Advertisement

ಕ್ಯಾಮೆರಾ ಬಾಡಿಗೆಗೆ ಪಡೆದು ವಂಚಿಸುತ್ತಿದ್ದ ಆರೋಪಿ ಬಂಧನ

11:38 AM Nov 16, 2018 | |

ಬೆಂಗಳೂರು: ಸಾಲ ತೀರಿಸಲು ಕ್ಯಾಮೆರಾಗಳನ್ನು ಬಾಡಿಗೆಗೆ ಪಡೆದು ವಂಚಿಸುತ್ತಿದ್ದ ಆಂಧ್ರಪ್ರದೇಶ ಮೂಲದ ಆರೋಪಿಯನ್ನು ಸಂಜಯ್‌ನಗರ ಪೊಲೀಸರು ಬಂಧಿಸಿದ್ದಾರೆ. ಆಂಧ್ರಪ್ರದೇಶ ಮೂಲದ ಮಹೇಶ್‌ (27) ಬಂಧಿತ. ಆರೋಪಿಯಿಂದ ಆರೂವರೆ ಲಕ್ಷ ರೂ. ಮೌಲ್ಯದ 6 ಕ್ಯಾಮೆರಾಗಳನ್ನು ವಶಕ್ಕೆ ಪಡೆಯಲಾಗಿದೆ.

Advertisement

ಆರೋಪಿ ಕಳೆದ ಸೆಪ್ಟೆಂಬರ್‌ನಲ್ಲಿ ಯಶವಂತಪುರ, ಮಹಾಲಕ್ಷಿ ಲೇಔಟ್‌, ಸಂಜಯ್‌ನಗರ ಸೇರಿ ವಿವಿಧೆಡೆ ಕೆಲ ಸ್ಟುಡಿಯೋಗಳಿಗೆ ನೇರವಾಗಿ ಭೇಟಿ ಕೊಟ್ಟು ಹೆಚ್ಚಿನ ಬಾಡಿಗೆ ಕೊಡುವುದಾಗಿ ಹೇಳಿ ಲಕ್ಷಾಂತರ ರೂ. ಮೌಲ್ಯದ ಕ್ಯಾಮೆರಾಗಳನ್ನು ಪಡೆಯುತ್ತಿದ್ದ. ಬಳಿಕ ಬಾಡಿಗೆ ಹಣ ಕೊಡದೆ, ಕ್ಯಾಮೆರಾವನ್ನೂ ಹಿಂದಿರುಗಿಸದೆ ವಂಚಿಸುತ್ತಿದ್ದ.

ಈ ಸಂಬಂಧ ಮಹಾಲಕ್ಷಿ ಲೇಔಟ್‌ ಹಾಗೂ ಸಂಜಯ್‌ನಗರ ಠಾಣೆಗಳಲ್ಲಿ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿದ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು. ಪ್ರಕರಣ ಸಂಜಯ್‌ನಗರ ಠಾಣೆಯಲ್ಲಿ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next