Advertisement

ಕಾರ್ಯಕ್ರಮಗಳಿಂದ ಬಾಂಧವ್ಯ ವೃದ್ಧಿ: ನರಸಿಂಹ ಹಳಗೇರಿ

03:06 PM Mar 09, 2017 | Team Udayavani |

ಕುಂದಾಪುರ: ಒತ್ತಡದ ಜೀವನ, ಜಂಜಾಟಗಳಿಂದಾಗಿ ಮನುಷ್ಯನ ಸಂಬಂಧಗಳು ಕಳಚಿ ಹೋಗುತ್ತಿದ್ದು, ವಧು – ವರರ ವೇದಿಕೆಗಳ ಸಮಾಜಮುಖೀ ಕಾರ್ಯಕ್ರಮಗಳಿಂದ ಸಮಾಜ ಬಾಂಧವರ ನಡುವೆ ಬಾಂಧವ್ಯ ವೃದ್ಧಿಸುವ ಮಹತ್ಕಾರ್ಯ ಯಶಸ್ವಿಯಾಗಿದೆ ಎಂದು ದಲಿತ ಸಂಘರ್ಷ ಸಮಿತಿ ಬೈಂದೂರು ವಲಯ ಸಂಚಾಲಕ ನರಸಿಂಹ ಹಳಗೇರಿ ಹೇಳಿದರು.

Advertisement

ಕುಂದಾಪುರ  ತಾಲೂಕು ಪರಿಶಿಷ್ಟ ಜಾತಿ ವಧು ವರರ ವೇದಿಕೆ ಮತ್ತು ಗಂಗೊಳ್ಳಿಯ ಡಾ| ಬಿ. ಆರ್‌. ಅಂಬೇಡ್ಕರ್‌ ಯುವಕ ಮಂಡಲ ಆಶ್ರಯದಲ್ಲಿ ಕುಂದಾಪುರದ ಅಂಬೇಡ್ಕರ್‌ ಭವನದಲ್ಲಿ ರವಿವಾರ ಜರಗಿದ ಕರಾವಳಿಯ ಕಾಸರಗೋಡು ಜಿಲ್ಲೆಯಿಂದ ಕುಂದಾಪುರ ತಾಲೂಕಿನ ಶಿರೂರು ವ್ಯಾಪ್ತಿಯ ಪರಿಶಿಷ್ಟ ಜಾತಿ ವಧು – ವರರ ಮುಖಾಮುಖೀ 2017 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪ.ಜಾ. ಸಮಾಜದ ಅವಿವಾಹಿತರನ್ನು ಮುಖ್ಯವಾಹಿನಿಗೆ ತರುವಲ್ಲಿ ವೇದಿಕೆ ಉತ್ತಮ ಕಾರ್ಯ ಮಾಡಿದೆ. ವಧು-ವರ ನೋಡುವುದಕ್ಕೆ ಸಾಕಷ್ಟು ಹಣ ಮತ್ತು ಸಮಯ ವ್ಯಯಿಸುವುದಕ್ಕಿಂತ ಸಾಮೂಹಿಕ ವೇದಿಕೆ ಕಲ್ಪಿಸಿದಲ್ಲಿ ಹೆಚ್ಚು ಅನುಕೂಲವಾಗುತ್ತದೆ ಎಂದರು.

ವೇದಿಕೆ ಅಧ್ಯಕ್ಷ ಮೋನಪ್ಪ ಅದ್ಯಪಾಡಿ ಅಧ್ಯಕ್ಷತೆ ವಹಿಸಿ ಮಾತನಾಡಿ,  ಕಳೆದೆರಡು ವರ್ಷಗಳಿಂದ ಕಾರ್ಯನಿರ್ವಹಿಸುತ್ತಾ ಬಂದಿರುವ ವೇದಿಕೆ ಯಾವುದೇ ಶುಲ್ಕ ತೆಗೆದುಕೊಳ್ಳದೇ ಸಮಾಜಸೇವಾ ಮನೋಭಾವದಿಂದ ನಡೆಸುವ ವಧು-ವರರ ಮುಖಾಮುಖೀ ಕಾರ್ಯಕ್ರಮದ ಪ್ರಯೋಜನವನ್ನು ಪ.ಜಾ. ಬಾಂಧವರು ನಿರೀಕ್ಷಿತ ಮಟ್ಟದಲ್ಲಿ ಪಡೆದುಕೊಳ್ಳದಿರುವುದು ಬೇಸರದ ಸಂಗತಿ ಎಂದರು.

ಅತಿಥಿ ಮಂಗಳೂರು ವಿ.ವಿ. ರಸಾಯನಶಾಸ್ತ್ರ ಸಹಾಯಕ ಪ್ರಾಧ್ಯಾಪಕ ಡಾ| ಲಕ್ಷ್ಮಣ ಕುಕ್ಕುಡೆ, ಬೈಂದೂರು ಉಪವಲಯ ಅರಣ್ಯಾಧಿಧಿಕಾರಿ ಸದಾಶಿವ ಕೆ. ಗಂಗೊಳ್ಳಿ, ಬೈಂದೂರು ಸ.ಪ.ಪೂ. ಕಾಲೇಜು ಉಪಪ್ರಾಂಶುಪಾಲೆ ಜ್ಯೋತಿ, ಕೋಡಿಕಲ್‌ ಸ.ಹಿ.ಪ್ರಾ. ಶಾಲಾ ಮುಖ್ಯಶಿಕ್ಷಕ ಜಯಂತ್‌, ಸಾಮಾಜಿಕ ಕಾರ್ಯಕರ್ತ ಭರತ್‌ ಎಸ್‌. ಕರ್ಕೇರ, ಪಡುಬಿದ್ರಿ ವಧುವರರ ವೇದಿಕೆ ಮುಂದಾಳು ಭಾಸ್ಕರ ಪಡುಬಿದ್ರಿ ಮೊದಲಾದವರು ಉಪಸ್ಥಿತರಿದ್ದರು. ವಿವಾಹಾಕಾಂಕ್ಷಿ ವಧು-ವರರ ಮುಖಾಮುಖೀ ಯನ್ನು ಈ ಸಂದರ್ಭ ನಡೆಸಲಾಯಿತು.

Advertisement

ಸತೀಶ್‌ ಜಿ. ಗಂಗೊಳ್ಳಿ ಸ್ವಾಗತಿಸಿದರು. ವೇದಿಕೆ ಕಾರ್ಯದರ್ಶಿ ಭಾಸ್ಕರ ಎಚ್‌. ಜಿ. ವರದಿ ವಾಚಿಸಿದರು. ಶೀನ ಕಾವ್ರಾಡಿ ಕಾರ್ಯಕ್ರಮ ನಿರ್ವಹಿಸಿದರು. ಅರುಣ ಕುಮಾರ್‌ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next