Advertisement
ಸಾಲದ ಸುಳಿಗೆ ಸಿಲುಕಿ ಬಳಲಿ ಬೆಂಡಾಗಿರುವ ಸರಕಾರಿ ಸ್ವಾಮ್ಯದ ಏರ್ ಇಂಡಿಯಾ ಖಾಸಗೀಕರಣಗೊಳ್ಳುವುದು ಬಹುತೇಕ ಖಚಿತ. ಏರ್ ಇಂಡಿಯಾ ಖಾಸಗೀಕರಣಗೊಳಿಸಲು ನೀತಿ ಆಯೋಗ ಮಂಡಿಸಿದ್ದ ಪ್ರಸ್ತಾವವನ್ನು ಸರಕಾರ ಹೆಚ್ಚು ವಿಳಂಬಿಸದೆ ಅನುಮೋದಿಸಿರುವುದು ಈ ನಿಟ್ಟಿನಲ್ಲಿ ಇಟ್ಟಿರುವ ಮೊದಲ ದೃಢ ಹೆಜ್ಜೆ. ಸರಕಾರದ ಕೈಯಲ್ಲಿರುವ ಬೃಹತ್ ಕಂಪೆನಿಗಳಲ್ಲಿ ಒಂದಾಗಿರುವ ಏರ್ ಇಂಡಿಯಾದ ಅವನತಿಯ ಕತೆ ಪ್ರಾರಂಭವಾಗಿ ದಶಕವಾಗುತ್ತಾ ಬಂತು. ಕಳೆದ ಏಳು ವರ್ಷಗಳಿಂದ ಈ ಸಂಸ್ಥೆ ಸತತ ನಷ್ಟ ಅನುಭವಿಸುತ್ತಿದೆ. ಸಂಸ್ಥೆಯನ್ನು ಮೇಲೆತ್ತಲು ಮಾಡಿರುವ ಎಲ್ಲ ಪ್ರಯತ್ನಗಳು ವಿಫಲಗೊಂಡಿರುವುದರಿಂದ ಖಾಸಗೀಕರಣವೇ ಪರಿಹಾರ ಎಂಬ ಸ್ಥಿತಿಗೆ ಬಂದು ತಲುಪಿದೆ. 1932ರಲ್ಲಿ ಜೆಆರ್‌ಡಿ ಟಾಟಾ ಸ್ಥಾಪಿಸಿದ್ದ ಟಾಟಾ ಏರ್‌ಲೈನ್ಸ್ ಅನ್ನು ಬಳಿಕ ರಾಷ್ಟ್ರೀಕರಣಗೊಳಿಸಲಾಗಿತ್ತು. ಅನಂತರ ಏರ್ ಇಂಡಿಯಾ ಮತ್ತು ಇಂಡಿಯನ್ ಏರ್‌ಲೈನ್ಸ್ ಎಂಬ ಕಂಪೆನಿಗಳು ಅಸ್ತಿತ್ವಕ್ಕೆ ಬಂದಿದ್ದವು. ಬಳಿಕ ಈ ಎರಡು ಕಂಪೆನಿಗಳು ವಿಲೀನಗೊಂಡವು. ಒಂದು ಕಾಲದಲ್ಲಿ ವಾಯುಯಾನ ಮಾರುಕಟ್ಟೆಯಲ್ಲಿ ಶೇ.40 ಹೊಂದಿದ್ದ ಏರ್ ಇಂಡಿಯಾದ ಪಾಲು ಈಗ ಜುಜುಬಿ ಶೇ.14ಕ್ಕೆ ಇಳಿದಿರುವುದೇ ಸಂಸ್ಥೆಯ ದಯನೀಯ ಸ್ಥಿತಿಯನ್ನು° ತಿಳಿಸುತ್ತಿದೆ.
Advertisement
ಖಾಸಗೀಕರಣದತ್ತ ಏರ್ ಇಂಡಿಯಾ ಮಹಾರಾಜನ ವಿದಾಯ ಸನ್ನಿಹಿತ
03:45 AM Jul 01, 2017 | Harsha Rao |
Advertisement
Udayavani is now on Telegram. Click here to join our channel and stay updated with the latest news.