ಶುಂಠಿ ಆಹಾರದಲ್ಲಿ ಬಳಸುವ ಒಂದು ಪ್ರಮುಖ ವಸ್ತು. ನಿತ್ಯವೂ ಆಹಾರದಲ್ಲಿ ಇದನ್ನು ಬಳಸುವುದರಿಂದ ಆರೋ ಗ್ಯಕ್ಕೆ ಸಾಕಷ್ಟು ಲಾಭವಿದೆ. ಸಾಮಾನ್ಯವಾಗಿ ಗಂಟಲಿನ ಕೆರೆತ, ಕೆಮ್ಮು, ಶೀತ ಬಾಧೆ ಇದ್ದರಷ್ಟೇ ಬಳಸುವುದಲ್ಲ. ಬದಲಾಗಿದೆ ನಿತ್ಯವೂ ಆಹಾರದಲ್ಲಿ ಬಳಸಿದರೆ ದೀರ್ಘ ಕಾಲದ ಆರೋಗ್ಯ ಸಮಸ್ಯೆಗಳನ್ನೂ ನಿವಾರಿಸಲು ಸಾಧ್ಯವಿದೆ.
ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುವಲ್ಲಿ ಶುಂಠಿ ಬಹಳ ಪ್ರಯೋಜನಕಾರಿಯಾಗಿದೆ. ದಾಳಿಂಬೆ ಮತ್ತು ಕೆಲವು ಹಣ್ಣುಗಳಿಂದ ಮಾತ್ರ ಸಿಗುವಂತ ಆ್ಯಂಟಿಓಕ್ಸಿ ಡೆಂಟ್‌ನ ಗುಣವನ್ನು ಇದು ಹೊಂದಿದೆ. ಇದು ಜೀವ ಕೋ ಶಗಳಿಗೆ ಉಂಟಾಗುವ ಹಾನಿಯನ್ನು ತಡೆಗಟ್ಟಿ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ. ಒತ್ತಡ, ಮಧು ಮೇಹ, ಸ್ಟ್ರೋಕ್, ಕ್ಯಾನ್ಸರ್ ನಂತಹ ಕಾಯಿಲೆಗಳಿಂದ ರಕ್ಷಣೆಯನ್ನು ಒದಗಿಸುತ್ತದೆ.
ಉರಿಯೂತ ಸಾಮಾನ್ಯವಾಗಿ ಎಲ್ಲರನ್ನೂ ಕಾಡುತ್ತದೆ. ಆದರೆ ಸಕಾಲಕ್ಕೆ ಇದಕ್ಕೆ ಔಷಧ ದೊರೆಯದೇ ಇದ್ದಲ್ಲಿ ಹೃದಯಾಘಾತ, ಎದೆನೋವು, ಶ್ವಾಸಕೋಶದ ಸಮಸ್ಯೆಗಳಿಗೆ ಕಾರಣವಾಗುತ್ತದೆ.
ಉರಿಯೂತದಿಂದ ರಕ್ಷಣೆ ಪಡೆಯುಲು ಶುಂಠಿ ಬಹಳಷ್ಟು ಪ್ರಯೋಜನಕಾರಿಯಾಗಿದೆ. ವಾಕರಿಕೆ, ವಾಂತಿಯಂಥ ಸಮಸ್ಯೆಗಳಿಗೂ ಶುಂಠಿ ಸೇವನೆ ಉಪಯುಕ್ತ. ಗರ್ಭಿಣಿಯರಲ್ಲಿ ಉಂಟಾಗುವ ಬೆಳಗ್ಗಿನ ಆರೋಗ್ಯ ಸಮಸ್ಯೆಗಳಿಗೆ ಇದನ್ನು ಸೀಮಿತ ಪ್ರಮಾಣದಲ್ಲಿ ಬಳಸಬಹುದು.
ಮಹಿಳೆಯರಲ್ಲಿ ಮಾಸಿಕ ಋತುಚಕ್ರದ ಆರಂಭದ ವೇಳೆ ಉಂಟಾಗುವ ನೋವಿನ ಉಪಶಮನಕ್ಕೂ ಶುಂಠಿ ಪ್ರಯೋಜನಕಾರಿಯಾಗಿದೆ. ಮಧುಮೇಹವನ್ನು ಸಮತೋಲನದಲ್ಲಿರಿಸಲು ಶುಂಠಿ ಸೇವನೆ ಅತ್ಯುತ್ತಮ. ನಿತ್ಯವೂ 2 ಗ್ರಾಮ್ ನಷ್ಟು ಶುಂಠಿ ಹುಡಿಯನ್ನು ತೆಗೆದುಕೊಳ್ಳುವುದರಿಂದ . ಟೈಪ್ 2
ಡಯಾಬಿಟಿಸ್ ಅನ್ನು ಕಂಟ್ರೋಲ್ ನಲ್ಲಿ ಇಟ್ಟುಕೊಳ್ಳಬಹುದು ಎಂಬುದು ಅಧ್ಯಯನದಿಂದ ಸಾಬೀತಾಗಿದೆ. ಮಹಿಳೆಯರನ್ನು ಕಾಡುವ ಗರ್ಭಕೋಶದ ಕೆಲವು ಸಮಸ್ಯೆಗಳನ್ನೂ ಶುಂಠಿ ನಿವಾರಿಸುತ್ತದೆ.