Advertisement
ಇದಕ್ಕೂ ಮುಂಚೆ ಕೆ.ಜಿ ಬಾಳೆಹಣ್ಣಿಗೆ 8ರಿಂದ 10ರೂ. ಬೆಲೆಯಿತ್ತು. ಆದರೆ ಈಗ ಕೆಜಿಗೆ 2ರಿಂದ 3ರೂ.ಗೂ ಯಾರೂ ಕೇಳದಂತಾಗಿದೆ. ಹೀಗಾಗಿ ಲಕ್ಷಗಟ್ಟಲೆ ಖರ್ಚು ಮಾಡಿದ ಹಣ ನೀರಲ್ಲಿ ಹೋಮ ಮಾಡಿದಂತಾಗಿದೆ.
Related Articles
Advertisement
ಬಾಳೆಹಣ್ಣು ವರ್ಷದುದ್ದಕ್ಕೂ ಮಾರು ಕಟ್ಟೆಯಲ್ಲಿ ದೊರಕುತ್ತದೆ. ರೈತರ ಬಳಿ ಎರಡು ರೂ. ಕೆ.ಜಿಗೆ ಕೇಳದಂತಾದರೂ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಮಾತ್ರ ಕಡಿಮೆ ಬೆಲೆಗೆ ಸಿಗುತ್ತಿಲ್ಲ. ಮಾರುಕಟ್ಟೆಯಲ್ಲಿ 30ರಿಂದ 40ರೂ.ಗೆ ಮಾರಾಟವಾಗುತ್ತಿದೆ. ಆದರೆ ಇಲ್ಲಿ ರೈತರು ಹಾಗೂ ಗ್ರಾಹಕರು ಇಬ್ಬರೂ ಶೋಷಣೆಗೆ ಒಳಗಾಗುವಂತಾಗಿದೆ. ಈಗಂತೂ ಲಾಕ್‌ಡೌನ್ ಇಲ್ಲ. ಮಾರುಕಟ್ಟೆ ಯಥಾಸ್ಥಿತಿಯಲ್ಲಿದೆ. ಆದರೆ ಬೆಲೆ ಏಕೆ ಕುಸಿತವಾಗಿದೆ ಎಂಬುದೇ ತಿಳಿಯದಂತೆ ಆಗಿದೆ.
ಶಾಲೆಯಲ್ಲಿ ಬಾಳೆಹಣ್ಣು
ಮಕ್ಕಳಲ್ಲಿ ಪೌಷ್ಟಿಕಾಂಶ ಕಡಿಮೆಯಿದೆ ಎನ್ನುವ ಕಾರಣದ ಹಿನ್ನೆಲೆಯಲ್ಲಿ ದರ ಹೆಚ್ಚಳವಾಗಬೇಕಿತ್ತು. ಆದರೆ ಉಲ್ಟಾ ಎನ್ನುವಂತೆ ಬೆಲೆ ಕುಸಿತವಾಗುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. ಬಾಳೆ ಹಣ್ಣು ಬೆಳೆಗಾರರಿಂದ ನೇರವಾಗಿ ಖರೀದಿ ಮಾಡಿದರೆ ಸ್ವಲ್ಪ ಪ್ರಮಾಣದಲ್ಲಾದರೂ ರೈತರಿಗೆ ಉತ್ತಮ ಬೆಲೆ ಸಿಗಬಹುದು ಎನ್ನಲಾಗುತ್ತಿದೆ. ಆದರೆ ಆ ರೀತಿ ಆಗುತ್ತಿಲ್ಲ. ಹೀಗಾಗಿ ಬಾಳೆ ಬೆಳೆದ ರೈತರು ತಲೆಮೇಲೆ ಕೈಹೊತ್ತು ಕುಳಿತುಕೊಳ್ಳುವಂತೆ ಆಗಿದೆ.
ತೋಟಗಾರಿಕೆ ಬೆಳೆಗಳಿಗೂ ಕನಿಷ್ಟ ಬೆಂಬಲ ಬೆಲೆ (ಎಂಎಸ್‌ಪಿ) ನಿಗದಿ ಮಾಡಬೇಕೆನ್ನುತ್ತಾರೆ ನಿಂಬಾಳದಲ್ಲಿನ ಬಾಳೆಬೆಳೆದ ಗಿರಿ ಪಾಟೀಲ, ಬಾಬು ಪುರಾಣಿಕಮಠ, ಶರಣಪ್ಪ ವಡ್ಡಳ್ಳಿ, ನಿಂಗಯ್ಯ ಹಿರೇಮಠ.
ನೇರವಾಗಿ ಖರೀದಿ ಮಾಡಿದರೆ ಸ್ವಲ್ಪ ಪ್ರಮಾಣದಲ್ಲಾದರೂ ರೈತರಿಗೆ ಉತ್ತಮ ಬೆಲೆ ಸಿಗಬಹುದು ಎನ್ನಲಾಗುತ್ತಿದೆ. ಆದರೆ ಆ ರೀತಿ ಆಗುತ್ತಿಲ್ಲ. ಹೀಗಾಗಿ ಬಾಳೆ ಬೆಳೆದ ರೈತರು ತಲೆಮೇಲೆ ಕೈಹೊತ್ತು ಕುಳಿತುಕೊಳ್ಳುವಂತೆ ಆಗಿದೆ. ತೋಟಗಾರಿಕೆ ಬೆಳೆಗಳಿಗೂ ಕನಿಷ್ಟ ಬೆಂಬಲ ಬೆಲೆ (ಎಂಎಸ್‌ಪಿ) ನಿಗದಿ ಮಾಡಬೇಕೆನ್ನುತ್ತಾರೆ. ನಿಂಬಾಳದಲ್ಲಿನ ಬಾಳೆಬೆಳೆದ ಗಿರಿ ಪಾಟೀಲ, ಬಾಬು ಪುರಾಣಿಕಮಠ, ಶರಣಪ್ಪ ವಡ್ಡಳ್ಳಿ, ನಿಂಗಯ್ಯ ಹಿರೇಮಠ.
ಬಾಳೆಬೆಳೆ ವಿಸ್ತಾರ ಸ್ವಲ್ಪಹೆಚ್ಚಳವಾಗಿದೆ. ಜತೆಗೆ ಬೇರೆ ರಾಜ್ಯಗಳಿಗೆ ಸಾಗಾಣೆ ಆಗುತ್ತಿತ್ತು. ಆದರೆ ಮೊದಲಿನ ಹಾಗೆ ಸಾಗಾಣಿಕೆ ಆಗುತ್ತಿಲ್ಲ. ಇಷ್ಟು ದಿನ 10ರಿಂದ 12ರೂಗೆಕೆ.ಜಿ ಬಾಳೆಹಣ್ಣು ಮಾರಾಟವಾಗಿದೆ. ಆದರೀಗ ದರಕಡಿಮೆಯಾಗಿದೆ ಎಂಬುದು ಗಮನಕ್ಕೆ ಬಂದಿದೆ. 2ರಿಂದ 3ರೂ ಕೆ.ಜಿ ಆಗಿರುವುದು ಗಮನಕ್ಕೆ ಬಂದಿಲ್ಲ. ಎಪಿಎಂಸಿಯಲ್ಲಿ ದರದಕುರಿತು ವಿಚಾರಿಸಲಾಗುವುದು. -ಪ್ರಭುರಾಜಎಚ್.ಎಸ್., ಉಪನಿರ್ದೇಶಕ, ತೋಟಗಾರಿಕೆ ಇಲಾಖೆ
ಎರಡು ವರ್ಷ ಲಾಕ್ ಡೌನ್‌ದಿಂದ ಮೊದಲೇ ನಷ್ಟ ಅನುಭವಿಸಿದ್ದೇವೆ. ಈಗ ಬೆಲೆ ಕುಸಿತದಿಂದ ದಿಕ್ಕೇ ತೋಚದಂತಾಗಿದೆ. ಹೆಚ್ಚುತ್ತಿರುವ ಸಾಲದಿಂದ ಹೊಲ ಮಾರುವ ಸ್ಥಿತಿ ನಿರ್ಮಾಣವಾಗಿದೆ. -ಮಲ್ಲಿನಾಥ ಪಾಗಾ, ಬಾಳೆ ಬೆಳೆದ ರೈತ, ನಿಂಬಾಳ
-ಹಣಮಂತರಾವ ಭೈರಾಮಡಗಿ