Advertisement

ಜೆಡಿಎಸ್‌ನೊಂದಿಗಿನ ಮೈತ್ರಿಯೇ ಪ್ರಮಾದ

08:39 AM Jun 23, 2019 | Team Udayavani |

ದೇವನಹಳ್ಳಿ: ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್‌ನೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದೇ ಪಕ್ಷದ ಸೋಲಿಗೆ ಕಾರಣವಾಯಿತು. ಮುಂಬರುವ ಚುನಾವಣೆಗಳಲ್ಲಿ ಜೆಡಿಎಸ್‌ನೊಂದಿಗೆ ಮೈತ್ರಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಮಾಜಿ ಸಂಸದ ಎಂ.ವೀರಪ್ಪಮೊಯ್ಲಿ ಹೇಳಿದರು. ನಗರದ ಪ್ರವಾಸಿಮಂದಿರದಲ್ಲಿ ಲೋಕಸಭೆ ಚುನಾವಣೆ ಬಳಿಕ ಮೊದಲ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.

Advertisement

ಮುಂಬರುವ ಚುನಾವಣೆಗಳಲ್ಲಿ ಮೈತ್ರಿ ಬೇಡ: ಪುರಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ 10 ಸ್ಥಾನ ಗೆದ್ದಿದೆ. ಆದರೆ ಜೆಡಿಎಸ್‌ನೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದು ಬೇಡ. ಜೆಡಿಎಸ್‌ನಿಂದ ಬಹಳಷ್ಟು ಪಾಠ ಕಲಿತಿದ್ದೇವೆ. ನಾವು ಸೋತಿದ್ದೇವೆ ಎಂದು ಕಾರ್ಯಕರ್ತರು ಧೃತಿಗೆಡುವುದು ಬೇಡ. ನಾನು ನಿಮ್ಮೊಂದಿಗಿದ್ದೇನೆ. ಏನೇ ಸಮಸ್ಯೆ ಇದ್ದರೂ ಬಗೆಹರಿಸುತ್ತೇನೆ.

ಪಕ್ಷವನ್ನು ಪುನಃ ತಳಮಟ್ಟದಿಂದ ಸಂಘಟಿಸಬೇಕು. ಮುಂದಿನ ಗ್ರಾಪಂ, ಜಿಪಂ, ತಾಪಂ ಚುನಾವಣೆಗಳಲ್ಲಿ ಜೆಡಿಎಸ್‌ನೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ. ಏಕಾಂಗಿಯಾಗಿ ಕಾಂಗ್ರೆಸ್‌ ಸ್ಪರ್ಧೆ ಮಾಡಲಿದೆ. ನಮ್ಮ ಕಾರ್ಯಕರ್ತರು ಪ್ರತಿಯೊಂದು ಚುನಾವಣೆಯಲ್ಲಿ ಸದಸ್ಯರಾದರೆ ನಮಗೆ ಖುಷಿಯಾಗುತ್ತದೆ. ಅದಕ್ಕಾಗಿ ಮೈತ್ರಿ ಮಾಡಿಕೊಂಡರೆ ಏನೆಲ್ಲ ತೊಂದರೆಯಾಗುತ್ತದೆ ಎಂಬುವುದು ನಮಗೆ ತಿಳಿದಿದೆ ಎಂದು ಹೇಳಿದರು.

ಸ್ವತಂತ್ರವಾಗಿ ಚುನಾವಣೆ ಎದುರಿಸಿದ್ದರಿಂದ ಗೆಲುವು: ಕಳೆದ ತಿಂಗಳು ನಡೆದ ಪುರಸಭೆ ಚುನಾವಣೆಯಲ್ಲಿ ಬೇರೆ ಪಕ್ಷಗಳೊಂದಿಗೆ ಹೊಂದಾಣಿಕೆ ಇಲ್ಲದೆ ನೆಲಮಂಗಲ, ಬಾಗೆಪಲ್ಲಿ, ಶಿಡ್ಲಗಟ್ಟ ದೇವನಹಳ್ಳಿ ನಮ್ಮ ಪಕ್ಷಕ್ಕೆ ಹೆಚ್ಚು ಸ್ಥಾನಗಳು ದೊರೆತಿವೆ. ಒಂದೇ ತಿಂಗಳಲ್ಲಿ ಇಷ್ಟು ಬದಲಾವಣೆ ಹೇಗೆ ಸಾಧ್ಯವಾಯಿತು. ಸ್ವತಂತ್ರವಾಗಿ ಚುನವಣೆ ಎದುರಿಸಿದ್ದರಿಂದ ನಮ್ಮ ಪಕ್ಷದ ಅಭ್ಯರ್ಥಿಗಳು ಗೆದ್ದಿದ್ದಾರೆ. ದೇವನಹಳ್ಳಿ ಪುರಸಭೆ ಅಧ್ಯಕ್ಷ ಸ್ಥಾನಕ್ಕೆ ಯಾವ ಪಕ್ಷದ ಜೊತೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ.

ಇವಿಎಂ ಮೇಲೆ ಅನುಮಾನ: ಇವಿಎಂ ಯಂತ್ರಗಳ ಮೇಲೆ ಬಹಳಷ್ಟು ಸಂದೇಹಗಳು ಮೂಡುತ್ತಿವೆ. ಮುಂದುವರಿದ ದೇಶಗಳಲ್ಲೂ ಇವಿಎಂನಿಂದ ನಿಖರ ಫ‌ಲಿತಾಂಶ ಬಂದಿಲ್ಲ ಎಂಬ ಕಾರಣಕ್ಕೆ ಯಂತ್ರಗಳನ್ನು ನಿಷೇಧಿಸಲಾಗಿದೆ. ಅಲ್ಲದೆ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಮಾತ್ರ ಹೇಗೆ ಬಹುಮತ ಬರಲು ಸಾಧ್ಯ ಎಂಬುದು ಪ್ರಶ್ನೆಯಾಗಿದೆ. ಕೇಂದ್ರದಲ್ಲಿ ಮನವಿ ಮಾಡಿದ್ದು, ಇತರ ಪಕ್ಷಗಳೂ ಕೂಡ ಸ್ಪಂದಿಸಿವೆ.

Advertisement

ಮುಂಬರುವ ಚುನಾವಣೆಗಳಲ್ಲಿ ಬ್ಯಾಲೆಟ್‌ ಪೇಪರ್‌ ಬಳಸಬೇಕು ಎಂಬುದು ಇತರ ಪಕ್ಷಗಳ ಬೇಡಿಕೆಯಾಗಿದೆ. ಇದೇ ಮಾದರಿಯಲ್ಲಿ ಬ್ಯಾಲೆಟ್‌ ರಹಿತ ಚುನಾವಣೆ ಆಗಬೇಕು. ಅಲ್ಲದೆ ಮೈತ್ರಿ ಸರ್ಕಾರ ಕಳೆದ ಒಂದು ವರ್ಷದಿಂದ ಶಾಸಕರು ಹಾಗೂ ಸರ್ಕಾರ ಉಳಿಸಿಕೊಳ್ಳಲಷ್ಟೇ ಸಮಯ ವ್ಯರ್ಥಗೊಳಿಸಿದೆ. ಇದರಿಂದ ಜನ ಬೇಸತ್ತಿದ್ದು, ಸರ್ಕಾರದ ಕಾರ್ಯಕ್ರಮಗಳು ಜನರಿಗೆ ತಲುಪುವಲ್ಲಿ ವಿಫಲವಾಗಿದೆ ಎಂದು ಹೇಳಿದರು.

ಮಾಜಿ ಶಾಸಕ ಮುನಿನರಸಿಂಹಯ್ಯ, ವೆಂಕಟಸ್ವಾಮಿ, ರಾಜ್ಯ ಹಿಂದುಳಿದ ವರ್ಗಗಗಳ ಉಪಾಧ್ಯಕ್ಷ ಸಿ.ಜಗನ್ನಾಥ್‌, ಬ್ಲಾಕ್‌ ಕಾಂಗ್ರೇಸ್‌ ಅಧ್ಯಕ್ಷ ಪ್ರಸನ್ನಕುಮಾರ್‌, ಪ್ರಧಾನ ಕಾರ್ಯದರ್ಶಿ ಎಸ್‌.ಪಿ.ಮುನಿರಾಜು, ಜಿಪಂ ಸದಸ್ಯರಾದ ಲಕ್ಷಿನಾರಾಯಣಪ್ಪ, ಅನಂತಕುಮಾರಿ, ದೇವನಹಳ್ಳಿ ಬ್ಲಾಕ್‌ ಖಜಾಂಚಿ ದ್ಯಾವರಹಳ್ಳಿ ಶಾಂತಕುಮಾರ್‌, ತೂಬಗೆರೆ ಬ್ಲಾಕ್‌ ಕಾಂಗ್ರೇಸ್‌ ಅಧ್ಯಕ ರಂಗಪ್ಪ, ವಿಜಯಪುರ ಬ್ಲಾಕ್‌ ಅಧ್ಯಕ್ಷ ರಾಮಚಂದ್ರಪ್ಪ, ಪುರಸಭಾ ಸದಸ್ಯರಾದ ಎಸ್‌.ಸಿ.ಚಂದ್ರಪ್ಪ,

ಜಿ.ಸುರೇಶ್‌, ಎನ್‌.ರಘು, ವೇಣುಗೋಪಾಲ್‌, ಮುನಿಕೃಷ್ಣ, ಮಂಜುನಾಥ್‌, ಸುಮಿತ್ರ, ಭೂ ಮಂಜೂರಾತಿ ಮಾಜಿ ಸದಸ್ಯ ಸೋಮಶೇಖರ್‌, ಕುಂದಾಣ ಹೋಬಳಿ ಕಾಂಗ್ರೆಸ್‌ ಅಧ್ಯಕ್ಷ ಕೋದಂಡರಾಮಯ್ಯ, ಜಿಲ್ಲಾ ಹಿಂದುಳಿದ ವರ್ಗ ಅಧ್ಯಕ್ಷ ಅಪ್ಪಣ್ಣ, ಖಾದಿಬೋರ್ಡ್‌ ನಿರ್ದೇಶಕ ಪಟಾಲಪ್ಪ, ನಾಗೇಗೌಡ, ಬ್ಲಾಕ್‌ ಕಾಂಗ್ರೆಸ್‌ ಮಾಜಿ ಅಧ್ಯಕ್ಷ ಮುನಿರಾಜು, ಕಸಬಾ ಹೋಬಳಿ ಅಧ್ಯಕ್ಷ ಗೋಪಾಲಕೃಷ್ಣ, ಪುರಸಭೆಗೆ ನೂತನವಾಗಿ ಆಯ್ಕೆಯಾದ ಸದಸ್ಯರು, ಪಕ್ಷದ ಮುಖಂಡರು ಕಾರ್ಯಕರ್ತರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next