Advertisement
ಪರಿಶಿಷ್ಟ ಜಾತಿ ಮತ್ತು ಪಂಗಡದ 1,000 ಫಲಾನುಭವಿಗಳಿಗೆ ಇದರ ಅನುಕೂಲ ಸಿಗಲಿದ್ದು, 40 ಕೋಟಿ ರೂ. ವೆಚ್ಚದಲ್ಲಿ ಆಶಾದೀಪಯೋಜನೆಯನ್ನು ಅನುಷ್ಠಾನಗೊಳಿಸಲು ಮಂಗಳವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಸಂಪುಟ ಸಭೆಯ ಬಳಿಕ ಸುದ್ದಿಗಾರರಿಗೆ ಈ ಕುರಿತು ಮಾಹಿತಿ ನೀಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ, ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಉದ್ಯೋಗ ಕಲ್ಪಿಸಲು ಖಾಸಗಿ ಕೈಗಾರಿಕಾ ಮಾಲೀಕರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಈ ಯೋಜನೆ ಜಾರಿಗೆ ತರಲಾಗುತ್ತಿದೆ.
ಬಡ್ತಿ ಮೀಸಲಾತಿ ವಿವಾದ ಹಿನ್ನೆಲೆಯಲ್ಲಿ ರಾಜ್ಯ ಸಿವಿಲ್ ಸೇವೆಗಳಲ್ಲಿ ವಿವಿಧ ವೃಂದಗಳ ಮುಂಬಡ್ತಿಯನ್ನು ಆರು ತಿಂಗಳ ಕಾಲ ತಾತ್ಕಾಲಿಕವಾಗಿ ತಡೆಹಿಡಿದ ಅವಧಿಯನ್ನು 15.1.2018ರವರೆಗೆ ವಿಸ್ತರಿಸಿ ಅದುವರೆಗೆ ಬಡ್ತಿ ನೀಡದಿರಲು ತೀರ್ಮಾನ.
Related Articles
Advertisement
ಹುಬ್ಬಳ್ಳಿ ವಿಮಾನ ನಿಲ್ದಾಣ ವಿಸ್ತರಣೆ ಯೋಜನೆಗಾಗಿ ಸ್ವಾಧೀನಪಡಿಸಿಕೊಂಡಿರುವ ಜಮೀನು ಪೈಕಿ ಹುಬ್ಬಳ್ಳಿ ತಾಲೂಕು ಗೋಕುಲ ಗ್ರಾಮದ ಸರ್ವೇ ನಂ. 46ಅ ಮತ್ತು 46ಬ ರಲ್ಲಿನ ಮೆ.ಸೋನಿ ಪೇಂಟ್ಸ್ ಮಾಲೀಕತ್ವದ 1-09 ಎಕರೆ ಜಮೀನನ್ನು ಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡುವ ಬಗ್ಗೆ.
ರಾಯಚೂರು ವಿಶ್ವವಿದ್ಯಾಲಯವನ್ನು ಗುಲ್ಬರ್ಗಾ ವಿವಿಯಿಂದ ವಿಭಜಿಸಲು ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ತಿದ್ದುಪಡಿ ವಿಧೇಯಕ-2017ಕ್ಕೆ ಅನುಮೋದನೆ.
2018-19ನೇ ಸಾಲಿನಲ್ಲಿ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ 8ನೇ ತರಗತಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ 185 ಕೋಟಿ ರೂ. ವೆಚ್ಚದಲ್ಲಿ ಉಚಿತ ಬೈಸಿಕಲ್ ವಿತರಣೆಗೆ ಆಡಳಿತಾತ್ಮಕ ಅನುಮೋದನೆ.
ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲೂಕು ಬೆಳಗುತ್ತಿ ಹೋಬಳಿ ನ್ಯಾಮತಿ ಗ್ರಾಮದ ಸರ್ಕಾರಿ ಪ್ರೌಢಶಾಲೆಗೆ ಸೇರಿದ ಚಿನ್ನಿಕಟ್ಟಿ ಗ್ರಾಮದ ಸ.ನಂ. 219 ಮತ್ತು 220ರ 15 ಎಕರೆ 30 ಗುಂಟೆ ಜಮೀನನ್ನು ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಗೆ ಬರುವ ಸಂತ ಸೇವಾಲಾಲ್ ಕ್ಷೇತ್ರ ಅಭಿವೃದ್ಧಿ ಮತ್ತು ನಿರ್ವಹಣಾ ಪ್ರತಿಷ್ಠಾನಕ್ಕೆ ಹಸ್ತಾಂತರಿಸುವುದು.
ಹೊಸಪೇಟೆ- ಬಳ್ಳಾರಿ ರೈಲು ನಿಲ್ದಾಣ ವ್ಯಾಪ್ತಿಯಲ್ಲಿ ಬರುವ ಕುಡುತಿನಿ ಯಾರ್ಡ್‌ನಲ್ಲಿ 26.36 ಕೋಟಿ ವೆಚ್ಚದಲ್ಲಿ ರಸ್ತೆ ಮೇಲು ಸೇತುವೆ ಹಾಗೂ ಕೂಡು ರಸ್ತೆ ನಿರ್ಮಾಣಕ್ಕೆ ಆಡಳಿತಾತ್ಮಕ ಅನುಮೋದನೆ.
ಹೇಮಾವತಿ ಜಲಾಶಯ ಹಿನ್ನೀರಿನ ಮುಳುಗಡೆಯ 15 ಜನ ಸಂತ್ರಸ್ತರಿಗೆ ಕೊಡಗು ಜಿಲ್ಲೆ ಕೊಡ್ಲಿಪೇಟೆ ಗ್ರಾಮದ ಸ.ನಂ.28/2, 28/4ರಲ್ಲಿ ಮಂಜೂರು ಮಾಡಿದ ಭೂಮಿಗೆ ಪ್ರತಿ ಗುಂಟೆಗೆ 50 ಸಾವಿರ ರೂ. ಬೆಲೆ ನಿಗದಿ.
ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳಿ ಮತ್ತು ವಸತಿ ಶಾಲೆಗಳ 54104 ಮಕ್ಕಳಿಗೆ ಹಾಸಿಗೆ, ಹೊದಿಕೆಗಳನ್ನು 7.32 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಟೆಂಡರ್ ಕರೆದು ಸರಬರಾಜು ಮಾಡಲು ಹಾಗೂ ಶುಚಿ ಸಂಭ್ರಮ ಕಿಟ್‌ಗಳನ್ನು 12 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಕರ್ನಾಟಕ ಸೋಪ್ಸ್ ಅಂಡ್ ಡಿಟರ್ಜೆಂಟ್‌ಗೆ ಸರಬರಾಜು ಮಾಡಲು ಒಪ್ಪಿಗೆ.
ಸರ್ಕಾರಿ ಮತ್ತು ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆಗಳಲ್ಲಿ ತರಬೇತಿ ಪಡೆಯುತ್ತಿರುವ 17351 ಪರಿಶಿಷ್ಟ ಜಾತಿ, 7048 ಪರಿಶಿಷ್ಟ ಪಂಗಡದ ತರಬೇತುದಾರರಿಗೆ ಶೂ ಮತ್ತು ಸಾಕ್ಸ್‌ಗಳನ್ನು 7.43 ಕೋಟಿ ಅಂದಾಜು ಮೊತ್ತದಲ್ಲಿ ಬಾಬು ಜಗಜೀವನ್ ರಾಮ್ ಚರ್ಮ ಕೈಗಾರಿಕೆ ಅಭಿವೃದ್ಧಿ ನಿಗಮದಿಂದ ಖರೀದಿ.
ಅಮೃತ್ ಅಭಿಯಾನದಡಿ ಕಲ್ಮಶಗಳ ತ್ಯಾಜ್ಯ ಸಂಸ್ಕರಣೆ ಮತ್ತು ನಿರ್ವಹಣೆಯ ರಾಜ್ಯ ನೀತಿಗೆ ಅನುಮೋದನೆ. ಇಂಡಿ ಪಟ್ಟಣಕ್ಕೆ ಟಾಕಳೆ- ಧೂಳಖೇಡ ಬ್ಯಾರೇಜಿನಿಂದ ನಿರಂತರ ಒತ್ತಡಯುಕ್ತ ನೀರು ಪೂರೈಕೆ ಮತ್ತು ನೀರಿನ ಮೂಲ ಸುಧಾರಣೆ ಮಾಡುವ ಯೋಜನೆಯನ್ನು 90.49 ಕೋಟಿ ಅಂದಾಜು ಮೊತ್ತದಲ್ಲಿ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಿಂದ ಕೈಗೆತ್ತಿಕೊಳ್ಳಲು ಅನುಮೋದನೆ. ಬೆಂಗಳೂರು ಮಹಾರಾಣಿ ಕ್ಲಸ್ಟರ್ ವಿವಿ ಕಟ್ಟಡ ಕಾಮಗಾರಿಗಳನ್ನು 45.69 ಕೋಟಿ ರೂ ಅಂದಾಜು ವೆಚ್ಚದಲ್ಲಿ ಕೈಗೊಳ್ಳಲು
ಅನುಮೋದನೆ. ರೈತರು ನೀರಿನ ಟ್ಯಾಂಕರ್ ಖರೀದಿಸಲು ನೀಡುವ ಸಹಾಯಧನದ ಮೊತ್ತವನ್ನು 62 ಸಾವಿರ ರೂ.ನಿಂದ 72 ಸಾವಿರ ರೂ.ಗೆ ಹೆಚ್ಚಿಸಲು ಒಪ್ಪಿಗೆ. ಸಾಗರ ತಾಲೂಕು ಗೌತಮಪುರ ಮತ್ತು ಇತರೆ 127 ಜನವಸತಿಗಳಿಗೆ ಬಹುಗ್ರಾಮ ಯೋಜನೆಯಡಿ ಕುಡಿಯುವ ನೀರಿನ ಯೋಜನೆಗೆ 66.10 ಕೋಟಿ ನೀಡಲು ಒಪ್ಪಿಗೆ. ಪಾವಗಡ ಪಟ್ಟಣ ಮತ್ತು ಜನವಸತಿಗಳು, ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲೂಕಿನ ಪಟ್ಟಣ, ಚಳ್ಳಕೆರೆ ಜನವಸತಿ, ಕೂಡ್ಲಿಗಿ
ತಾಲೂಕಿನ ಉಜ್ಜನಿ ಮತ್ತು 216 ಜನವಸತಿಗಳು, ಹೊಸಪೇಟೆ ತಾಲೂಕಿನ ಚಿಲಕನಹಟ್ಟಿ ಮತ್ತು 14 ಜನವಸತಿಗಳು, ಚಿತ್ರದುರ್ಗ ಜಿಲ್ಲೆ ತುರುವನೂರು ಹೋಬಳಿಯ 59 ಜನವಸತಿಗಳಿಗೆ ತುಂಗಭದ್ರಾ ಹಿನ್ನೀರಿನಿಂದ ಕುಡಿಯುವ ನೀರು ಸರಬರಾಜು ಯೋಜನೆಯನ್ನು 2352.60 ಕೋಟಿ ಅಂದಾಜು ವೆಚ್ಚದಲ್ಲಿ ಅನುಷ್ಠಾನ. ಮಯಸೂರಿನ 245 ವೀಳೆದೆಲೆ ಬೆಳೆಗಾರರಿಗೆ
ಮೈಸೂರು ಮಹಾನಗರ ಪಾಲಿಕೆ ಒಡೆತನದ ಮುನಿಸಿಪಲ್ ಸೀವೆಜ್ ಫಾರಂನಲ್ಲಿ ವೀಳೆದೆಲೆ ಬೆಳೆಯುವ ಸಲುವಾಗಿ ತಲಾ 5 ಗುಂಟೆ ಜಮೀನು ನೀಡಲು 30 ಎಕರೆ 25 ಗುಂಟೆ ಜಮೀನು ಹಂಚಿಕೆ.