Advertisement
ಘಟನೆ ಬೆಳಕಿಗೆ ಬರುತ್ತಿದ್ದಂತೆ ಆರೋಪಿ ನೇಪಾಳಕ್ಕೆ ಪಾರಾರಿಯಾಗಲು ಯತ್ನಿಸಿದ್ದ. ಈ ಮಾಹಿತಿ ಪಡೆದ ವಿಶೇಷ ತಂಡ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು “ಉದಯವಾಣಿ’ಗೆ ತಿಳಿಸಿದ್ದಾರೆ.
Related Articles
Advertisement
ಈ ತಂಡ ನೇಪಾಳಿಯರು ಹೆಚ್ಚು ವಾಸಿಸುವ ಎಚ್‌ಆರ್‌ಬಿಆರ್ ಲೇಔಟ್, ಹೆಣ್ಣೂರು ಬಂಡೆ, ಮಾರುತಿ ಲೇಔಟ್ ಹಾಗೂ ಇತರೆಡೆ ಹುಡುಕಾಟ ನಡೆಸಿ, ಸುಮಾರು 50 ಮಂದಿಯನ್ನು ವಿಚಾರಣೆ ನಡೆಸಿದಾಗ ಆರೋಪಿ ನೇಪಾಳಕ್ಕೆ ಪಾರಾರಿಯಾಗಲು ರೈಲಿನಲ್ಲಿ ಹೋಗಿರವ ಮಾಹಿತಿ ಲಭಿಸಿತ್ತು.
ಬಾತ್‌ರೂಮ್‌ನಲ್ಲಿದ್ದ ಆರೋಪಿ: ಆರೋಪಿ ಬೆನ್ನತ್ತಿದ್ದ ಒಂದು ತಂಡ ತಮಿಳುನಾಡಿನ ಸೇಲಂನಲ್ಲಿ ಮಾಹಿತಿದಾರನನ್ನು ವಿಚಾರಿಸಿದ್ದು, ಆರೋಪಿ ಸೇಲಂನಿಂದ ವಿವೇಕ ಎಕ್ಸ್‌ಪ್ರೆಸ್ ರೈಲಿನಲ್ಲಿ ಅಸ್ಸಾಂನ ಗುಹಾಟಿಗೆ ಹೋಗುತ್ತಿದ್ದಾನೆ ಎಂಬ ಮಾಹಿತಿ ಸಂಗ್ರಹಿಸಿತ್ತು. ಕೂಡಲೇ ವಿಶೇಷ ತಂಡ ವಿಮಾನದ ಮೂಲಕ ಒಡಿಶಾದ ಭುವನೇಶ್ವರ ರೈಲ್ವೆ ನಿಲ್ದಾಣ ತಲುಪಿತ್ತು.
ನಂತರ ರೈಲು ಬರುತ್ತಿದ್ದಂತೆ ಎಲ್ಲ ಬೋಗಿಗಳನ್ನು ಪರಿಶೀಲಿಸಿ, ಸಾಮಾನ್ಯ ದರ್ಜೆಯ ಕಂಪಾರ್ಟ್‌ಮೆಂಟ್‌ನ ಬಾತ್ ರೂಮ್‌ನಲ್ಲಿ ಅಡಗಿಕೊಂಡಿದ್ದ ಆರೋಪಿ ಸುರೇಶ್‌ನನ್ನು ಬಂಧಿಸುವಲ್ಲಿ ತಂಡ ಯಶಸ್ವಿಯಾಗಿದೆ ಎಂದು ಅಧಿಕಾರಿ ವಿವರಿಸಿದರು.