Advertisement
ಡಿಜಿಟಲ್ ಗ್ರಾಮದ ಘೋಷಣೆ ಕಾರ್ಯಕ್ರಮದಲ್ಲಿ ಮಾತನಾಡಿದ, ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಅಧ್ಯಕ್ಷ ರವಿಚಂದ್ರ, ಇಂದು ತಂತ್ರಜ್ಞಾನದ ಬಳಕೆಯಿಂದ ಗ್ರಾಮೀಣ ಭಾಗದಲ್ಲಿ ಅದರಲ್ಲೂ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕ್ರಾಂತಿಕಾರ ಬದಲಾವಣೆಗಳು ಆಗುತ್ತಿರುವುದು ಉತ್ತಮ ಬೆಳವಣಿಗೆ ಎಂದರು.
Related Articles
Advertisement
ಶೆರೆವಾಡ ಗ್ರಾಮವನ್ನು ಡಿಜಿಟಲ್ ಗ್ರಾಮವೆಂದು ಘೋಷಿಸಿ ಮಾತನಾಡಿದ ಸಿಂಡಿಕೇಟ್ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒ ಶ್ರೀವಾಸ್ತವ ಅವರು, ಸಂಪೂರ್ಣ ನಗದು ರಹಿತ ವ್ಯವಹಾರವನ್ನು ಅಳವಡಿಸಿಕೊಳ್ಳುವುದರ ಮೂಲಕ ಶೆರೆವಾಡ ಗ್ರಾಮ ದೇಶದ ನಕ್ಷೆಯಲ್ಲಿ ಹೊಸ ರೀತಿಯಲ್ಲಿ ಗುರುತಿಸಲ್ಪಡುತ್ತಿದೆ ಎಂದರು.
ಇಂದು ಸ್ಮಾರ್ಟ್ ಫೋನ್‌ಗಳು, ಆಧಾರ್ ಜೋಡಣೆಯ ಬ್ಯಾಂಕ್ ಖಾತೆಗಳು, ಮೊಬೈಲ್ ಬ್ಯಾಂಕಿಂಗ್ ಸೇವೆಗಳು ಹಾಗೂ ಮೈಕ್ರೋ ಎಟಿಎಂಗಳು ಗ್ರಾಹಕರಿಗೆ ಉಪಯುಕ್ತ ಹಾಗೂ ಬ್ಯಾಂಕಿಂಗ್ ವ್ಯವಹಾರಗಳನ್ನು ನಗದು ರಹಿತವಾಗಿ ಮಾಡುವಲ್ಲಿ ಸಹಾಯಕವಾಗಿವೆ ಎಂದರು. ಇದೇ ಸಂದರ್ಭದಲ್ಲಿ ಇತ್ತೀಚೆಗೆ ನಿಧನರಾದ ಸಚಿವ ಮಹದೇವ ಪ್ರಸಾದ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷ ಹೊಳೆಯಪ್ಪ ಕುರಿ, ರಾಜ್ಯ ಎಸ್‌ಎಲ್ ಬಿಸಿ ಕನ್ವೇನರ್ ಮೋಹನ ರೆಡ್ಡಿ, ಸಿಂಡಿಕೇಟ್ ಬ್ಯಾಂಕ್ ಮಹಾಪ್ರಬಂಧಕ ಸತೀಶ ಕಾಮತ, ವಲಯ ವ್ಯವಸ್ಥಾಪಕ ಬಸವಯ್ಯ, ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‌ನ ಮಹಾಪ್ರಬಂಧಕ ಕೆ.ಸುಬ್ಟಾರಾವ್, ಬಾಲಕೃಷ್ಣ ದಾಸರಿ, ವಲಯ ವ್ಯವಸ್ಥಾಪಕ ಬಸವರಾಜ ಹೊಲಕಾರ ಸೇರಿದಂತೆ ಗ್ರಾಮದ ಜನರು ಇದ್ದರು.