Advertisement

ಸಂವಿಧಾನ ವಿರೋಧಿ ಹೇಳಿಕೆ ಅಜ್ಞಾನಿಗಳದ್ದು: ಶರಣಪ್ರಕಾಶ

12:29 PM Jan 26, 2018 | |

ಚಿಂಚೋಳಿ: ಭಾರತ ರತ್ನ ಡಾ| ಬಿ.ಆರ್‌. ಅಂಬೇಡ್ಕರ್‌ ಅವರು ಬರೆದ ಸಂವಿಧಾನವನ್ನು ಇಡೀ ಜಗತ್ತೇ ಒಪ್ಪಿಕೊಂಡಿದ್ದು, ಪ್ರಜಾಪ್ರಭುತ್ವ ಗಟ್ಟಿಯಾಗಿರುವುದು ಕೇವಲ ಸಂವಿಧಾನದಿಂದಲೆ. ನಮ್ಮ ದೇಶದ ಸಂವಿಧಾನದ ಬಗ್ಗೆ ಗೊತ್ತಿಲ್ಲದ ಅಜ್ಞಾನಿಗಳು ಇಲ್ಲ ಸಲ್ಲದ ಹೇಳಿಕೆ ನೀಡುತ್ತಿದ್ದಾರೆ. ಅವರಿಗೆ ಪರಿಜ್ಞಾನವೇ ಇಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ| ಶರಣಪ್ರಕಾಶ ಪಾಟೀಲ ಹೇಳಿದರು.

Advertisement

ತಾಲೂಕಿನ ಹಸರಗುಂಡಗಿ ಗ್ರಾಮದಲ್ಲಿ ಗುರುವಾರ ಭಾರತ ರತ್ನ ಸಂವಿಧಾನ ಶಿಲ್ಪಿ ಡಾ| ಬಿ.ಆರ್‌. ಅಂಬೇಡ್ಕರ್‌ ಪುತ್ಥಳಿ ಅನಾವರಣ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಡಾ| ಬಿ.ಆರ್‌.ಅಂಬೇಡ್ಕರ್‌ಯಾವುದೇ ಒಂದು ವರ್ಗಕ್ಕೆ ಸೀಮಿತರಾದವರಲ್ಲ. ಅವರು ಎಲ್ಲ ಶೋಷಿತ ವರ್ಗದ ಮಹಾನ್‌ ನಾಯಕರಾಗಿದ್ದಾರೆ. ದೌರ್ಜನ್ಯ ಮತ್ತು ಅಸಮಾನತೆ ವಿರುದ್ಧ ಸಾಕಷ್ಟು ಹೋರಾಟ ಮಾಡಿದ್ದಾರೆ. ಸಂವಿಧಾನ ರಚಿಸುವುದಕ್ಕಾಗಿ ಅನೇಕ ದೇಶಗಳಲ್ಲಿ ಇರುವ ಸಂವಿಧಾನವನ್ನು ಹಗಲು ರಾತ್ರಿ ಕಷ್ಟಪಟ್ಟು ಓದಿ ನಮ್ಮದೇ ಆಗಿರುವ ಸಂವಿಧಾನ ರಚಿಸಿದ್ದಾರೆ. ಆದರೆ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಸಂವಿಧಾನವನ್ನು ಬದಲಾಯಿಸಲು ನಾವು ಆಯ್ಕೆಗೊಂಡು ಬಂದಿದ್ದೇವೆ ಎಂದು ಹೇಳಿದ್ದಾರೆ.

ಕಲಬುರಗಿ ನಗರಕ್ಕೆ ಬಂದಾಗ ನಾಲಾಯಕ ಎಂಬ ಪದ ಬಳಸಿ ಮಾತನಾಡಿದ್ದಾರೆ ಬಹುಶಃ ಅವರು ಬಿಜೆಪಿ ನಾಯಕರೇ ನಾಲಾಯಕ ಆಗಿರಬಹುದೆಂದು ಹೀಗೆ ಮಾತನಾಡಿರಬಹುದು ಎಂದು ಟೀಕಿಸಿದರು.

ಪ್ರವಾಸೋದ್ಯಮ ಸಚಿವ ಡಾ| ಪ್ರಿಯಾಂಕ್‌ ಖರ್ಗೆ ಮಾತನಾಡಿ, ದೇಶದ ಮಹಾನ್‌ ನಾಯಕ ಆಗಿರುವ ಡಾ| ಬಿ.ಆರ್‌.ಅಂಬೇಡ್ಕರ್‌ ಅವರನ್ನು ದಲಿತ ನಾಯಕನೆಂದು ಬಿಂಬಿಸುತ್ತಾ ಬರುತ್ತಿದ್ದೇವೆ. ಸಂವಿಧಾನದ ಬಗ್ಗೆ ಕೆಲವರು
ಬಹಳಷ್ಟು ಹಗುರವಾಗಿ ಮಾತನಾಡುತ್ತಿದ್ದಾರೆ.

Advertisement

ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಅವರು ಸಂವಿಧಾನವನ್ನೇ ಬದಲಾಯಿಸುತ್ತೇವೆಂದು ಹೇಳಿದ್ದಾರೆ. ಆದರೆ ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ, ಜಗದೀಶ ಶೆಟ್ಟರ್‌, ಕೆ.ಎಸ್‌.ಈಶ್ವರಪ್ಪ, ಆರ್‌.ಅಶೋಕ ಯಾರೂ ಈ ಕುರಿತು ಚಕಾರ ಎತ್ತಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಸಂಸದೀಯ ಕಾರ್ಯದರ್ಶಿ ಡಾ| ಉಮೇಶ
ಜಾಧವ್‌ ಮಾತನಾಡಿ ಡಾ| ಬಿ.ಆರ್‌. ಅಂಬೇಡ್ಕರ್‌ ಮತದಾನ ಹಕ್ಕು ನೀಡದಿದ್ದರೆ ಪ್ರಜಾಪ್ರಭುತ್ವ ಜೀವಂತ ಇರುತ್ತಿರಲಿಲ್ಲ ಎಂದರು.

ಸಂಘಾನಂದ ಬಂತೇಜಿ ಬುದ್ಧ ವಂದನೆ ಹೇಳಿದರು. ಜಿಪಂ ಮಾಜಿ ಅಧ್ಯಕ್ಷ ಭೀಮರಾವ್‌ ತೇಗಲತಿಪ್ಪಿ ಮಾತನಾಡಿದರು. ಹಸರಗುಂಡಿ ಗ್ರಾಪಂ ಅಧ್ಯಕ್ಷ ಶಾಂತಕುಮಾರ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಸದಸ್ಯ ಗೌತಮ ಪಾಟೀಲ, ಜಿಪಂ ಮಾಜಿ ಅಧ್ಯಕ್ಷ ದೀಪಕನಾಗ ಪುಣ್ಯಶೆಟ್ಟಿ, ಸಂಜೀವ ಮೇತ್ರಿ, ಗೋಪಾಲರಾವ್‌ ಕಟ್ಟಿಮನಿ, ಪ್ರಭು ಲೇವಡಿ, ತಾಪಂ ಅದ್ಯಕ್ಷೆ ರೇಣುಕ ಚವ್ಹಾಣ ಇದ್ದರು. ರಾಮಣ್ಣ ಗೌತಮ ಸ್ವಾಗತಿಸಿದರು, ಜಗದೇವ ಗೌತಮ ನಿರೂಪಿಸಿದರು, ಕಾಶಿನಾಥ ಸಿಂಧೆ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next