Advertisement
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದಾಜು 30 ಲಕ್ಷ ರೂ. ವೆಚ್ಚದಲ್ಲಿ ಸಭಾಂಗಣ ನಿರ್ಮಾಣವಾಗಿದೆ. ಇದು ಸಾಹಿತ್ಯ ಚಟುವಟಿಕೆಗಳಿಗೆ ಪೂರಕವಾಗಲಿದೆ ಎಂದು ತಿಳಿಸಿದರು. ಅದೇ ರೀತಿ ಮುಂದಿನ ಹಂತವಾಗಿ ಬಾಪುಗೌಡ ದರ್ಶನಾಪುರ ರಂಗಮಂದಿರ ಆಧುನೀಕರಣ ಕಾರ್ಯ ಕೈಗೆತ್ತಿಕೊಳ್ಳಲಾಗುವುದು. ಇದರಜತೆ-ಜತೆಗೆ ಸಾಹಿತ್ಯ ಚಟುವಟಿಕೆಗಳನ್ನು ವೇಗಗೊಳಿಸಲಾಗುವುದು. ಧಾರವಾಡದಲ್ಲಿ ನಡೆಯುವ ಅಖೀಲ ಭಾರತ ಸಾಹಿತ್ಯ ಸಮ್ಮೇಳನ ನಂತರ ಕಲಬುರಗಿಗೆ ಮುಂದಿನ ಸಾಹಿತ್ಯ ಸಮ್ಮೇಳನ ತರಲು ಯತ್ನಿಸಲಾಗುವುದು. ಬಹು ಮುಖ್ಯವಾಗಿ ಧಾರವಾಡ ಸಾಹಿತ್ಯ ಮ್ಮೇಳನಾಧ್ಯಕ್ಷರಾಗಿ ಜಿಲ್ಲೆಯವರಾಗಿರುವ ಹಿರಿಯ ಸಾಹಿತಿ ಚನ್ನಣ್ಣ ವಾಲೀಕಾರ ಅವರನ್ನು ಸಮ್ಮೇಳನ ಅಧ್ಯಕ್ಷರನ್ನಾಗಿ ಆಯ್ಕೆಯಾಗಲು ಸಹ ಪ್ರಯತ್ನಿಸಲಾಗುವುದು ಎಂದು ಸಿಂಪಿ ವಿವರಿಸಿದರು.
ಕನ್ನಡ ಭವನದಲ್ಲಿ ಸುಸಜ್ಜಿತ ಸಭಾಂಗಣ ಅಲ್ಲದೇ ಗಿಡಮರಗಳ ಪೋಷಣೆ ಸೇರಿದಂತೆ ಇತರ ಅಭಿವೃದ್ಧಿ ಕಾರ್ಯಗಳು ಮುನ್ನೆಡೆದಿವೆ. ಕನ್ನಡ ಭವನ ಅಭಿವೃದ್ಧಿ ಹಾಗೂ ಸಾಹಿತ್ಯ ಚಟುವಟಿಕೆಗಳಿಗೆ ಪ್ರೋತ್ಸಾಹಿಸಿದವರ ಹಾಗೂ
ಧನ ಸಹಾಯ ನೀಡಿದವರ ಪಟ್ಟಿಯನ್ನು ಕನ್ನಡ ಭವನದಲ್ಲಿ ಅಳವಡಿಸಿ ಸ್ಮರಿಸಲಾಗುತ್ತದೆ. ಅಕ್ಟೋಬರ್‌ನಲ್ಲಿ ನಡೆಯುವ ನೂತನ ಸುಸಜ್ಜಿತ ಸಭಾ ಭವನದ ಉದ್ಘಾಟನಾ ಸಮಾರಂಭದಲ್ಲಿ ಅವರೆಲ್ಲರನ್ನು ಸನ್ಮಾನಿಸಿ ಗೌರವಿಸಲಾಗುವುದು ಎಂದು ತಿಳಿಸಿದರು. ಕಸಾಪ ಗೌರವ ಕಾರ್ಯದರ್ಶಿ ಮಡಿವಾಳಪ್ಪ ನಾಗರಹಳ್ಳಿ, ವಿಜಯಕುಮಾರ ಪರೂತೆ, ಕಸಾಪ ಪದಾಧಿಕಾರಿಗಳಾದ ಲಿಂಗರಾಜ ಸಿರಗಾಪುರ, ಶಿವಾನಂದ ಕಶೆಟ್ಟಿ, ಸುಲೇಖಾ ಮಾಲಿಪಾಟೀಲ, ಆನಂದ ನಂದೂರಕರ್, ಝಾಕೀರ ಹುಸೇನ್, ಸಂಜೀವರೆಡ್ಡಿ, ರಾಧಾಕೃಷ್ಣನ್ ಇದ್ದರು.