Advertisement
ತಾಲೂಕಿನ ಹುಡಗಿ ಗ್ರಾಮದ ಚನ್ನಮಲ್ಲೇಶ್ವರ ವಿರಕ್ತಮಠದಲ್ಲಿ ಏರ್ಪಡಿಸಲಾಗಿದ್ದ ಬೀದರ ಜಿಲ್ಲಾ ಮಠಾಧೀಶರ ಒಕ್ಕೂಟದ 24ನೇ ಸಮಾವೇಶ ಹಾಗೂ ಲಿ| ಹಾನಗಲ್ಲ ಗುರುಕುಮಾರೇಶ್ವರ 150ನೇ ಜಯಂತಿ ಮಹೋತ್ಸವ ಕಾರ್ಯಕ್ರಮದಲ್ಲಿ ಸ್ವಾಮೀಜಿ ಮಾತನಾಡಿದರು.
ಸಂಪತಭರಿತ ಹಾಗೂ ಬಲಿಷ್ಟವಾದ ಭಾರತ ದೇಶ ಯಾವ ಕಾರಣಕ್ಕೆ ಗುಲಾಮಗಿರಿಗೆ ಒಳಗಾಗಿತ್ತು ಎಂಬುದನ್ನು ಇತಿಹಾಸದಿಂದ ತಿಳಿದುಕೊಳ್ಳಬೇಕು. ನಮ್ಮವರೇ ನಮ್ಮ ಸಮಾಜಕ್ಕೆ ಕಂಟಕವಾಗಿರುವುದರಿಂದ ಸಮಾಜದಲ್ಲಿ ಗೊಂದಲಗಳು ಸೃಷ್ಟಿಯಾಗುತ್ತಿವೆ. ದೇಶದ ಎಲ್ಲ ಧರ್ಮಗಳಲ್ಲಿಯೂ ಸಮಸ್ಯೆಗಳು ಇವೇ. ಹಾಗೇ ವೀರಶೈವ ಲಿಂಗಾಯತ ಹಾಗೂ ಲಿಂಗಾಯತ ಮಧ್ಯೆ ಕೂಡ ಸಣ್ಣ ಸಮಸ್ಯೆ ಇದೆ. ಸಮಸ್ಯೆ ಇದೆ ಎಂದು ತಿಳಿದುಕೊಂಡು ಸಮಾಜ ಒಡೆಯುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು. ಇತರೆ ಧರ್ಮಗಳಲ್ಲಿನ ಸಮಸ್ಯೆಗಳಿಗೆ ಕೈಹಾಕಲು ರಾಜಕೀಯ ಪಕ್ಷಗಳಿಗೆ ಶಕ್ತಿ ಇಲ್ಲ. ಕಾರಣ ಎಲ್ಲವನ್ನು ಸಹಿಸಿಕೊಳ್ಳುವ ಸಮಾಜವನ್ನು ಒಡಯುವ ಕೆಲಸಕ್ಕೆ ಮುಂದಾಗಿದ್ದು, ಅದರ ಫಲ ಅವರಿಗೆ ದೊರೆಯುತ್ತದೆ ಎಂದು ಹೇಳಿದರು.
Related Articles
Advertisement
ಬೀದರ ಜಿಲ್ಲಾ ಮಠಾಧೀಶರ ಮುಖ್ಯಸ್ಥ ಜಯಶಾಂತಲಿಂಗ ಮಹಾಸ್ವಾಮಿಗಳು ಮಾತನಾಡಿ, ಹಾನಗಲ್ಲ ಕುಮಾರಶಿವಯೋಗಿಗಳು ವೀರಶೈವ ಲಿಂಗಾಯತ ಧರ್ಮಕ್ಕೆ ನೀಡಿದ ಕೂಡುಗೆ ಅಪಾರವಾಗಿದೆ. ಶಿವಯೋಗ ಮಂದಿರದಲ್ಲಿ ಕೇವಲ ಜಂಗಮರಿಗೆ ಪ್ರವೇಶವಿದೆ ಎಂದು ಹೇಳಲಾಗುತ್ತಿದೆ.ಅದು ಸತ್ಯಕ್ಕೆ ದೂರವಾದ ಮಾತು. ಭಾಲ್ಕಿ ಪಟ್ಟದೇವರು ಲಿಂಗಾಯತರಾದರು ಕೂಡ ಅದೇ ಶಿವಯೋಗ ಮಂದಿರದಲ್ಲಿ ಧಾರ್ಮಿಕ ಹಾಗೂ ಆಧ್ಯಾತ್ಮಿಕ ಬೋಧನೆ ಪಡೆದಿದ್ದಾರೆ. ಅಲ್ಲದೇ ಅನೇಕ ಪ್ರಮುಖ ಮಠಾಧೀಶರು ಕೂಡ ಇದೇ ಶಿವಯೋಗ ಮಂದಿರದಲ್ಲಿ ಬೋಧನೆ ಪಡೆದಿದ್ದಾರೆ ಎಂದು ಹೇಳಿದರು. ವಿರೂಪಾಕ್ಷ ಶಿವಾಚಾರ್ಯರು, ಚನ್ನಮಲ್ಲ ದೇವರು, ಗುರುಲಿಂಗ ಶಿವಾಚಾರ್ಯರು, ಶಾಂತವೀರ ಶಿವಾಚಾರ್ಯರು, ಹಾವಲಿಂಗೇಶ್ವರ ಶಿವಾಚಾರ್ಯರು, ಸಿದ್ದಲಿಂಗ ಶಿವಾಚಾರ್ಯರು, ಶ್ರೀಪತಿ ಪಂಡಿತಾರಾಧ್ಯ ಶಿವಾಚಾರ್ಯರು, ಚಂದ್ರಶೇಖರ ಶಿವಾಚಾರ್ಯರು, ಅಭಿನವ ಘನಲಿಂಗ ರುದ್ರಮಿನಿ ಶಿವಾಚಾರ್ಯರು, ಚಿದಾನಂದ ಮಹಾಸ್ವಾಮಿಗಳು, ಶರಣಬಸವ ದೇವರು, ಡಾ| ಈಶ್ವರಾನಂದ ಮಹಾಸ್ವಾಮಿಗಳು ಸೇರಿದಂತೆ ಅನೇಕ ಶ್ರೀಗಳು ಇದ್ದರು.