Advertisement

BC Road: ಮನೆಗೆ ನುಗ್ಗಿ ತಂದೆ-ಮಗನಿಗೆ ಹಲ್ಲೆ; ದೂರು ದಾಖಲು

12:34 AM Apr 22, 2024 | Team Udayavani |

ಬಂಟ್ವಾಳ: ಬಿ.ಸಿ.ರೋಡಿನ ಕೈಕಂಬದ ಪರ್ಲಿಯಾದಲ್ಲಿ ಆರೋಪಿಯು ಮನೆಗೆ ನುಗ್ಗಿ ತಂದೆ-ಮಗನಿಗೆ ಹಲ್ಲೆ ನಡೆಸಿದ ಘಟನೆ ಶನಿವಾರ ನಡೆದಿದೆ.

Advertisement

ಬಿ.ಸಿ.ರೋಡಿನ ತಲಪಾಡಿ ನಿವಾಸಿ ಝಕಾರಿಯಾ ಹಲ್ಲೆ ಆರೋಪಿ. ಪರ್ಲಿಯಾ ನಿವಾಸಿ ಮಹಮ್ಮದ್‌ ಶಂಶೀರ್‌ ಹಾಗೂ ಅವರ ತಂದೆ ಹಲ್ಲೆಗೊಳಗಾದವರು.

ಎ. 20ರಂದು ಬೆಳಗ್ಗೆ ಆರೋಪಿ ಝಕಾರಿಯಾ ಇತರರ ಜತೆಗೆ ಶಂಶೀರ್‌ಮನೆಗೆ ಬಂದು ಜೀವ ಬೆದರಿಕೆ ಹಾಕಿ ತೆರಳಿದ್ದ. ಆರೋಪಿಯು ರಾತ್ರಿ ಮತ್ತೆ ಮನೆಗೆ ಅಕ್ರಮವಾಗಿ ಪ್ರವೇಶಗೈದು ಶಂಶೀರ್‌ ಹಾಗೂ ಅವರ ತಂದೆಗೆ ಹಲ್ಲೆ ನಡೆಸಿದ್ದಾನೆ. ಹಲ್ಲೆ ತಡೆಯಲು ಬಂದ ಶಂಶೀರ್‌ ತಾಯಿಯನ್ನು ದೂಡಿ ಹಾಕಿದ್ದು, ಈ ವೇಳೆ ಶಂಶೀರ್‌ ಜೀವ ರಕ್ಷಣೆಗಾಗಿ ಝಕಾರಿಯಾ ಮುಖಕ್ಕೆ ಮಸಾಲೆ ಹುಡಿ ಎರಚಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next