Advertisement
ಬೆಂಗಳೂರು ಉತ್ತರ ಕ್ಷೇತ್ರದ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಅಭ್ಯರ್ಥಿ ಪರ ಸೋಮವಾರ ಪ್ರಚಾರ ನಡೆಸಿದ ಅವರು, ಈ ದೇಶದಲ್ಲಿ ಯಾರಾದರೂ ನೀಚ ರಾಜಕಾರಣ ಮಾಡುತ್ತಿದ್ದರೆ ಅದು ನರೇಂದ್ರ ಮೋದಿ ಮಾತ್ರ ಎಂದು ಆಕ್ರೋಶ ವ್ಯಕ್ತಪಡಿಸಿದರು.
Related Articles
Advertisement
ಮೋದಿ ಇಲ್ಲೇನು ಕಿಸಿದಿರೋದು?: ಮೋದಿ ಪರ ಘೋಷಣೆ ಹಾಕುತ್ತಾರೆ. ಆದರೆ, ನರೇಂದ್ರ ಮೋದಿ ಇಲ್ಲಿ ಕಿಸಿದಿರೋದು ಏನು ಎಂದು ವಾಗ್ಧಾಳಿ ನಡೆಸಿದರು. ಕರಾವಳಿ ಭಾಗದಲ್ಲಿ 500 ಜನ ನಮ್ಮನ್ನು ನೋಡಿ ಅಣ್ಣಾ, ಅಣ್ಣಾ ಎಂದು ಕರೆಯುತ್ತಾರೆ. ಆದರೆ, ನಾಲ್ಕು ಜನ ಯುವಕರ ಗುಂಪು ಮೋದಿ, ಮೋದಿ ಎಂದು ಕರೆಯುತ್ತದೆ. ಈ ಯುವಕರಿಗೆ ಬುದ್ದಿ ಇದೆಯಾ?. ಇವರಿಗೆ ಮೋದಿ ಕೆಲಸ ಕೊಡಿಸಿದ್ದಾರಾ?. ಸುಮ್ಮನೆ ಮೋದಿ, ಮೋದಿ ಎಂದು ಕಿರುಚುತ್ತಿದ್ದಾರೆ ಎಂದು ಹೇಳಿದರು.
“ಲೋಕಸಭೆ ಚುನಾವಣೆ ನಂತರ ನಾನು ನೆಗೆದು ಬೀಳುತ್ತೇನೆ ಎಂದು ಈಶ್ವರಪ್ಪ ಹೇಳಿದ್ದಾರೆ. ಆದರೆ, ದೈವ ನಂಬಿ ಬಂದ ಕುಟುಂಬ ನಮ್ಮದು. ಅಷ್ಟು ಸುಲಭವಾಗಿ ನಾನು ಸಾಯುವುದಿಲ್ಲ. ನನಗೆ ಆಯಸ್ಸು ಗಟ್ಟಿಯಾಗಿದೆ ಎಂದು ನಂಬಿದ್ದೇನೆ’ ಎಂದು ತಿಳಿಸಿದರು.
ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಮಾತನಾಡಿ, ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಸದಾನಂದಗೌಡರು ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ. ಅವರನ್ನು ಕ್ಷೇತ್ರದ ಜನರೂ ನೋಡಿಲ್ಲ. ತಮ್ಮ ಕೆಲಸ ನೋಡಿ ಮತ ಕೊಡಿ ಎನ್ನುವ ಬದಲು ಮೋದಿ ಅವರನ್ನು ನೋಡಿ ಮತ ಕೊಡಿ ಎಂದು ಕೇಳುತ್ತಿದ್ದಾರೆ ಎಂದು ಲೇವಡಿ ಮಾಡಿದರು.
ದೇವೇಗೌಡರನ್ನು ಸಂಸತ್‌ಗೆ ಕೈ ಹಿಡಿದು ಕರೆದುಕೊಂಡು ಹೋಗಬೇಕು ಎಂದು ಬಿಜೆಪಿಯವರು ಹೇಳುತ್ತಾರೆ. ಆದರೆ, ದೇವೇಗೌಡರಿಗೆ ಇರುವ ಬ್ರೈನ್ 24 ವರ್ಷದ ಹುಡುಗನಿಗೂ ಇಲ್ಲ. ಅವರಿಗೆ ವಯಸ್ಸಾಗಿರಬಹುದು, ಆದರೆ, ಅವರ ಜ್ಞಾಪಕ ಶಕ್ತಿ, ಚಿಂತನೆ ಯಾವುದಕ್ಕೂ ಕಡಿಮೆ ಇಲ್ಲ. ಅವರು ಸಮಯ, ದಿನಾಂಕ, ದಿನ ಸೇರಿದಂತೆ ಪ್ರತಿದಿನದ ವಿಷಯಗಳನ್ನು ಕರೆಕ್ಟಾಗಿ ಹೇಳ್ತಾರೆ. ದೇವೇಗೌಡರ ಮೇಲೆ ಇಲ್ಲಿವರೆಗೆ ಒಂದು ಕಪ್ಪು ಚುಕ್ಕೆಯೂ ಇಲ್ಲ. -ಎಚ್.ಡಿ.ಕುಮಾರಸ್ವಾಮಿ, ಸಿಎಂ