ಹನೂರು: ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ರಾಜ್ಯ ಸರ್ಕಾರ ಜಾರಿಗೊಳಿಸಲಿರುವ ಎಪಿಎಂಸಿ ತಿದ್ದುಪಡಿ ಕಾಯ್ದೆ ರೈತರಿಗೆ ಮಾರಕವಾಗಲಿದೆ ಎಂದು ಶಾಸಕ ಆರ್. ನರೇಂದ್ರ ತಿಳಿಸಿದರು.
ತಾಲೂಕಿನ ಶೆಟ್ಟಳ್ಳಿ, ಕುರಟ್ಟಿ ಹೊಸೂರು, ಕೌದಳ್ಳಿ ಮತ್ತು ದೊಡ್ಡಾಲತ್ತೂರು ಗ್ರಾಪಂಗಳಲ್ಲಿ ನರೇಗಾ ಕಾಮಗಾರಿ ಗಳನ್ನು ಪರಿಶೀಲಿಸಿ ಮಾತನಾಡಿ, ಹಿಂದಿನ ಕಾಯ್ದೆ ಪ್ರಕಾರ ಎಪಿಎಂಸಿ ಮಾರುಕಟ್ಟೆಗಳಲ್ಲಿ ಕೃಷಿ ಉತ್ಪನ್ನಗಳನ್ನು ನೋಂ ದಾಯಿತ ದಲ್ಲಾಳಿಗಳು ಬೆಂಬಲ ಬೆಲೆ ನೀಡಿ ಖರೀದಿಸು ತ್ತಿದ್ದರು. ದಲ್ಲಾಳಿಗಳು ಮಾರುಕಟ್ಟೆಯಲ್ಲಿ ಠೇವಣಿ ಇಟ್ಟು, ಷೇರು ಖರೀದಿಸಿ ನೋಂದಾಯಿಸಿ ಕೊಳ್ಳುತ್ತಿದ್ದರು.
ಇದರಿಂದ ದಲ್ಲಾಳಿಗಳು ವಂಚನೆಯಿಲ್ಲದೇ ರೈತರಿಗೆ ಹಣ ನೀಡುತ್ತಿದ್ದರು. ಹೊಸ ಕಾಯ್ದೆಯನ್ವಯ ಕಾರ್ಪೊರೇಟ್ ಕಂಪೆನಿಗಳು ಠೇವಣಿ, ನೋಂದಣಿ ಇಲ್ಲದೆ ನೇರವಾಗಿ ಬಿಡ್‌ನಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಿದೆ. ಇದು ರೈತರಿಗೆ ಮಾರಕವಾಗಲಿದೆ. ಈ ಕಾಯ್ದೆ ಯನ್ನು ಕಾಂಗ್ರೆಸ್ ಪಕ್ಷ ತೀವ್ರವಾಗಿ ವಿರೋಧಿಸುತ್ತದೆ ಎಂದರು.
ಸಂಪುಟ ಒಪ್ಪಿಗೆ ಪಡೆದಿಲ್ಲ: ಯಾವುದೇ ಕಾಯ್ದೆ ಜಾರಿ ಅಥವಾ ತಿದ್ದುಪಡಿ ಮಾಡಬೇಕಾದರೆ ವಿಧಾನಸಭಾ ಅಧಿ ವೇಶನದಲ್ಲಿ ಆ ಕಾಯ್ದೆಯ ಸಾಧಕ-ಬಾಧಕವನ್ನು ಚರ್ಚಿಸಿ ಜಾರಿಗೊಳಿಸಬೇಕು. ತುರ್ತು ಅವಶ್ಯವಿದ್ದಲ್ಲಿ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ರಾಷ್ಟ್ರಪತಿಗಳ ಅಂಗೀಕಾರ ಪಡೆದು ಜಾರಿಗೊಳಿಸಬೇಕು. ಎಪಿಎಂಸಿ ಕಾಯ್ದೆ ಜಾರಿಗೊಳಿಸಲು ಈ ಯಾವ ನಿಯಮಗಳನ್ನೂ ಅನುಸರಿಸಿಲ್ಲ.
ಇಂತಹ ಕಾಯ್ದೆ ಜಾರಿಗೆ ತರುವ ಸರ್ಕಾರದ ಕ್ರಮ ಸರಿಯಲ್ಲ ಎಂದರು. ಈ ವೇಳೆ ತಾಪಂ ಇಒ ಡಾ.ಪ್ರಕಾಶ್, ತಾಪಂ ಸದಸ್ಯ ಗೋವಿಂದ, ಪಿಡಿಒಗಳಾದ ಗೋವಿಂದ, ಮಹದೇವು, ಪ್ರದೀಪ್ ಗ್ರಾಪಂ ಅಧ್ಯಕ್ಷರು, ಸದಸ್ಯರು, ಚಾಂದ್‌ಪಾಷ, ಮೆಹಬೂಬ್ ಷರೀಫ್, ವಾಜೀದ್, ಶಿವಣ್ಣ, ಶ್ರೀರಂಗ, ಗೋವಿಂದ ರವಿಚಂದ್ರ ಇತರರಿದ್ದರು.