Advertisement

ಕಲಬುರಗಿ ಸಮ್ಮೇಳನ ಕನಕಪುರ ಮಾದರಿಯಲ್ಲಾಗಲಿ

09:31 AM Jan 14, 2019 | |

ಕಲಬುರಗಿ: ವರ್ಷಾಂತ್ಯಕ್ಕೆ ಇಲ್ಲವೇ ಮುಂದಿನ ವರ್ಷದ ಆರಂಭದ ತಿಂಗಳಲ್ಲಿ ನಡೆಸಲು ಉದ್ದೇಶಿಸಿರುವ ಅಖೀಲ ಭಾರತ 85ನೇ ಕನ್ನಡ ಸಾಹಿತ್ಯ ಸಮ್ಮೇಳನ ವಿನೂತನ ಅದರಲ್ಲೂ ಕನಕಪುರದಲ್ಲಿ ಅತ್ಯಂತ ಯಶಸ್ವಿಯಾಗಿ ಕಂಡ ಮಾದರಿಯಲ್ಲಿ ನೆರವೇರಬೇಕೆಂದು ಹಿರಿಯ ವೈದ್ಯ ಸಾಹಿತಿ ಡಾ| ಎಸ್‌. ಎಸ್‌. ಗುಬ್ಬಿ ಹೇಳಿದರು.

Advertisement

ರವಿವಾರ ಕನ್ನಡ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ 2019ನೇ ಸಾಲಿನ ದಿನದರ್ಶಿಕೆ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಕನ್ನಡ ನಾಡಿನ ಸೇವೆ ಮಾಡುವ ಅವಕಾಶ ಬಿಸಿಲು ನಾಡಿಗೆ ಸಿಕ್ಕಿದೆ. ಅಖೀಲ ಭಾರತ ಸಮ್ಮೇಳನಗಳಲ್ಲಿ ಪಿ.ಜಿ.ಆರ್‌. ಸಿಂಧ್ಯ ಹಾಗೂ ಇತರರ ಪರಿಶ್ರಮ, ಆಸಕ್ತಿಯಿಂದ ಕನಕಪುರ ಸಮ್ಮೇಳನ ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ. ಇದೇ ಸಾಲಿನಲ್ಲಿ ಕಲಬುರಗಿ ಸಮ್ಮೇಳನವೂ ಬರಬೇಕು ಎನ್ನುವ ಆಶಯ ವ್ಯಕ್ತಪಡಿಸಿದರು.

ಕನ್ನಡ ಸಾಹಿತ್ಯಕ್ಕೆ ಕಲಬುರಗಿ ಕೊಡುಗೆ ದೊಡ್ಡದಾಗಿದೆ. ಕನ್ನಡದ ಮೊದಲ ಗ್ರಂಥ ಕವಿರಾಜಮಾರ್ಗ ನೀಡಿದ ಹಾಗೂ ಶರಣರ ವಚನಗಳ ನಾಡಾಗಿರುವ ಕಲಬುರಗಿಗೆ ಸುದೀರ್ಘ‌ 31 ವರ್ಷಗಳ ನಂತರ ಸಮ್ಮೇಳನ ಬಂದಿದೆ. ಹೀಗಾಗಿ ಸಮ್ಮೇಳನ ಮಾದರಿಯಾಗಿ ನೆರವೇರುವಂತಾಗಲು ಈಗಲೇ ಸಿದ್ಧತೆಗಳಿಗೆ ಮುಂದಾಗಬೇಕೆಂದು ಹೇಳಿದರು.

ಮುಖ್ಯ ಅತಿಥಿಯಾಗಿದ್ದ ನಮ್ಮ ಸೌಹಾರ್ದ ಪತ್ತಿನ ಸಹಕಾರಿ ನಿಯಮಿತ ಅಧ್ಯಕ್ಷ ಶರಣಬಸಪ್ಪ ಎಂ. ಕಾಡಾದಿ ಮಾತನಾಡಿ, ಕಸಾಪ ಅಧ್ಯಕ್ಷ ಪರಿಶ್ರಮ ವಹಿಸಿ ಕಲಬುರಗಿಗೆ ಸಮ್ಮೇಳನ ತಂದಿದ್ದಾರೆ. ಹೀಗಾಗಿ ಅಭಿನಂದನೆಗೆ ಅರ್ಹರಾಗಿದ್ದಾರೆ. ಅಖೀಲ ಭಾರತ ಸಮ್ಮೇಳನ ಅಭಿಮಾನಪೂರ್ವಕವಾಗಿ ನೆರವೇರುವಂತಾಗಲು ಪ್ರತಿಯೊಬ್ಬರು ಕೈ ಜೋಡಿಸಬೇಕು ಎಂದು ಹೇಳಿದರು.

ಮುಂಜಾನೆ ಎದ್ದ ತಕ್ಷಣ ಕನ್ನಡದ ಅಂಕಿಗಳು ಹಾಗೂ ಕನ್ನಡ ಸಾಹಿತ್ಯದ ಶಬ್ದಕೋಶಗಳನ್ನು ನೋಡುವುದರಿಂದ ಮನಸ್ಸಿಗೆ ಹಿತ ನೀಡುತ್ತದೆ. ಹೀಗಾಗಿ ಕನ್ನಡ ದಿನದರ್ಶಿಕೆ ಎಲ್ಲರ ಮನೆಯಲ್ಲಿ ಇರುವುದು ಅಗತ್ಯವಾಗಿದೆ ಎಂದು ಕಾಡಾದಿ ಹೇಳಿದರು.

Advertisement

ಜಿಲ್ಲಾ ಕಸಾಪ ಅಧ್ಯಕ್ಷ ವೀರಭದ್ರ ಸಿಂಪಿ ಅಧ್ಯಕ್ಷತೆ ವಹಿಸಿ, ಕಲಬುರಗಿಯಲ್ಲಿನ ಅಖೀಲ ಭಾರತ ಸಮ್ಮೇಳನ ಸಿದ್ಧತೆ ಹಾಗೂ ಯಶಸ್ವಿ ನಿಟ್ಟಿನಲ್ಲಿ ಪಡೆಯೊಂದನ್ನು ರಚಿಸಲು ಉದ್ದೇಶಿಸಲಾಗಿದೆ. ಗ್ರಾಮೀಣ ಭಾಗದಲ್ಲಿನ ಅಳಿಯುವ ಅಂಚಿನಲ್ಲಿರುವ ಕಲೆಗಾರಿಕೆ ಉಳಿದು ಬೆಳೆಸುವ ಉದ್ದೇಶದಿಂದ ಜತೆಗೆ ಸಮ್ಮೇಳನದಲ್ಲಿ ವಾಸ್ತವಿಕತೆ ಬಿಂಬಿಸಲು ಉದ್ದೇಶಿಸಲಾಗಿದೆ. ಸಮ್ಮೇಳನ ಕುರಿತು ಎಲ್ಲರೂ ಸಲಹೆ ನೀಡುವುದರ ಜತೆಗೆ ಸಹಕಾರ ನೀಡಬೇಕೆಂದು ವಿನಂತಿಸಿದರು. ಕಸಾಪದ ಗೌರವ ಕಾರ್ಯದರ್ಶಿಗಳಾದ ಮಡಿವಾಳಪ್ಪ ನಾಗರಹಳ್ಳಿ, ಡಾ| ವಿಜಯಕುಮಾರ ಪರೂತೆ, ಖಜಾಂಚಿ ದೌಲತರಾಯ ಪಾಟೀಲ ಮಾಹೂರ, ಪದಾಧಿಕಾರಿ ಸೂರ್ಯಕಾಂತ ಪಾಟೀಲ ಸೇರಿದಂತೆ ವಿವಿಧ ಘಟಕಗಳ ಪದಾಧಿಕಾರಿಗಳು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next