Advertisement

ಯುಪಿಎ ಸೇರಿದ ಕುಶ್ವಾಹಾ

06:00 AM Dec 21, 2018 | |

ಹೊಸದಿಲ್ಲಿ: ಬಿಹಾರದಲ್ಲಿನ ಸ್ಥಾನ ಹೊಂದಾಣಿಕೆಯಿಂದ ಅತೃಪ್ತಿಗೊಂಡು ಎನ್‌ಡಿಎಯಿಂದ ಹೊರಬಿದ್ದಿರುವ ರಾಷ್ಟ್ರೀಯ ಲೋಕ ಸಮತಾ ಪಕ್ಷ (ಆರ್‌ಎಲ್‌ಎಸ್‌ಪಿ)ದ ಮುಖ್ಯಸ್ಥ ಉಪೇಂದ್ರ ಕುಶ್ವಾಹಾ ಗುರುವಾರ ಕಾಂಗ್ರೆಸ್‌ ನೇತೃತ್ವದ ಯುಪಿಎಗೆ ಸೇರ್ಪಡೆಯಾಗಿದ್ದಾರೆ.

Advertisement

ಹೊಸದಿಲ್ಲಿಯಲ್ಲಿ ಬಿಹಾರದಲ್ಲಿನ ಕಾಂಗ್ರೆಸ್‌ ಉಸ್ತುವಾರಿ ಶಕ್ತಿಸಿನ್ಹ ಗೋಹಿಲ್‌, ಸೋನಿಯಾ ಗಾಂಧಿಯವರ ರಾಜಕೀಯ ಕಾರ್ಯದರ್ಶಿ ಅಹ್ಮದ್‌ ಪಟೇಲ್‌ ಸಮ್ಮುಖದಲ್ಲಿ ನಡೆದ ಸುದ್ದಿಗೋಷ್ಠಿ ಯಲ್ಲಿ ಕೇಂದ್ರದ ಮಾಜಿ ಸಚಿವ ಕುಶ್ವಾಹಾ ತಮ್ಮ ನಿರ್ಧಾರ ಪ್ರಕಟಿಸಿದ್ದಾರೆ. ಲೋಕಸಭೆ ಚುನಾವಣೆ ಘೋಷಣೆ ಮುನ್ನವೇ ಮೈತ್ರಿ ಕೂಟ ರಚನೆಯ ಪ್ರಯತ್ನಗಳು ಬಿರು ಸಾಗಿಯೇ ನಡೆದಿರುವುದು ಇದರಿಂದ ಸಾಬೀತಾಗಿದೆ.

ಎನ್‌ಡಿಎಯಲ್ಲಿ ತಮಗೆ ಅವಮಾನ ಮಾಡಲಾಗಿತ್ತು ಎಂದು ಹೇಳಿಕೊಂಡಿರುವ ಕುಶ್ವಾಹಾ, “ಈಗ ಕಾಂಗ್ರೆಸ್‌ ನೇತೃತ್ವದ ಯುಪಿ  ಎಯ ಭಾಗವಾಗಿದ್ದೇನೆ’ ಎಂದು ಹೇಳಿಕೊಂಡಿದ್ದಾರೆ. ಮೈತ್ರಿ ಮಾಡಿಕೊಂಡದ್ದಕ್ಕೆ ಪೂರಕವಾಗಿ ಫೆ.2ರಂದು ಪಾಟ್ನಾದಲ್ಲಿ ಜನಾ ಕ್ರೋಶ ರ್ಯಾಲಿ ಆಯೋಜಿಸಿರುವುದಾಗಿಯೂ ತಿಳಿಸಿದ್ದಾರೆ. 

ಆರ್‌ಎಲ್‌ಎಸ್‌ಪಿ ಸೇರ್ಪಡೆಯಿಂದಾಗಿ ಬಿಹಾರದಲ್ಲಿ ಯುಪಿಎ ಬಲ ವೃದ್ಧಿಸಲಿದೆ ಎಂದು ವಿಶ್ಲೇಷಿಸಲಾಗಿದೆ. ಆರ್‌ಜೆಡಿ, ಮಾಜಿ ಮುಖ್ಯಮಂತ್ರಿ ಜಿತನ್‌ ರಾಂ ಮಾಂಝಿ ಅವರ ಹಿಂದುಸ್ತಾನಿ ಅವಾಮಿ ಮೋರ್ಚಾ (ಸೆಕ್ಯುಲರ್‌)ಈಗಾಗಲೇ ಮಹಾ ಮೈತ್ರಿ ಕೂಟದ ಭಾಗವೇ ಆಗಿದ್ದಾರೆ. ಬಿಹಾರದ ಒಟ್ಟು ಜನಸಂಖ್ಯೆಯಲ್ಲಿ ಶೇ.6ರಷ್ಟು ಇರುವ ಕುಶ್ವಾಹಾ ಸಮುದಾಯ ಇದುವರೆಗೆ ಬಿಜೆ ಪಿಗೆ ಬೆಂಬಲ ನೀಡುತ್ತಿತ್ತು. ಹಾಲಿ ಬೆಳವಣಿಗೆ ಹಿನ್ನೆಲೆಯಲ್ಲಿ ಚುನಾವಣೆಯಲ್ಲಿ ಸಮು ದಾಯ ಎನ್‌ಡಿಎ ತೊರೆದು ಯುಪಿಎಯತ್ತ ಒಲವು ವ್ಯಕ್ತಪಡಿಸಲಿದೆಯೇ 
ಎಂಬ ಪ್ರಶ್ನೆ ಎದುರಾಗಿದೆ. 

ಪಾಸ್ವಾನ್‌-ಶಾ ಭೇಟಿ: ಆರ್‌ಎಲ್‌ಎಸ್‌ಪಿ ಬಳಿಕ ಸ್ಥಾನ ಹೊಂದಾಣಿಕೆಗೆ ಅತೃಪ್ತಿ ಗೊಂಡಿ ರುವ ಕೇಂದ್ರ ಸಚಿವ ರಾಂ ವಿಲಾಸ್‌ ಪಾಸ್ವಾನ್‌ ಅವರ ಎಲ್‌ಜೆಪಿ ಕೂಡ ಎನ್‌ಡಿಎ ಸಖ್ಯ ತೊರೆಯುವ ಎಚ್ಚರಿಕೆ ನೀಡಿತ್ತು. ಹೀಗಾಗಿ, ಗುರುವಾರ ಪಾಸ್ವಾನ್‌ ಜತೆಗೆ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಮಾತುಕತೆ ನಡೆಸಿ ದ್ದಾರೆ. ಹಿಂದುಳಿದ ವರ್ಗಗಳ ಪ್ರಮುಖ ನಾಯಕ ಕುಶ್ವಾಹಾ ಎನ್‌ಡಿಎ ತೊರೆ ದಿರುವ ಹಿನ್ನೆಲೆಯಲ್ಲಿ ಪಾಸ್ವಾನ್‌ ಜತೆಗೆ ಮಾತುಕತೆ ನಡೆಸುವಂತೆ ಬಿಹಾರ ಸಿಎಂ ನಿತೀಶ್‌ ಕುಮಾರ್‌ ಸಲಹೆ ನೀಡಿರುವ ಹಿನ್ನೆಲೆ ಯಲ್ಲಿ ಈ ಬೆಳವಣಿಗೆ ನಡೆದಿದೆ. 

Advertisement

ಅಸಲು ವಿಚಾರವೇನೆಂದರೆ ಸೆಪ್ಟೆಂಬರ್‌ನಲ್ಲಿ ಶಾ-ನಿತೀಶ್‌ ನಡುವಿನ ಮಾತುಕತೆ ವೇಳೆ 50:50 ಸ್ಥಾನ ಹೊಂದಾಣಿಕೆ ಘೋಷಣೆ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಲೋಕ ಜನ ಶಕ್ತಿ ಪಕ್ಷಕ್ಕೆ 4 ಲೋಕಸಭಾ ಕ್ಷೇತ್ರಗಳು ಮತ್ತು ಅಸ್ಸಾಂನಿಂದ 1 ರಾಜ್ಯಸಭಾ ಸ್ಥಾನ ನೀಡುವ ಬಗ್ಗೆ ಮಾತುಕತೆ ನಡೆಸಲಾಗಿತ್ತು. ಕುಶ್ವಾಹಾ ಎನ್‌ಡಿಎ ತೊರೆದ ಹಿನ್ನೆಲೆಯಲ್ಲಿ ಎಲ್‌ಜೆಪಿಗೆ 6 ಸ್ಥಾನ ನೀಡುವ ಬಗ್ಗೆ ತಿಳಿಸ ಲಾಗಿತ್ತು. ರಾಜ್ಯಸಭೆ ಸ್ಥಾನದ ಬಗ್ಗೆ ಬಿಜೆಪಿ ಮೌನವಾಗಿ ರುವುದು ಸದ್ಯದ “ಅತೃಪ್ತಿ’ಯ ಹಿಂದಿನ ಕತೆ. ರಾಂ ವಿಲಾಸ್‌ ಪಾಸ್ವಾನ್‌ ಮತ್ತು ಪುತ್ರ ಚಿರಾಗ್‌ ಪಾಸ್ವಾನ್‌ ಮಾತನಾಡಿ ಬಿಜೆಪಿ ಜತೆಗೆ ಯಾವುದೇ ಅಸಮಾಧಾನ ಇಲ್ಲ. ಸ್ಥಾನ ಹೊಂದಾಣಿಕೆ ಮತ್ತು ಇತರ ವಿಚಾರ ಗಳ ಬಗ್ಗೆ ಪುತ್ರ ಚಿರಾಗ್‌ ಪಾಸ್ವಾನ್‌ ಜತೆಗೆ ಮಾತನಾಡ ಬೇಕು ಎಂದಿದ್ದಾರೆ ರಾಂ ವಿಲಾಸ್‌ ಪಾಸ್ವಾನ್‌.

ಫೆಡರಲ್‌ ಫ್ರಂಟ್‌ ರಚನೆಗೆ ಒಲವು
ತೆಲಂಗಾಣ ಚುನಾವಣೆಯಲ್ಲಿ ಗೆದ್ದಿರುವ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್‌ ಈಗ ಫೆಡರಲ್‌ ಫ್ರಂಟ್‌ ರಚನೆ ಪ್ರಸ್ತಾಪ ವನ್ನು ಮುಂಚೂಣಿಗೆ ತರಲು ಮುಂದಾದ್ದಾರೆ.  ಈ ನಿಟ್ಟಿನಲ್ಲಿ ತೃಣಮೂಲ ಕಾಂಗ್ರೆಸ್‌, ಸಮಾಜವಾದಿ ಪಕ್ಷ, ಬಹುಜನ ಸಮಾಜ ಪಕ್ಷದ ನಾಯಕರ ಜತೆಗೆ ಮಾತುಕತೆ ನಡೆಸಲು ಪಕ್ಷದ ಸಂಸದ ಬಿ.ವಿನೋದ್‌ ಕುಮಾರ್‌ ಮುಂದಾಗಿದ್ದಾರೆ. ತಮ್ಮ ತಮ್ಮ ರಾಜ್ಯಗಳಲ್ಲಿ ಪ್ರಭಾವ ಶಾಲಿಗಳಾಗಿರುವ ಪ್ರಾದೇಶಿಕ ಪಕ್ಷಗಳನ್ನು ಒಗ್ಗೂಡಿಸಿ ಫೆಡರಲ್‌ ಫ್ರಂಟ್‌ ರಚಿಸುವ ಇರಾದೆ ಇದೆ. ಎಲ್ಲರೂ ಒಗ್ಗೂಡಿದರೆ ಕಾಂಗ್ರೆಸ್‌ ಅಥವಾ ಬಿಜೆಪಿ ನೇತೃತ್ವದ ಮೈತ್ರಿ ಕೂಟದ ವಿರುದ್ಧ ಪ್ರಬಲ ಸ್ಪರ್ಧೆ ನೀಡಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದ್ದಾರೆ.

ಎನ್‌ಡಿಎಯನ್ನು ತೊರೆದು ಎಲ್‌ಜೆಪಿ ಸದ್ಯದಲ್ಲೇ ಯುಪಿಎ ಸೇರಲಿದೆ ಎಂಬ ವಿಶ್ವಾಸ ನಮ್ಮದು. ಪ್ರಾದೇಶಿಕ ಪಕ್ಷಗಳನ್ನು ಮುಗಿಸುವ ಯತ್ನ ಬಿಜೆಪಿಯಿಂದ ನಡೆಯುತ್ತಿದೆ.
– ತೇಜಸ್ವಿ ಯಾದವ್‌, ಆರ್‌ಜೆಡಿ ನಾಯಕ

ಎನ್‌ಡಿಎ ಅಭಿವೃದ್ಧಿಯ ಅಜೆಂಡಕ್ಕೆ ಬದ್ಧವಾಗಿರಲೇಬೇಕು. ಇಲ್ಲದಿದ್ದರೆ ಅದರ ಮೇಲೆ ಜನರು ಇರಿಸಿರುವ ವಿಶ್ವಾಸಕ್ಕೆ ಧಕ್ಕೆ ಬರುವುದು ಖಚಿತ. ಹಾಗಿದ್ದರೆ ಮಾತ್ರ 2014ರ ಜನಾದೇಶ ಮತ್ತೆ ಸಿಗುತ್ತದೆ.
– ಚಿರಾಗ್‌ ಪಾಸ್ವಾನ್‌, ಎಲ್‌ಜೆಪಿ ನಾಯಕ

Advertisement

Udayavani is now on Telegram. Click here to join our channel and stay updated with the latest news.

Next