Advertisement
ನಗರದಲ್ಲಿ ಜಿಲ್ಲಾ ಬಿಜೆಪಿ ಕಚೇರಿ ಬಳಿ ಜಮಾಯಿಸಿದ ಬಿಜೆಪಿ ಕಾರ್ಯಕರ್ತರು ತೋಳು ಮತ್ತು ಹಣೆಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಜೆಡಿಎಸ್ ಮತ್ತು ಕಾಂಗ್ರೆಸ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
Related Articles
ಕಾರ್ಯಕ್ರಮಗಳನ್ನು ಜನ ಮೆಚ್ಚಿಕೊಂಡಿದ್ದಾರೆ. ಬಿ.ಎಸ್.ಯಡಿಯೂರಪ್ಪ ಅವರ ಚಿಂತನೆಗಳು, ರೈತಪರ ಕಾಳಜಿಗೆ ರಾಜ್ಯದ ಜನತೆ ಮೆಚ್ಚುಗೆ ವ್ಯಕ್ತಪಡಿಸಿ ಹೆಚ್ಚು ಸ್ಥಾನಗಳಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿದ್ದಾರೆ ಎಂದರು.
Advertisement
ಚುನಾವಣಾ ಪೂರ್ವದಲ್ಲಿ ಜೆಡಿಎಸ್ ಪಕ್ಷವನ್ನು ಬಿಜೆಪಿ ಬಿ ಟೀಂ ಎಂದು ಟೀಕಿಸಿದ್ದ ಸಿದ್ದರಾಮಯ್ಯ ಮಾಜಿ ಪ್ರಧಾನಿ ದೇವೇಗೌಡರನ್ನು ಏಕವಚನದಲ್ಲಿ ನಿಂದಿಸಿದ್ದರು. ಆದರೆ ಇದೀಗ ಅವರೇ ದೇವೇಗೌಡರ ಮನೆಗೆ ತೆರಳಿ ಜೆಡಿಎಸ್ಸರ್ಕಾರದ ರಚನೆಗೆ ಕೈಚಾಚಿದ್ದಾರೆ. ಅನೈತಿಕ ರಾಜಕಾರಣಕ್ಕೆ ಇಬ್ಬರೂ ನಾಯಕರು ಮುಂದಾಗಿದ್ದಾರೆ. ಎರಡೂ ಪಕ್ಷಗಳಿಗೆ ಮಾನಾ ಮರ್ಯಾದೆ ಇಲ್ಲ ಎಂದು ಟೀಕಾ ಪ್ರಹಾರ ನಡೆಸಿದರು. ಈ ಸರ್ಕಾರ ಹೆಚ್ಚು ದಿನ ಬಾಳೊಲ್ಲ,
ಅಪವಿತ್ರ ಮೈತ್ರಿ ಮಾಡಿಕೊಂಡಿರುವ ಎರಡೂ ಪಕ್ಷಗಳಿಗೆ ಪಾಠ ಕಲಿಸುವ ಕಾಲ ಸನ್ನಿಹಿತವಾಗಲಿವೆ ಎಂದರು. ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾ ವಕ್ತಾರ ರುದ್ರದೇವರು, ತಾಲೂಕು ಅಧ್ಯಕ್ಷ ಪ್ರವೀಣ್ ಗೌಡ, ಮುಖಂಡರಾದ ಎಸ್.ಆರ್.ನಾಗರಾಜು, ಜಿ.ವಿ.ಪದ್ಮನಾಭ, ಪಿ.ವಿ.ಬದರೀನಾಥ್, ಚಂದ್ರಶೇಖರ್ ರೆಡ್ಡಿ, ರಮೇಶ್, ವಿನೋದ್, ಚನ್ನಪ್ಪ, ಬಮ್ಮಣ್ಣ, ರಾಜಣ್ಣ, ಗುಲಾಬ್ ಜಾನ್ ಮತ್ತಿತರರು ಭಾಗವಹಿಸಿದ್ದರು.