Advertisement

ಹತ್ಯೆ ಪ್ರಕರಣ ಎನ್‌ಐಎಗೆ ನೀಡಿ

10:52 AM Feb 03, 2018 | |

ಕಲಬುರಗಿ: ರಾಜ್ಯದಲ್ಲಿ ಸಾಲು ಸಾಲು ಬಿಜೆಪಿ ಕಾರ್ಯಕರ್ತರ, ಮುಖಂಡರ ಹತ್ಯೆಗಳು ನಡೆಯುತ್ತಿವೆ. ರಾಜ್ಯದಲ್ಲಿ ಸರಕಾರ ಇದ್ದು ಇಲ್ಲದಂತಾಗಿದೆ. ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ. ಆದ್ದರಿಂದ ಜ.31ರಂದು ನಡೆದ ಸಂತೋಷ ಹತ್ಯೆ ಪ್ರಕರಣ ಸೇರಿದಂತೆ ಎಲ್ಲ ಪ್ರಕರಣಗಳನ್ನು ರಾಷ್ಟ್ರೀಯ ತನಿಖಾ ದಳ(ಎನ್‌ಐಎ)ಕ್ಕೆ ನೀಡುವಂತೆ ಬಿಜೆಪಿ ರಾಜ್ಯ ಸಹವಕ್ತಾರ ಹಾಗೂ ವಿಧಾನಪರಿಷತ್‌ ಮಾಜಿ ಸದಸ್ಯ ಶಶೀಲ ನಮೋಶಿ, ಗ್ರಾಮಾಂತರ ಜಿಲ್ಲಾಧ್ಯಕ್ಷ ದೊಡ್ಡಪ್ಪಗೌಡ ಪಾಟೀಲ ನರಿಬೋಳ ಆಗ್ರಹಿಸಿದರು.

Advertisement

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಮುಖಂಡರನ್ನು ಹತ್ಯೆ ಮಾಡಲಾಗುತ್ತಿದೆ.31ರಂದು ನಡೆದ ಹತ್ಯೆಯಲ್ಲಿ ಕಾಂಗ್ರೆಸ್‌ ಕಾರ್ಯಕರ್ತನೊಬ್ಬನ ಕೈವಾಡ ಇರುವುದು ಗೊತ್ತಾಗಿದೆ. ಆದ್ದರಿಂದ ಪ್ರಕರಣ ಎನ್‌ಐಎಗೆ ನೀಡಿದರೆ ಸತ್ಯಾಂಶ ಹೊರಬಂದು ಪ್ರಾಣ ಕಳೆದುಕೊಂಡ ಕಾರ್ಯಕರ್ತನ ಕುಟುಂಬಕ್ಕೆ ಶಾಂತಿ ಸಿಗಲಿದೆ ಎಂದು ಹೇಳಿದರು. ಸಂತೋಷ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ ಧನ, ಕುಟುಂಬದ ಒಬ್ಬ ಸದಸ್ಯರಿಗೆ ಸರಕಾರಿ ಉದ್ಯೋಗ ಕೊಡಬೇಕು ಎಂದು ಒತ್ತಾಯಿಸಿದರು.

ಸಮಾರೋಪ : ಶಶೀಲ ನಮೋಶಿ ಮಾತನಾಡಿ, ಫೆ. 4ರಂದು ಬೆಂಗಳೂರನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ಪರಿವರ್ತನಾ ಯಾತ್ರೆಯ ಸಮಾರೋಪ ಸಮಾರಂಭ ನಡೆಯಲಿದೆ. ಸಮಾವೇಶದಲ್ಲಿ ಕೇಂದ್ರ ಹಾಗೂ ರಾಜ್ಯದ ನಾಯಕರು ಭಾಗವಹಿಸಲಿದ್ದಾರೆ. ಸಮಾರಂಭಕ್ಕೆ 4ಲಕ್ಷ ಜನ ಆಗಮಿಸುವ ನಿರೀಕ್ಷೆ ಇದೆ. ಹೈಕ ಭಾಗದ ಜಿಲ್ಲೆಗಳಿಂದ 12ಸಾವಿರದಷ್ಟು ಜನರು ಭಾಗವಹಿಸುತ್ತಾರೆ ಎಂದರು.

5.50 ಕೋಟಿ ಜನರಿಗೆ ಆರೋಗ್ಯ ವಿಮೆ, 1,48,528 ಕೋಟಿ ರೂ. ದೇಶದ ರೈಲ್ವೆ ಇಲಾಖೆ ಅಭಿವೃದ್ಧಿಗೆ, ಬೆಂಗಳೂರು
ಉಪನಗರ ರೈಲ್ವೆ ಯೋಜನೆ ಅಭಿವೃದ್ಧಿಗೆ 17 ಸಾವಿರ ಕೋಟಿ ರೂ. ಶಿಕ್ಷಣ ರಂಗಕ್ಕೆ 10 ಲಕ್ಷ ರೂ. ಮೀಸಲಿಟ್ಟು, ಕೇಂದ್ರ ಕೇಂದ್ರ ಸರಕಾರ ಬಡವರಿಗೆ, ರೈತರಿಗೆ, ಮಧ್ಯಮ ವರ್ಗದ ಜನರಿಗೆ, ಕೂಲಿ ಕಾರ್ಮಿಕರಿಗೆ, ಸಾಮಾನ್ಯ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಬಜೆಟ್‌ ಮಂಡನೆ ಮಾಡಿ ಜನ ಮನ್ನಣೆ ಪಡೆದಿದೆ ಎಂದರು. ಉದ್ಯೋಗಕ್ಕಾಗಿ ಯುವಜನರು ಸಂಘಟನೆಯಿಂದ ಬಿಜೆಪಿ ಕಚೇರಿ ಎದುರು ಪಕೋಡಾ ಮಾಡಿ ಮಾರಾಟ ಮಾಡಲಾಗುತ್ತಿದೆ. ಅದು ಅವರ ಹೋರಾಟ.ಕೇಂದ್ರದಲ್ಲಿ ಮೋದಿ ಅಧಿಕಾರವಹಿಸಿಕೊಂಡ ನಂತರ ಕೋಟ್ಯಂತರ ಉದ್ಯೋಗ ಸೃಷ್ಟಿ ಮಾಡಲಾಗಿದೆ. ಅದಕ್ಕೆ ರಾಜ್ಯ ಸರಕಾರ ಸ್ಪಂದಿಸುತ್ತಿಲ್ಲ ಎಂದು ವಿಧಾನ ಪರಿಷತ್‌ ಸದಸ್ಯ ಅಮರನಾಥ ಪಾಟೀಲ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಕಾಶ ಜಮಾದಾರ, ರಾಜು ನೀಲಂಗಿ, ಸಂಜಯ ಮಿಸ್ಕಿನ್‌, ಸಂಗಣ್ಣ ಈಜೇರಿ ಇದ್ದರು.

Advertisement

ಸಿದ್ದು ನಡುಗುತ್ತಿದ್ದಾರೆ: ರಾಜ್ಯದಲ್ಲಿ ಬಿಜೆಪಿ ಮತ್ತು ಮೋದಿ ಹವಾ ಕಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ನಡುಗುತ್ತಿದ್ದಾರೆ. ಭಯದಿಂದಾಗಿ ಏನೇನೋ ಮಾತನಾಡುತ್ತಿದ್ದಾರೆ. ಆದ್ದರಿಂದಲೇ ಎಂಎಎಂನ ಓವೈಸಿ ಜೊತೆಯಲ್ಲಿ ಬಿಜೆಪಿ ಹೊಂದಾಣಿಕೆ ಮಾಡಿಕೊಂಡಿದೆ ಎಂದು ಹೇಳುತ್ತಿದ್ದಾರೆ. ಇದು ಖಂಡಿತ ಸುಳ್ಳು. ಇಂತಹ ಪರಿಸ್ಥಿತಿ ಬಿಜೆಪಿಗೆ ಇಲ್ಲ. ಯಾರೊಂದಿಗೂ ಮೈತ್ರಿ ಮಾಡಿಕೊಳ್ಳುವ ಅಗತ್ಯವಿಲ್ಲ. ಖಂಡಿತ ಬಿಜೆಪಿ 150 ಸೀಟು ಗೆಲ್ಲಲಿದೆ. ಆದ್ದರಿಂದ ಸಿದ್ದು, ರಾಮಲಿಂಗಾರೆಡ್ಡಿ ಬಡಬಡಿಸುತ್ತಿದ್ದಾರೆ.
 ಶಶೀಲ ಜಿ.ನಮೋಶಿ, ಬಿಜೆಪಿ ರಾಜ್ಯ ಸಹ ವಕ್ತಾರ

16ರಂದು ಎಸ್ಸಿ ಸಮಾವೇಶ: ಕಲಬುರಗಿಯಲ್ಲಿ ಫೆ.16 ರಂದು ಹೈದ್ರಾಬಾದ ಕರ್ನಾಟಕ ಎಸ್ಸಿ ಮೋರ್ಚಾ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಸಮಾವೇಶದಲ್ಲಿ ರಾಷ್ಟ್ರೀಯ ನಾಯಕರು ಭಾಗವಹಿಸಲಿದ್ದು, ಸುಮಾರು ಒಂದು ಲಕ್ಷಕ್ಕೂ ಅಧಿಕ ಜನರು ಸೇರುವ ನಿರೀಕ್ಷೆ ಇದೆ. ಹೈಕದ ಆರೂ ಜಿಲ್ಲೆಯ ಬಿಜೆಪಿ ಮುಖಂಡರು ಹಾಗೂ ಎಸ್ಸಿ ಬಾಂಧವರು ಆಗಮಿಸುವರು. ಸಮಾವೇಶವನ್ನು ಬೃಹತ್‌ ಮಟ್ಟದಲ್ಲಿ ಆಯೋಜಿಸಲಾಗುತ್ತಿದೆ. ಇದನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಶೀಘ್ರವೇ ಸಭೆ ನಡೆಯಲಿದೆ.
 ದೊಡ್ಡಪ್ಪಗೌಡ ಪಾಟೀಲ ನರಿಬೋಳ, ಮಾಜಿ ಶಾಸಕ

Advertisement

Udayavani is now on Telegram. Click here to join our channel and stay updated with the latest news.

Next