Advertisement
ಅಳಕೆ ಮಾರುಕಟ್ಟೆ ಗ್ರಾಹಕ ಸ್ನೇಹಿಯಾಗಿಲ್ಲ ಎಂಬ ದೂರು ಕೇಳಿಬರುತ್ತಿದೆ. ಇದೇ ಕಾರಣಕ್ಕೆ ಗ್ರಾಹಕರು ಸೇರಿದಂತೆ ವರ್ತಕರು ಕೂಡ ಮಾರುಕಟ್ಟೆಯತ್ತ ಆಸಕ್ತಿ ತೋರುತ್ತಿಲ್ಲ. ಕೆಲವು ಅಂಗಡಿ ಕೋಣೆಗಳು ಮಾತ್ರ ಭರ್ತಿಯಾಗಿತ್ತು. ಇದರಿಂದಾಗಿ ಪಾಲಿಕೆ ಆದಾಯಕ್ಕೆ ಹಿನ್ನಡೆ ಉಂಟಾಗಿದೆ. ಇದೀಗ ಅಂಗಡಿ ಕೋಣೆ/ಸ್ಟಾಲ್‌ಗಳನ್ನು ಇ-ಟೆಂಡರ್ ಮೂಲಕ ಹರಾಜು ಮಾಡಲು ನಿರ್ಧಾರ ಮಾಡಿದೆ.
Related Articles
Advertisement
ಅಳಕೆ ಮಾರುಕಟ್ಟೆಯನ್ನು ಸುಮಾರು 1.40 ಕೋ.ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. 536.19 ಚ.ಮೀ.ವಿಸ್ತೀರ್ಣ ಹೊಂದಿದ್ದು, ಇದರಲ್ಲಿ ತರಕಾರಿ, ದಿನಸಿಗೆ, ಹೂ, ಹಣ್ಣು ಹಂಪಲು, ಕೋಳಿ, ಮೀನು, ಮಾಂಸ ಹೀಗೆ ಎಲ್ಲ ರೀತಿಯ ವಸ್ತುಗಳ ಮಾರಾಟಕ್ಕೆ ಸುಮಾರು 25ರಷ್ಟು ಅಂಗಡಿ ಕೋಣೆ, ಮೀನು ಮಾರಾಟಕ್ಕೆ ಪ್ರತ್ಯೇಕ ಕೌಂಟರ್ ನಿರ್ಮಿಸಲಾಗಿದೆ. ಬಹುತೇಕ ಅಂಗಡಿ ಕೋಣೆಗಳು ಖಾಲಿ ಇವೆ. ಟೆಂಡರ್ ಬಳಿಕ ಮತ್ತಷ್ಟು ಅಂಗಡಿ ಕೋಣೆಗಳು ಭರ್ತಿಯಾಗುವ ನಿರೀಕ್ಷೆ ಇದೆ.