Advertisement

ದಾಳಿ ನಡೆಸಿದವರು ಭಾರತಕ್ಕೆ ಬಂದದ್ದು ಗೊತ್ತಿಲ್ಲ

01:30 AM Jun 01, 2019 | Team Udayavani |

ನವದೆಹಲಿ: ಶ್ರೀಲಂಕಾದಲ್ಲಿ ಏ.21ರಂದು ನಡೆದ ಆತ್ಮಹತ್ಯಾ ಬಾಂಬ್‌ ದಾಳಿ ನಡೆಸಿದ ಭಯೋತ್ಪಾದಕರು ಭಾರತಕ್ಕೆ ಬಂದ ಮಾಹಿತಿ ಇಲ್ಲವೆಂದು ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರೇಸೇನಾ ತಿಳಿಸಿದ್ದಾರೆ. ಇದರ ಜತೆಗೆ ಬಾಂಬ್‌ ದಾಳಿಯ ಬಗ್ಗೆ ಭಾರತದಿಂದ ಮುನ್ಸೂಚನೆ ಸಿಕ್ಕಿತ್ತು ಎಂದು ಹೇಳಿದ್ದಾರೆ.

Advertisement

ನವದೆಹಲಿಯಲ್ಲಿ ಶುಕ್ರವಾರ ಪ್ರಧಾನಿ ಮೋದಿ ಅವರನ್ನು ಭೇಟಿಯಾದ ಬಳಿಕ ಅವರು ಈ ಮಾಹಿತಿ ನೀಡಿದ್ದಾರೆ. ಏ.21ರ ಘಟನೆಯಲ್ಲಿ 250 ಮಂದಿ ಅಸುನೀಗಿದ್ದರು. ಭಯೋತ್ಪಾದಕರು ದಾಳಿ ನಡೆಸಿದ ಬಳಿಕ ಅಥವಾ ಅದಕ್ಕೂ ಮುನ್ನ ಭಾರತಕ್ಕೆ ಬಂದಿದ್ದ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿಲ್ಲ ಎಂದಿದ್ದಾರೆ. ದ್ವೀಪ ರಾಷ್ಟ್ರದ ಹಿರಿಯ ಅಧಿಕಾರಿಯೊಬ್ಬರು ಭಾರತಕ್ಕೂ ಕಿಡಿಗೇಡಿಗಳು ಆಗಮಿಸಿದ್ದಿರುವ ಸಾಧ್ಯತೆಯಿದೆ ಎಂದಿರುವ ಹಿನ್ನೆಲೆಯಲ್ಲಿ ಇದು ಮಹತ್ವ ಪಡೆದಿದೆ.

ಮೋದಿ ಭೇಟಿ: ಜೂ.7-8ರಂದು ಮಾಲ್ಡೀವ್ಸ್‌ಗೆ ಪ್ರವಾಸದ ನಂತರ ಪ್ರಧಾನಿ ಮೋದಿ ಜೂ.9ರಂದು ಲಂಕಾಕ್ಕೂ ಭೇಟಿ ನೀಡಲಿದ್ದಾರೆ.

ಮಾತುಕತೆ ನಡೆಸಿದ ಪ್ರಧಾನಿ: ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮಕ್ಕೆ ಆಗಮಿಸಿದ ಪ್ರಧಾನಿ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ. ಭೂತಾನ್‌ ಪ್ರಧಾನಿ ಲೋಟೆ ತೆಶರಿಂಗ್‌, ನೇಪಾಳ ಪ್ರಧಾನಿ ಕೆ.ಪಿ.ಶರ್ಮಾ ಓಲಿ ಜತೆಗೆ ಅವರು ವಿವಿಧ ವಿಚಾರಗಳ ಬಗ್ಗೆ ಸಮಾಲೋಚನೆ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next