Advertisement

ಬಿಜೆಪಿಗೆ ಉತ್ತರ ಮಾದರಿ: ಕಾರ್ಯಕ್ರಮ ಅನುಷ್ಠಾನ ತಂಡ ಪ್ರಕಟ

06:05 AM Sep 24, 2017 | Team Udayavani |

ಬೆಂಗಳೂರು: ಮುಂದಿನ ವರ್ಷದ ವಿಧಾನಸಭೆ ಚುನಾವಣೆಗೆ ಸಜ್ಜಾಗುತ್ತಿರುವ ರಾಜ್ಯ ಬಿಜೆಪಿ, ಅಮಿತ್‌  ಶಾ ಅವರ ನಿರ್ದೇಶನದ ಮೇರೆಗೆ ಕಾರ್ಪೊರೇಟ್‌ ಮಾದರಿ ಯಲ್ಲಿ ರಾಜ್ಯ ಮಟ್ಟದ ಕಾರ್ಯಕ್ರಮ ಅನುಷ್ಠಾನ ತಂಡಗಳನ್ನು ರಚನೆ ಮಾಡಿ, ಜವಾಬ್ದಾರಿ ಹಂಚಿದೆ.

Advertisement

ಪ್ರತಿ ತಂಡಕ್ಕೂ “ಮುಖ್ಯಸ್ಥ’ ಹುದ್ದೆ ಸೃಷ್ಟಿಸಿ ಜವಾಬ್ದಾರಿ ನೀಡಿದರೆ, ಬಿಕ್ಕಟ್ಟು ಸೃಷ್ಟಿಯಾಗಬಹುದು ಎಂಬ ಕಾರಣದಿಂದಾಗಿ ಕಾರ್ಪೊರೇಟ್‌ ಶೈಲಿಯಲ್ಲಿ “ಟೀಂ’ ಗಳನ್ನು ಮಾಡಿ ಇದಕ್ಕೆ ಬಿ.ಪಿ. ಅರುಣ್‌ಕುಮಾರ್‌, ಡಿ.ವಿ.ಸದಾನಂದಗೌಡ ಮತ್ತು ಪ್ರಹ್ಲಾದ್‌ ಜೋಶಿ ಅವರಿಗೆ ಹೊಣೆ ನೀಡಲಾಗಿದೆ. ವಿಶೇಷವೆಂದರೆ ಇದೇ ಮಾದರಿಯನ್ನು ಉತ್ತರ ಪ್ರದೇಶದಲ್ಲೂ ಅಳವಡಿಸಿದ್ದ ಬಿಜೆಪಿ, ಅಲ್ಲಿ ಸಂಪೂರ್ಣ ಯಶಸ್ಸು ಸಾಧಿಸಿತ್ತು. 

ಒಟ್ಟು ಮೂರು ತಂಡಗಳನ್ನು ರಚಿಸಲಾಗಿದ್ದು, ಅವುಗಳಿಗೆ ಅಧ್ಯಕ್ಷರನ್ನು ನೇಮಕ ಮಾಡದೇ ಇದ್ದರೂ ಬೂತ್‌ ಸಮಿತಿಗೆ ಬಿಜೆಪಿ ಸಂಘಟನಾ ಕಾರ್ಯದರ್ಶಿ ಬಿ.ಪಿ.ಅರುಣ್‌ಕುಮಾರ್‌, ಸಾಂಪ್ರದಾಯಿಕ ಪ್ರಚಾರ ತಂಡಕ್ಕೆ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಮತ್ತು ಸಾಮಾಜಿಕ ಜಾಲ ತಾಣದ ಪ್ರಚಾರ ತಂಡಕ್ಕೆ ಮಾಜಿ ರಾಜ್ಯಾಧ್ಯಕ್ಷ ಪ್ರಹ್ಲಾದ ಜೋಶಿ ಅವರಿಗೆ ನೇತೃತ್ವ ವಹಿಸಲಾಗಿದೆ.

ಯಡಿಯೂರಪ್ಪ ಮತ್ತು ಬಿಜೆಪಿ ರಾಷ್ಟ್ರೀಯ ಜಂಟಿ ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ವಿರುದಟಛಿ ತಿರುಗಿ ಬಿದ್ದು ಪಕ್ಷದಲ್ಲಿ ಜವಾಬ್ದಾರಿ ಕಳೆದುಕೊಂಡವರಿಗೂ ಸ್ಥಾನ ಕಲ್ಪಿಸಲಾಗಿದೆ.

ಈ ಮೂಲಕ ಪಕ್ಷದಲ್ಲಿ ಎಲ್ಲವೂ ಸರಿಹೋಗಿದೆ ಎಂಬ ಸಂದೇಶ ಕಳುಹಿಸಲಾಗಿದೆ. ಬೂತ್‌ ಸಮಿತಿಗಳಿಗೆ ನೇಮಕಗೊಂಡಿರುವ 38 ಮಂದಿ ಪೈಕಿ ಯಡಿಯೂರಪ್ಪ ಅವರ ವಿರುದಟಛಿ ತಿರುಗಿಬಿದ್ದಿದ್ದವರಿಗೆ ಹೆಚ್ಚಿನ ಸ್ಥಾನಮಾನ ನೀಡಲಾಗಿದೆ. ಆದರೆ, ಇವರು ಮೊದಲಿನಿಂದಲೂ ತಳ ಮಟ್ಟದಲ್ಲಿ ಪಕ್ಷ ಸಂಘಟನೆಯಲ್ಲಿ ತೊಡಗಿದ್ದರಿಂದ ಅವಕಾಶ ಕಲ್ಪಿಸಲಾಗಿದೆಯೇ ಹೊರತು ಬಣ ರಾಜಕಾರಣದ ಉದ್ದೇಶದಿಂದ ಅಲ್ಲ ಎಂದು ಪಕ್ಷದ ಮೂಲಗಳು ತಿಳಿಸಿವೆ. ಬಿಎಸ್‌ವೈ ವಿರುದಗಟಛಿ ತಿರುಗಿಬಿದ್ದು, ಪಕ್ಷದ ರಾಜ್ಯ ಉಪಾಧ್ಯಕ್ಷ ಸ್ಥಾನ ಕಳೆದುಕೊಂಡಿದ್ದ ಭಾನುಪ್ರಕಾಶ್‌ ಮತ್ತು ನಿರ್ಮಲ್‌ಕುಮಾರ್‌ ಸುರಾನ ಅವರಿಗೆ ಬೂತ್‌ ಸಮಿತಿಗಳಲ್ಲಿ ಅವಕಾಶ ಕಲ್ಪಿಸಲಾಗಿದೆ.

Advertisement

ಅದೇ ರೀತಿ ಸಂತೋಷ್‌ ವಿರುದಟಛಿ ಹೇಳಿಕೆ ನೀಡಿ ಬಿಜೆಪಿ ರೈತ ಮೋರ್ಚಾ ಉಪಾಧ್ಯಕ್ಷ ಸ್ಥಾನ ಕಳೆದುಕೊಂಡಿದ್ದ ಮಾಜಿ ಸಚಿವ ರೇಣುಕಾಚಾರ್ಯಗೆ ಮತ್ತು ವಕ್ತಾರ ಸ್ಥಾನ ಕಳೆದುಕೊಂಡು ಮತ್ತೆ ಆ ಸ್ಥಾನ ಪಡೆದಿರುವ ಗೋ.ಮಧುಸೂಧನ್‌ ಅವರಿಗೆ ಅಸಾಂಪ್ರದಾಯಿಕ ಪ್ರಚಾರ ಸಮಿತಿಯಲ್ಲಿ ಸ್ಥಾನ ನೀಡಲಾಗಿದೆ. ಪಕ್ಷ ಸೇರಿದವರಿಗೂ ಅವಕಾಶ: ಇತ್ತೀಚೆಗೆ ಪಕ್ಷ ಸೇರಿದವರಿಗೂ ಈ ತಂಡಗಳಲ್ಲಿ ಅವಕಾಶ ನೀಡಲಾಗಿದೆ. ಮಾಜಿ ಸಿಎಂ ಎಸ್‌. ಎಂ.ಕೃಷ್ಣ, ಕೆ.ಪಿ.ನಂಜುಂಡಿ, ಕುಮಾರ್‌ ಬಂಗಾರಪ್ಪಗೆ ಸ್ಥಾನ ನೀಡಲಾಗಿದೆ.

ಏನಿದು ತಂಡಗಳು?
ರಾಜ್ಯದಲ್ಲಿ ಬೂತ್‌ ಕಮಿಟಿಗಳನ್ನು ಬಲಗೊಳಿಸಿ ಸ್ಥಳೀಯವಾಗಿ ಸಂಘಟನೆಯನ್ನು ಬಲಪಡಿಸಲು ಅನುಕೂಲವಾಗುವಂತೆ ಬೂತ್‌ ಕಮಿಟಿಗಳ ಕಾರ್ಯಚಟುವಟಿಕೆಗಳ ಬಗ್ಗೆ ನಿಗಾ ಇಡಲು ಬೂತ್‌ ಸಮಿತಿ ರಚಿಸಲಾಗಿದೆ. ಸಮಿತಿಯಲ್ಲಿರುವ 36 ಮಂದಿಯನ್ನು ಪ್ರತಿ ಸಂಘಟನೆ ಜಿಲ್ಲೆಗೊಂದರಂತೆ ಉಸ್ತುವಾರಿಗಳಾಗಿ ನೇಮಿಸಿದ್ದು, ಬೂತ್‌ ಕಮಿಟಿಗಳ ರಚನೆ ಸೇರಿದಂತೆ ಅವುಗಳ ಒಟ್ಟಾರೆ ಕಾರ್ಯಚಟುವಟಿಕೆಗಳ ಮೇಲೆ ಇದು ಗಮನಹರಿಸಲಿದೆ. ಅದೇ ರೀತಿ ಮುಂಬರುವ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತ  ಹೋರಾಟ, ಪ್ರತಿಭಟನೆ, ಅಭಿಯಾನ, ಆಂದೋಲನ ಸೇರಿದಂತೆ ಸಾಂಪ್ರದಾಯಿಕ ಪ್ರಚಾರದ ಮಾರ್ಗಸೂತ್ರಗಳನ್ನು ಸಿದಟಛಿಪಡಿಸಲು ಸಾಂಪ್ರದಾಯಿಕ ಪ್ರಚಾರ ತಂಡ ಹಾಗೂ ಸಾಮಾಜಿಕ ಜಾಲತಾಣ, ಡಿಜಿಟಲ್‌ ಮೀಡಿಯಾ, ವಾಟ್ಸ್‌ಆ್ಯಪ್‌, ಫೇಸ್‌ಬುಕ್‌, ಟ್ವಿಟರ್‌ಗಳ ಮೂಲಕ ಪ್ರಚಾರ ಕೈಗೊಳ್ಳಲು ಆಧುನಿಕ ಪ್ರಚಾರ ತಂಡಗಳನ್ನು ರಚಿಸಲಾಗಿದೆ.

ಬೂತ್‌ ಸಮಿತಿ
ಬಿ.ಪಿ.ಅರುಣ್‌ಕುಮಾರ್‌, ಎನ್‌. ರವಿಕುಮಾರ್‌, ಸಿ.ಟಿ.ರವಿ, ನಳಿನ್‌ಕುಮಾರ್‌ ಕಟೀಲ್‌, ವಿಶ್ವೇಶ್ವರ ಹೆಗಡೆ ಕಾಗೇರಿ, ತುಳಸಿ ಮುನಿರಾಜು ಗೌಡ, ಭಾರತಿ ಮುಗುªಂ, ಭಾನುಪ್ರಕಾಶ್‌, ಡಾ.ಶಿವಯೋಗಿಸ್ವಾಮಿ, ಗಿರೀಶ್‌ ಪಟೇಲ್‌, ಎನ್‌.ವಿ.ಫ‌ಣೀಶ್‌,ಉದಯಕುಮಾರ್‌ ಶೆಟ್ಟಿ, ಜಿ.ಎಂ.ಸುರೇಶ್‌,ಮಹೇಶ್‌ ಟೆಂಗಿನಕಾಯಿ, ಸಚ್ಚಿದಾನಂದಮೂರ್ತಿ, ಎಸ್‌.ವಿ.ರಾಘವೇಂದ್ರ, ತುಕಾರಾಮ್‌ ಶೆಟ್ಟಿ, ಗುರುಮೂರ್ತಿ ಶಿವಮೊಗ್ಗ, ಅಶೋಕ್‌ ಗಸ್ತಿ, ಎಂ.ಬಿ.ನಂದೀಶ್‌, ಎಚ್‌.ಆರ್‌.ಸುರೇಶ್‌ಬಾಬು, ಜಿ.ಕೃಷ್ಣ, ಪ್ರಸಾದ್‌ ಕುಮಾರ್‌, ಯತೀಶ್‌ ಆರಾÌರ್‌, ಗಣೇಶ್‌ರಾವ್‌, ಜಯತೀರ್ಥ ಕಟ್ಟಿ, ಪ್ರಕಾಶ್‌ ಅಕ್ಕಲಕೋಟೆ, ರವಿ ಚಂದ್ರಶೇಖರ್‌ ಹಿರೇಮs…, ದತ್ತಾತ್ರೇಯ ತುಗಾಂವಕರ್‌, ಎಂ.ಡಿ.ಎನಿಲ್‌ಕುಮಾರ್‌ ನಾಯ್ಡು, ಎನ್‌.ಪ್ರಮೋದ ಗೌಡ, ಕಾಂತರಾಜ್‌, ದಶರಥ ಎ.ವೈಲಾಯ, ನಿರ್ಮಲ್‌ಕುಮಾರ್‌ ಸುರಾನ, ಮಲ್ಲಿಕಾರ್ಜುನ ಸಾಹುಕಾರ್‌, ಕೇಶವಪ್ರಸಾದ್‌, ಬಂಡೇಶ್‌ ವಲ್ಕಂದಿನ್ನಿ 

Advertisement

Udayavani is now on Telegram. Click here to join our channel and stay updated with the latest news.

Next