ಹುಣಸೂರು: ಶ್ರೀಗಂಧ ಮರದ ಚಕ್ಕೆ ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ.
ನಗರಕ್ಕೆ ಸಮೀಪದ ಬಾಚಹಳ್ಳಿರಸ್ತೆಯ ಅಂಬೇಡ್ಕರ್ ಬಡಾವಣೆಯ ಕುಮಾರ್ ಹಾಗೂ ಸತ್ಯರಾಜ್ ಬಂಧಿತ ಆರೋಪಿಗಳು.
ಇಬ್ಬರು ತಾಲೂಕಿನ ಹೊಸಕೋಟೆ ಗ್ರಾಮದ ರಸ್ತೆಬದಿಯಲ್ಲಿ ಬಸ್ ಗಾಗಿ ಕಾಯುತ್ತಿದ್ದ ವೇಳೆ ಅದೇ ಮಾರ್ಗ ದಲ್ಲಿ ಕಾರ್ಯನಿಮಿತ್ತ ತೆರಳುತ್ತಿದ್ದ ಗ್ರಾಮಾಂತರ ಠಾಣೆ ಅಪರಾಧ ವಿಭಾಗದ ಎಸ್.ಐ.ಜಮೀರ್ ಅಹಮದ್. ಪೇದೆ ಮೆಹರಜ್ ಅನುಮಾನಗೊಂಡು ತಪಾಸಣೆ ನಡೆಸಿದ ವೇಳೆ ಚೀಲದಲ್ಲಿ ಶ್ರೀಗಂಧದ ಚಕ್ಕೆ ಪತ್ತಾಯಾಗಿದ್ದು. ಬಂಧಿಸಿ ವಿಚಾರಣೆ ನಡೆಸಿದ ವೇಳೆ ಬಾಚಹಳ್ಳಿ ರಸ್ತೆಯ ಕಲ್ ಮಂಟಿ ಬಳಿಯಲ್ಲಿ ಶ್ರೀಗಂಧದ ಮರ ಕಡಿದಿರುವುದನ್ನು ಒಪ್ಪಿಕೊಂಡಿದ್ದಾರೆ.
ಇದನ್ನೂ ಓದಿ: QS 2021 ರ್‍ಯಾಂಕಿಂಗ್ ಪಟ್ಟಿ ಬಿಡುಗಡೆ: ಭಾರತದಲ್ಲಿ ಐಐಟಿ ಬಾಂಬೆಯೇ ಬೆಸ್ಟ್
ಆರೋಪಿಗಳಿಂದ 7 ಕೆಜಿ 300 ಗ್ರಾಂ.ನಷ್ಟು ಶ್ರೀಗಂಧದ ಚಕ್ಕೆಗಳನ್ನು ವಶಕ್ಕೆ ಪಡೆದು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ ಎಂದು ವೃತ್ತ ನಿರೀಕ್ಷಕ ಕೆ.ಸಿ ಪೂವಯ್ಯ ಮಾಹಿತಿ ನೀಡಿದರು.
ಇದನ್ನೂ ಓದಿ: ಬಾಹ್ಯಾಕಾಶದಿಂದ “ನೀಲಿ ಭೂಮಿ’ ಸೆರೆಹಿಡಿದ ಗಗನಯಾತ್ರಿಕ