೊಗರು ಬಳಿ ಕುಮಾರಧಾರಾ ನದಿಗೆ ಸ್ನಾನಕ್ಕಿಳಿದ ಸಹೋದರರು ನೀರುಪಾಲಾದ ಘಟನೆ ಮಂಗಳವಾರ ಸಂಜೆ ಸಂಭವಿಸಿದೆ. ಇಬ್ಬರೂ ಕಣ್ಮರೆಯಾಗಿದ್ದಾರೆ. 

Advertisement

ಕಡಬ ಕುಟ್ರಾಪ್ಪಾಡಿ ಗ್ರಾಮದ ಅಲರ್ಮೆ ದಿ| ಚೆನ್ನಪ್ಪ ಪೂಜಾರಿ ಅವರ ಪುತ್ರರಾದ ಹರಿಪ್ರಸಾದ್‌ (30) ಹಾಗೂ ಸತ್ಯಪ್ರಸಾದ್‌(25) ನೀರುಪಾಲಾದವರು. ಜತೆಗಿದ್ದ ಅವರ ಚಿಕ್ಕಪ್ಪನ ಮಗ ರೋಹಿತ್‌ ಅಪಾಯದಿಂದ ಪಾರಾಗಿದ್ದಾರೆ.

ಸೋಮವಾರ ಮೂವರೂ ಏನೆಕಲ್ಲಿನ ಚಿಕ್ಕಮ್ಮನ ಮನೆಗೆ ಕಾರ್ಯ ಕ್ರಮಕ್ಕೆಂದು ಹೋಗಿದ್ದು ಮಂಗಳ ವಾರ ಶಾಂತಿಮೊಗರು ಮೂಲಕ ಕಡಬಕ್ಕೆ ತೆರಳುತ್ತಿದ್ದವರು ಕುದ್ಮಾರು ಗ್ರಾಮದ ಶಾಂತಿಮೊಗರು ಸೇತುವೆ ಬಳಿ ಸ್ನಾನಕ್ಕೆಂದು ಮೂವರು ನೀರಿ ಗಿಳಿದಿದ್ದರು. ಮೂವರು ಜತೆಯಾಗಿ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದರು. ಸ್ನಾನ ಮಾಡುತ್ತಿದ್ದಾಗ ಹರಿಪ್ರಸಾದ್‌ ಅವರು ನೀರಿನ ಸುಳಿಗೆ ಸಿಲುಕಿದಾಗ ಅಪಾಯ ಅರಿತ ಸತ್ಯಪ್ರಸಾದ್‌ ಅವರು ಅಣ್ಣ ನನ್ನು ಉಳಿಸಲು ರಕ್ಷಿಸಲು ಮುಂದಾ ದರು. ಆದರೆ ಅವರಿಗೂ ಸುಳಿಯಿಂದ ಮೇಲೆ ಬರಲು ಆಗಲಿಲ್ಲ. ಇದನ್ನು ಕಂಡ ರೋಹಿತ್‌ ಕೂಡ ರಕ್ಷಣೆಗೆ ಮುಂದಾದರೂ ನೀರಿನ ಆಳದಿಂದಾಗಿ ಅಸಾಧ್ಯವಾಗಿ ಹಿಂದಕ್ಕೆ ಸರಿದರು. 

ನೀರುಪಾಲಾದವರ ಪತ್ತೆಗಾಗಿ ಸ್ಥಳೀಯ ಈಜುಗಾರರು ಪ್ರಯತ್ನ ಪಡು ತ್ತಿದ್ದಾರೆ. ಅಗ್ನಿ ಶಾಮಕ ದಳ, ಬೆಳ್ಳಾರೆ ಠಾಣಾಧಿ ಕಾರಿ ಚೆಲುವಯ್ಯ ಹಾಗೂ ಸಿಬಂದಿ ವರ್ಗ ಸಹಕರಿಸು ತ್ತಿದ್ದಾರೆ.

ಹರಿಪ್ರಸಾದ್‌ ಕಡಬದಲ್ಲಿ ಟೈಲ ರಿಂಗ್‌ ವೃತ್ತಿ ಯೊಂದಿಗೆ, ರಾತ್ರಿ ಪಾಳಿ ಯಲ್ಲಿ ಬಿಎಸ್‌ಎನ್‌ಎಲ್‌ ಕಚೇರಿ ಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಇವರ ಪತ್ನಿ ಕಡಬ ಗ್ರಾಮ ಕರಣಿಕರ ಕಚೇರಿಯಲ್ಲಿ ತಾತ್ಕಾಲಿಕ ನೆಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರಿಗೆ ಮೂರೂವರೆ ವರ್ಷದ ಪುತ್ರನಿದ್ದಾನೆ.

Advertisement

ಬೆಂಗಳೂರಿನಲ್ಲಿ ಉದ್ಯೋಗದಲ್ಲಿ ರುವ ಸತ್ಯಪ್ರಸಾದ್‌ ಸೋಮವಾರ ಬಂದಿದ್ದು ಬುಧವಾರ ವಾಪಸಾಗು ವವರಿದ್ದರ‌ು. 
ರವಿವಾರ ನೀರುಪಾಲಾದವನ ಮೃತದೇಹ ಪತ್ತೆ ಸೆ. 3ರಂದು ಸೇತುವೆಯಿಂದ ಸುಮಾರು 500 ಮೀ. ಕೆಳಗಡೆ ನೀರುಪಾಲಾಗಿದ್ದ, ಸ್ಥಳೀಯವಾಗಿ ಕೂಲಿಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ಮಂಗಳೂರಿನ ಗಂಜಿಮಠದ ಹರಿಶ್ಚಂದ್ರ (31) ಅವರ ಮೃತದೇಹ ಮಂಗಳವಾರ ಪತ್ತೆಯಾಗಿದೆ ದೇಹ ಪತ್ತೆಗಾಗಿ ಉಪ್ಪಿನಂಗಡಿಯ ಮುಳುಗುತಜ್ಞ ಮಹಮ್ಮದ್‌ ಬಂದಾರ್‌ರೊಂದಿಗೆ ಸ್ಥಳೀಯ ಯುವಕರು  ಶೋಧ ಕಾರ್ಯಾಚರಣೆ ನಡೆಸಿದ್ದರು. 

ತಡೆಗೋಡೆ ಇಲ್ಲದೆ ಅಪಾಯ
ಶಾಂತಿಮೊಗರಲ್ಲಿ  ಬೇರೆ ಊರಿನಿಂದ ಬಂದ ಯುವಕರು ನೀರು ಪಾಲಾಗು ತ್ತಿದ್ದು ಸ್ಥಳೀಯರನ್ನು ಚಿಂತೆಗೀಡುಮಾಡಿದೆ. ನೀರಿಗೆ ಇಳಿಯದ ಹಾಗೆ ತಡೆಗೋಡೆ ನಿರ್ಮಾಣ ಮಾಡಬೇಕೆನ್ನುವ ಮಾತು ಕೇಳಿಬರುತ್ತಿದೆ. ಸೇತುವೆ ನಿರ್ಮಾಣವಾದ ಬಳಿಕ ಸೇತುವೆ ಮೇಲೆ ದ್ವಿಚಕ್ರ ಸವಾರರು ವ್ಹೀಲಿಂಗ್‌ ಮಾಡುತ್ತಿರುವುದು, ಸೇತುವೆ ಮೇಲೆಯೇ ವಾಹನ ನಿಲ್ಲಿ ಸುವುದು ಸಾರ್ವಜನಿಕರ ಅಸಮಾಧಾನಕ್ಕೂ ಕಾರಣವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next