Advertisement

ಹಿಂದೂಗಳು ಎಂದು ಹೇಳಲು ದೇಶದಲ್ಲಿ ಭಯದ ವಾತಾವರಣ

11:20 AM Jul 23, 2017 | Team Udayavani |

ಬೆಂಗಳೂರು: ದೇಶದಲ್ಲಿ ಹಿಂದೂ ಎಂದು ಹೇಳಿಕೊಳ್ಳಲು ಹೆದರುವ ಕಾಲ ಬಂದಿದೆ ಎಂದು ವಿಧಾನಪರಿಷತ್‌ ಸದಸ್ಯ ರಾಮಚಂದ್ರೇಗೌಡ  ಕಳವಳ ವ್ಯಕ್ತಪಡಿಸಿದರು. ನಗರದ ಗಾಂಧಿಭವನದಲ್ಲಿ ಶನಿವಾರ ನಡೆದ ಲೇಖಕ ಜಿ.ಎಸ್‌ ಯುದಿಷ್ಠಿರ ಬರೆದಿರುವ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್‌ ಕುರಿತ ” ಹರ ಹರ ಯೋಗಿ’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.

Advertisement

ದೇಶದ ಹಿಂದೂಗಳು ವಿವಿಧತೆಯಲ್ಲಿ ಏಕತೆ ಸಾಧಿಸಿದ್ದೇವೆ. ಒಂದು ವೇಳೆ ಈ ಧರ್ಮದಲ್ಲಿ ಪಂಗಡಗಳು ಬೇರೆಯಾದರೇ ದೇಶದ ಐಕ್ಯತೆಗೆ ನ್ಯೂನ್ಯತೆಯಾಗಲಿದೆ ಎಂದು ಆರ್‌ಎಸ್‌ಎಸ್‌ನ ಮುಖಂಡರಾದ ಹಗಡೇವಾರ್‌ ಬಹಳಷ್ಟು ಹಿಂದೆಯೇ ಹೇಳಿದ್ದರು. ಆದರೆ ಇದೀಗ ರಾಜ್ಯದಲ್ಲಿ ಹಿಂದೂ ಧರ್ಮದಲ್ಲಿಯೇ ವೀರಶೈವ, ಅಹಿಂದ, ಪಂಚಮ ಎಂದು ವಿಂಗಡಣೆ ಮಾಡಲಾಗುತ್ತಿದೆ. ಈ ಬೆಳವಣಿಗೆಗಳನ್ನು ಗಮನಿಸಿದರೇ ಹಿಂದೂಗಳು ಎಂದು ಹೇಳಿಕೊಳ್ಳಲು ನಾಚಿಕೆಯಾಗುತ್ತಿದೆ ಎಂದು ಅಭಿಪ್ರಾಯಪಟ್ಟರು.

ರಾಜಕೀಯ ವಿಶ್ಲೇಷಕ ಪ್ರೊ. ಪ್ರೇಮಶೇಖರ ಮಾತನಾಡಿ,ತಿರುಚಿದ ಇತಿಹಾಸವನ್ನು ಪುಸ್ತಕಗಳಲ್ಲಿ ತುಂಬಲಾಗುತ್ತಿದೆ. ಈ ಕಾರ್ಯದ ಹಿಂದೆ ಕಾಂಗ್ರೆಸ್‌ ಹಾಗೂ ಕಮ್ಯುನಿಸ್ಟ್‌ ಗುಂಪು ಕೆಲಸ ಮಾಡುತ್ತಿದೆ ಎಂದೆನಿಸುತ್ತದೆ ಎಂದು  ಹೇಳಿದರು.ಅಲ್ಲದೆ ” ಹರ ಹರ ಯೋಗಿ’ ಪುಸ್ತಕದಲ್ಲಿ ಹಿಂದೂಗಳ ಮೇಲೆ ಹಿಂದೂಗಳು ಎಂದಿಗೂ ದಬ್ಟಾಳಿಕೆ ನಡೆಸಿಲ್ಲ. ಹಿಂದೂಗಳು ಕೋಮುವಾದಿಗಳಲ್ಲ ಎಂಬ ಚಿತ್ರಣ ಕಟ್ಟಿಕೊಡಲಾಗಿದೆ ಎಂದು ಅಭಿಪ್ರಾಯಪಟ್ಟರು.

ಟೆಂಪಲ್‌ ಆಫ್‌ ಸಕ್ಸಸ್‌ನ ಸಾಯಿದತ್‌ ರಘುನಾಥ್‌ ಗುರೂಜಿ ಮಹಾರಾಜ್‌, ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್‌ ಮುತಾಲಿಕ್‌, ಮಾಜಿ ನ್ಯಾಯಮೂರ್ತಿ ಸಿ.ಜಿ. ಹುನಗುಂದ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next