Advertisement
ವಿಕಾಸಸೌಧದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಂದ್ ಮಾಡಲು ಸರ್ಕಾರ ಅನುಮತಿ ನೀಡುವುದಿಲ್ಲ. ನ್ಯಾಯಾಲಯ ಸಹ ಇದನ್ನು ಸಮ್ಮತಿಸುವುದಿಲ್ಲ. ಪ್ರತಿಭಟನೆ ನಡೆಸಲೂ ಪೊಲೀಸ್ ಅನುಮತಿ ಪಡೆಯಬೇಕಾಗುತ್ತದೆ. ಕಾನೂನು ಸುವ್ಯವಸ್ಥೆ ಹಾಗೂ ಸಮಾಜದ ಸ್ವಾಸ್ಥ್ಯದ ದೃಷ್ಟಿಯಿಂದ ನಿಗದಿತ ಸ್ಥಳ, ಸೀಮಿತ ಸ್ಥಳದಲ್ಲಿ ಶಾಂತಿಯುತವಾಗಿ ಪ್ರತಿಭಟನೆ,ರ್ಯಾಲಿ ನಡೆಸಬಹುದು. ಆದರೆ, ಕೇಂದ್ರ ಸಚಿವರು, ಸಂಸದರ ಮನೆಗಳು ಎದುರು ಪ್ರತಿಭಟನೆ ಅಥವಾ ಘೇರಾವ್ ನಡೆಸಬಾರದು. ಇದಕ್ಕೆ ಅವಕಾಶ ನೀಡುವುದಿಲ್ಲ ಎಂದರು.