Advertisement
ಬೆಳ್ತಂಗಡಿ ತಾಲೂಕಿನ ಬೆದ್ರಬೆಟ್ಟು ಮರಿ ಯಾಂಬಿಕಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಧ್ಯಾಹ್ನ ಭೋಜನದ ವಿರಾಮ ಆಕಾಶ ವಾಣಿ ಕೇಂದ್ರವಾಗಿ ಬದಲಾಗುತ್ತಿದೆ. ಪ್ರತಿ ತರಗತಿಯ ವಿದ್ಯಾರ್ಥಿಗಳಿಗೆ ಇಲ್ಲಿ, ಹಾಡು, ಮಾತುಗಾರಿಕೆ, ಹಾಸ್ಯ ಅಥವಾ ತಮ್ಮ ಮನಸ್ಸಿಗೆ ತೋಚಿದ ಪ್ರತಿಭೆಯನ್ನು ಅನಾವರಣಗೊಳಿಸಲು ಸದಾವಕಾಶ ನೀಡಲಾಗುತ್ತಿದೆ.
Related Articles
ಮಕ್ಕಳು ಮಧ್ಯಾಹ್ನದ ಭೋಜನ ಮುಗಿಸಿ ಶಾಲೆಯ ಕಾರಿಡಾರ್‌ನಲ್ಲಿ ಹಾಕಿರುವ ಮೈಕ್ ಹಿಡಿದು ತಮ್ಮ ಪ್ರತಿಭೆಯನ್ನ ಬಿತ್ತರಿಸುತ್ತಾರೆ. ಪ್ರತೀ ತರಗತಿಗೆ ಸ್ಪೀಕರ್‌ಗಳನ್ನು ಅಳವಡಿಸಿದ್ದರಿಂದ ಇತರ ಮಕ್ಕಳು ಅವುಗಳನ್ನು ಇದ್ದಲ್ಲಿಯೇ ಕೇಳಲು ಅನುಕೂಲವಾಗಿದೆ. ಕೋವಿಡ್ ಸಮಯದಲ್ಲಿ ಸಮಸ್ಯೆಯಾದರೂ ಬಳಿಕ ಪುನರಾರಂಭವಾಯಿತು.
Advertisement
ಮಕ್ಕಳ ಬಾನುಲಿ ಪ್ರಸಾರ ಸಾರ್ವಜನಿಕ ಶಿಕ್ಷಣ ಇಲಾಖೆಯ ಗಮನವನ್ನು ಸೆಳೆದಿದ್ದು, ಈ ಕುರಿತು ಶಾಲೆಗೆ ಭೇಟಿ ನೀಡಿದ ಬೆಳ್ತಂಗಡಿ ತಾಲೂಕಿನ ಸಂಪನ್ಮೂಲ ಕೇಂದ್ರದ ಸಂಯೋಜಕ ಶಂಭು ಶಂಕರ್ ಅವರು ಹೇಳುವಂತೆ ಶಾಲಾ ಚಟುವಟಿಕೆಯ ಭಾಗವಾಗಿ ವಿದ್ಯಾರ್ಥಿಗಳ ಬಿಡುವಿನ ವೇಳೆಯಲ್ಲಿ ಕೇಳುವ ಮತ್ತು ಮಾತನಾಡುವ ಕೌಶಲವನ್ನು ಸುಧಾರಿಸಲು ಉತ್ತಮ ವೇದಿಕೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಉತ್ತಮ ಫಲಿತಾಂಶತಾಲೂಕು ಕೇಂದ್ರದಿಂದ 16 ಕಿ.ಮೀ. ದೂರದ ಗ್ರಾಮೀಣ ಭಾಗದಲ್ಲಿರುವ ಈ ಶಾಲೆಯಲ್ಲಿ ಎಲ್ .ಕೆ.ಜಿ. ಯಿಂದ 10ನೇ ತರಗತಿವರೆಗೆ 500ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಒಟ್ಟು 14 ಶಿಕ್ಷಕರು, ಇಬ್ಬರು ಬೋಧಕೇತರ ಸಿಬಂದಿಯಿದ್ದಾರೆ. 1995ರಲ್ಲಿ ಆರಂಭವಾದ ಈ ಅನುದಾನ ರಹಿತ ಶಾಲೆ ಕಳೆದ ಎರಡು ಶೈಕ್ಷಣಿಕ ವರ್ಷಗಳಲ್ಲಿ ಎಸೆಸೆಲ್ಸಿಯಲ್ಲಿ ಶೇ.100 ಫಲಿತಾಂಶ ದಾಖಲಿಸಿದೆ. ಸಭಾಕಂಪನ ದೂರ
ವಿದ್ಯಾರ್ಥಿಗಳಲ್ಲಿರುವ ಸುಪ್ತ ಪ್ರತಿಭೆ ಹೊರ ಹೊಮ್ಮಲು ಹಾಗೂ ಸಣ್ಣ ವಯಸ್ಸಿನಲ್ಲೆ ಸಭಾಕಂಪನ ದೂರ ಮಾಡುವ ಉದ್ದೇಶದಿಂದ ಆರಂಭಿಸಿರುವ ಶಾಲಾ ಬಾನುಲಿ ಕೇಂದ್ರ ವಿದ್ಯಾರ್ಥಿಗಳ ಮೇಲೆ ಉತ್ತಮ ಪರಿಣಾಮ ಬೀರಿದೆ.
-ಸಿಸ್ಟರ್ ಲೀನಾ,ಮುಖ್ಯ ಶಿಕ್ಷಕಿ