ಕವಿಪ್ರತಿಭೆ ದೈವಿಕವಾದದ್ದು ಎಂದು ನಂಬಿದ್ದ ಕಾಲದಿಂದಲೂ ಅದರ ಅರ್ಥೈಸುವಿಕೆಗೆ ಮೀಮಾಂಸಾ ಪರಿಕರವನ್ನು ಜಗತ್ತಿನ ಎಲ್ಲ ಸಾಹಿತ್ಯಗಳು ಕಟ್ಟಿಕೊಟ್ಟಿದ್ದನ್ನು ನೋಡಬಹುದು. ಶಬ್ದಾರ್ಥಗಳ ಜಾಡನ್ನು ಹಿಡಿದು ಅನೇಕ ಶಾಸ್ತ್ರಗಳು ಜೀವ ತಳೆದವು. ಛಂದಶಾಸ್ತ್ರ, ಭಾಷಾಶಾಸ್ತ್ರ, ಸೌಂದರ್ಯಶಾಸ್ತ್ರ, ಧ್ವನಿಶಾಸ್ತ್ರ, ರಸ ಹೀಗೆ ವ್ಯವಸ್ಥಿತವಾಗಿ ಒಂದು ಚೌಕಟ್ಟನ್ನು ನಿರ್ಮಿಸಿ ಅದರೊಳಗೆ ಕಾವ್ಯವನ್ನಿಟ್ಟು ಅರ್ಥ ಹುಡುಕುವ ಪ್ರಯತ್ನಗಳನ್ನು ಮಾಡಲಾಯಿತು. ಒಂದು ಕಾಲಕ್ಕೆ ಮೂಲಕ್ಕಿಂತಲೂ ಭಿನ್ನವಾಗಿ ಕನ್ನಡವನ್ನು ಮಾರ್ಪಡಿಸಿಕೊಂಡ ಕಥಾಂತರಗಳೇ ಆಯಾಯ ಕವಿಯ ಮತ್ತು ಕಾಲಧರ್ಮವನ್ನು ಹೇಳುತ್ತ ಬಂದಿದ್ದು ಮೀಮಾಂಸೆಯ ಒಂದು ಕ್ರಮವೇ ಆಗಿತ್ತು. ಇಂಥ ಕಥಾಂತರಗಳೇ ಕನ್ನಡದ ಸಾಂಸ್ಕƒತಿಕ ಶ್ರೀಮಂತಿಕೆಯನ್ನು ಹೆಚ್ಚಿಸಿದ್ದು ತಾತ್ವಿಕ ತಳಹದಿಯನ್ನು ರೂಪಿಸುತ್ತಿದ್ದುದನ್ನು ಮರೆಯುವಂತಿಲ್ಲ.
ನೈಜಾನುಭವಗಳಲ್ಲಿ ಹುಟ್ಟಿದ ಸಾಹಿತ್ಯವನ್ನು ಅರ್ಥೈಸಲು ತತ್ವವಾದಗಳು ಏಕೆ ಬೇಕು? ಅಥವಾ ಸಾಹಿತಿಯೇ ಅಂಥ¨ªೊಂದು ತತ್ವವಾದವನ್ನು ಬೆಳೆಸುತ್ತಾನೆಯೇ? ಅಥವಾ ಬದುಕೇ ಕಾಲಾಂತರದಲ್ಲಿ ಬದಲಾವಣೆಯ ದಿಕ್ಕನ್ನು ಹಿಡಿದು ಈ ತತ್ವವಾದಗಳನ್ನು ಹುಟ್ಟು ಹಾಕುತ್ತದೆಯೇ? ಎನ್ನುವ ಪ್ರಶ್ನೆಗೆ ಉತ್ತರ ತೀರಾ ಸಂಕೀರ್ಣವಾದದ್ದೇ.
ಸಾಹಿತ್ಯವೆಂದರೆ ಒಂದು ಜೀವನಕ್ರಮ ಎಂದು ನಂಬಿದಾಗ ಈ ಮಾತುಗಳಿಗೆ ಹೆಚ್ಚು ಅರ್ಥವಂತಿಕೆ ಸಿಗುತ್ತದೆ.
ಸಾಮಾಜಿಕ, ರಾಜಕೀಯ, ತತ್ವಜ್ಞಾನಗಳು ಜೀವನವನ್ನು ಕೇಂದ್ರವಾಗಿಸಿಕೊಂಡಾಗ ಅಲ್ಲೊಂದು ತಾತ್ವಿಕತೆ ಹುಟ್ಟುತ್ತದೆ. ಇದು ಬೇರೆಲ್ಲಾ ಜ್ಞಾನ ಶಿಸ್ತುಗಳನ್ನು ಒಳಗೊಂಡೂ ಬದುಕಿನ ನಾಡಿಮಿಡಿತವನ್ನು ಅರಿಯುವತ್ತ ಉತ್ಸುಕವಾಗಿರುತ್ತದೆ. ಇದು ಭಾವನಾ ನೆಲೆಯಲ್ಲಿ ತನ್ನನ್ನು ಕಂಡರಿಸಿಕೊಂಡಾಗ ಅಲ್ಲಿ ಜೀವನಕ್ಕೆ ಬೇಕಾದ ತಾತ್ವಿಕತೆ ದೊರೆಯುತ್ತದೆ. ಈ ಬಗೆಯ ತಾತ್ವಿಕತೆಯಲ್ಲಿ ಹೆಚ್ಚು ನಿರ್ದಿಷ್ಟತೆಯೂ, ವ್ಯಾಪಕತೆಯೂ ಮನೆಮಾಡಿರುತ್ತದೆ.
ತತ್ವವಾದಗಳು ಕೃತಿಕಾರನ ಸಂದರ್ಭದಲ್ಲೂ ವಿಮರ್ಶಕನ ಸಂದರ್ಭದಲ್ಲೂ ಆಯ್ಕೆಯ ವಿಷಯವೇ ಆಗಿರುವುದನ್ನು ಗಮನಿಸಿರಬಹುದು. ಈ ವಿಭಿನ್ನತೆಗೆ ಕಾರಣಗಳೇನು? ಎಂಬುದೂ ಚರ್ಚಾರ್ಹವಾದ ವಿಚಾರವೇ. ವೈಜ್ಞಾನಿಕ ಸತ್ಯಗಳು ನಿರ್ದಿಷ್ಟವಾದುವು. ಅದು ವಸ್ತುಸ್ಥಿತಿಗಳನ್ನು ಆಧರಿಸಿ ಕಟ್ಟಿಕೊಟ್ಟಿ¨ªಾಗಿರುತ್ತದೆ. ಸೂರ್ಯ ಭೂಮಿಯ ಸುತ್ತ ಸುತ್ತುತ್ತಾನೆ ಎಂದರೆ ಅದು ಏಕ ಸತ್ಯ. ಅದರಾಚೆಗೆ ಹೇಳಲು ಏನೂ ಇರುವುದಿಲ್ಲ. ನಮಗೆ ಇನ್ನೊಂದು ಅರ್ಥವೂ ಹೊಳೆಯುವುದಿಲ್ಲ. ವೈಜ್ಞಾನಿಕ ಸತ್ಯಗಳನ್ನು ಮತ್ತೂಂದು ಪಾತಳಿಯ ಮೇಲೆ ಪುನರ್ ರೂಪಿಸುವುದು ಅಸಾಧ್ಯದ ಮಾತು. ಸಾಹಿತ್ಯದಲ್ಲಿ ಸಾಪೇಕ್ಷ ಸತ್ಯವೊಂದನ್ನು ಕಂಡುಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ ಎಲ್ಲರೂ ಒಪ್ಪಬಹುದಾದ ಸೂತ್ರವೊಂದನ್ನು ಕಂಡುಕೊಳ್ಳಲು ಸಾಧ್ಯವಿಲ್ಲ. ನಮ್ಮ ಕಲ್ಪನೆಗಳು ಅಪರಿಮಿತ, ನಾವು ಕಂಡುಕೊಳ್ಳುವ ಸತ್ಯಗಳಂತೆ.
ಈ ಸತ್ಯವೂ ನಮ್ಮ ಅನುಭವದ ಪರಿಧಿಯಲ್ಲಿ ನಾನು ಮಾತ್ರವೇ ಕಂಡುಕೊಳ್ಳುವುದಾಗಿರುತ್ತದೆ. ಹೀಗಾಗಿ ಈ ಸತ್ಯ ಎಲ್ಲರಿಗೂ ಸರಿದೋರಬೇಕೆಂಬ ಹಠಕೂಡಾ ಸಲ್ಲದು. ಇಲ್ಲಿ ಎಲ್ಲರೂ ಸೂರ್ಯರೇ; ಎಲ್ಲವೂ ಭೂಮಿಯೇ. ಸೂರ್ಯ ಭೂಮಿ ಒಂದನ್ನೊಂದು ಅನುಸರಿಸುತ್ತವೆ ಎನ್ನುವ ಸತ್ಯಕ್ಕೂ ಸೂರ್ಯ, ಭೂಮಿ ಎರಡೂ ಒಂದರಲ್ಲೇ ಅಡಕವಾಗಿದೆ, ಒಂದನ್ನೊಂದು ಅನುಸರಿಸುವ ಮಾತು ಎಲ್ಲಿ ಬಂತು ಎಂದಾಗಿನ ಸತ್ಯಕ್ಕೂ ಅಜಗಜಾಂತರ ವ್ಯತ್ಯಾಸವಿದೆ. (ಕ್ವಾಂಟಮ್ ಥಿಯರಿ ಬಂದ ಮೇಲೆ ವಿಜ್ಞಾನದ ಚಿಂತನೆಗಳಲ್ಲಿ ಕೂಡಾ ಒಂದು ದೊಡ್ಡ ಮಾರ್ಪಾಡು ಬರುತ್ತಿರುವುದನ್ನು ಗಮನಿಸಬೇಕು.) ಹೀಗಾಗಿ, ತೀರ್ಮಾನಗಳು ಮತ್ತು ನಿರ್ಧಾರಗಳು ಭಿನ್ನ ಮನೋಭೂಮಿಕೆಯ ಪ್ರತಿಫಲನಗಳೇ ಆಗಿರುವುದು ವ್ಯಕ್ತಿವಾದವೇ ಆಗುತ್ತದೆ. ಕೃತಿಯೊಂದನ್ನು ಅನುಸಂಧಾನಿಸುವ, ಕೇಂದ್ರವನ್ನು ಕಂಡುಕೊಳ್ಳುವವನೂ ವಿಮರ್ಶಕನೇ, ಅದನ್ನು ತನ್ನ ಆಶಯಗಳಿಗೆ ತಕ್ಕಂತೆ ಪುನರ್ ರೂಪಿಸಿ, ವಿನ್ಯಾಸಪಡಿಸುವವನೂ ವಿಮರ್ಶಕನೇ. ಹೀಗಾಗಿ, ಆತ ವ್ಯಕ್ತಿಗತ ಅಭಿಪ್ರಾಯಗಳಿಗೆ ಕೃತಿಯ ಮೂಲಕ ಕೇಂದ್ರವನ್ನು ಕಂಡುಕೊಳ್ಳುತ್ತಾನೆ.
ಜಗತ್ತನ್ನು ಗ್ರಹಿಸುವ ಕ್ರಮದಲ್ಲಿ ಎಲ್ಲರಿಗೂ ಒಂದು ದೃಷ್ಟಿಕೋನವಿರುತ್ತದೆ. ಹಾಗಿದ್ದೂ ನಮ್ಮ ಅಭಿಪ್ರಾಯಗಳು ಸ್ವಲ್ಪದರದÇÉೇ ವ್ಯತ್ಯಾಸವನ್ನು ಹೊಂದುತ್ತಿರುತ್ತವೆ. ಇದರಲ್ಲಿ ಯಾವುದು ಸರಿ ತಪ್ಪು ಎಂದು ಹೇಳುವುದು ಕಷ್ಟವೇ. ನಾನು ಹಿಡಿದಿರುವುದು ದೊಂದಿಯೇ? ಸಣ್ಣ ಮೇಣದ ಬತ್ತಿಯೇ? ಅಥವಾ ಝಗಮಗಿಸುವ ವಿದ್ಯುತ್ ದೀಪವೇ? ಎನ್ನುವುದನ್ನು ಆಧರಿಸಿ ಕಂಡ ಪ್ರಮಾಣವನ್ನು, ಕಂಡ ಪಾರ್ಶ್ವವನ್ನು ನಿರ್ಧರಿಸಬಹುದು. ಹೀಗಾಗಿ, ವಿಮರ್ಶೆ ಎಂದಿಗೂ ಬಹುಮುಖತ್ವವನ್ನು ಹೊಂದಿಕೊಂಡೇ ಬೆಳೆದಿದೆ.
ಕನ್ನಡ ಸಾಹಿತ್ಯದ ಒಂದು ಶತಮಾನದ ಹಕ್ಕಿನೋಟದಲ್ಲಿ ನಮಗೆ ವಿಶೇಷ ಸಂಗತಿಗಳು ಗೋಚರವಾಗುತ್ತವೆ. ಹೊಸದಾಗಿ ಸಾಹಿತ್ಯರಚನೆಗೆ ಆರಂಭಗೊಂಡ ಕಾಲದಿಂದಲೂ ಪ್ರತಿಯೊಬ್ಬ ಸಾಹಿತಿಯೂ ಒಂದಿÇÉೊಂದು ತತ್ವವಾದವನ್ನು ಪ್ರಮುಖ ಮಾಡಿಕೊಂಡೇ ಬರೆದಿ¨ªಾನೆ. ಈ ತತ್ವವಾದಗಳು ಬಹುತೇಕ ಹೊರಗಿನ ಸಾಹಿತ್ಯದ ಪರಿಚಯದಿಂದಲೇ ಬಂದಿರುವುದಾಗಿದೆ. ಅದನ್ನು ಕನ್ನಡ ನೆಲಕ್ಕೆ ಹೀಗೆ ಅನ್ವಯಿಸಬೇಕು ಎನ್ನುವುದನ್ನು ಸಾಹಿತಿಗಳು ಹೆಚ್ಚು ಚಿಂತಿಸಿದಂತೆ ಕಾಣುತ್ತದೆ. ಅದುವರೆವಿಗೂ ಕನ್ನಡಕ್ಕೆ ಅಂತಹದೊಂದು ವೈಚಾರಿಕವಾದ ನೆಲೆಗಟ್ಟು ರೂಪಿಸಿಕೊಳ್ಳಲಾಗದ್ದು ಇದಕ್ಕೆ ಮುಖ್ಯ ಕಾರಣ. ಇಂತಹ ನೆಲೆಗಟ್ಟೊಂದಕ್ಕೆ ತನ್ನ ಬರವಣಿಗೆಯನ್ನು ಹದಗೊಳಿಸಿಕೊಂಡ ನಂತರ, ಅದಕ್ಕೆ ಸಮರ್ಥನೀಯವಾದ ಮಾತುಗಳನ್ನು ಕೊಡುವುದು ಬರಹಗಾರನ ಜವಾಬ್ದಾರಿಯೇ ಆಯಿತು. ವರಕವಿ ಬೇಂದ್ರೆಯವರು ಭೃಂಗದ ಬೆನ್ನೇರಿದ ಬಂತು ಭಾವಗೀತದಲ್ಲಿ ಈ ಬಗ್ಗೆ ಒಂದು ಚರ್ಚೆಯನ್ನು ಬೆಳೆಸಿದರೆ, ಅಡಿಗರು ಪ್ರಾರ್ಥನೆ ಕವಿತೆಯಲ್ಲಿ ಯಲ್ಲಿ ತರ್ಕಬದ್ಧವಾಗಿ ಮೂರ್ತರೂಪವನ್ನು ಕೊಡುವ ಪ್ರಯತ್ನವನ್ನು ಮಾಡುತ್ತಾರೆ. ಇಂತಲ್ಲಿ ಅರ್ಥಗಳನ್ನು ಹುಡುಕುವುದು ಸುಲಭ. ಈ ಅರ್ಥಗಳ ಮೂಲಕ ಕಟ್ಟಿಕೊಡುವ ಚಿಂತನಾಕ್ರಮದೊಳಗೆ ತಾತ್ವಿಕತೆ ಅಡಕವಾಗಿರುತ್ತದೆ. ಇಲ್ಲಿ ಪು.ತಿ.ನರ ಕಾವ್ಯಕೂತೂಹಲ, ಕುವೆಂಪುರವರ ರಸೋವೈಸಃ ಇದಕ್ಕೆ ವಿರುದ್ಧವಾಗಿ ಉದ್ದೇಶಿತ ನೆಲೆಗಳ ಮೂಲಕವೇ ತತ್ವವಾದಗಳನ್ನು ಕಟ್ಟಿಕೊಡಲು ಯತ್ನಿಸುತ್ತವೆ. ಇಲ್ಲಿ ವಿಮರ್ಶೆ ಪಡೆದುಕೊಂಡ ಖಚಿತ ಆಕಾರ ಬೇಂದ್ರೆ, ಅಡಿಗರ ಪದ್ಯಗಳಲ್ಲಿ ಸಾಧ್ಯವಾಗುವುದಿಲ್ಲ. ಇಷ್ಟಾಗಿಯೂ ಈ ಬರಹಗಳ ಹಿಂದೆ ಸಾಹಿತ್ಯ ರಚನೆ ಮತ್ತು ಅದರ ಮೀಮಾಂಸೆಗೆ ಸಂಬಂಧಪಟ್ಟ ಕೆಲ ಸೂಕ್ಷ್ಮ ಹೊಳಹುಗಳು ಇರುತ್ತವೆ. ಇವು ಯಾವುದೇ “ಇಸಂ’ನಿಂದ ತೆಗೆದುಕೊಂಡು ಬಂದ ತತ್ವವಾದಗಳು ಹೇಳಬಹುದಾದಕ್ಕಿಂತ ಸೂಕ್ಷ್ಮವಾಗಿ ವ್ಯವಹರಿಸುತ್ತವೆ. ಇಲ್ಲಿ ಹೊರಗಿನ ಪ್ರಚೋದನೆಗಿಂತ ಒಳಗಿನ ತುರ್ತು ಮುಖ್ಯವಾಗಿರುತ್ತದೆ.
(ಪ್ರಸ್ತಾವನೆಯ ಆಯ್ದ ಭಾಗ)
– ಪಿ. ಚಂದ್ರಿಕಾ