Advertisement

ಅತ್ಯಾಧುನಿಕ ಜೆಟ್‌ ತಯಾರಿಸಿದ ಅಮೆರಿಕ

10:53 PM Sep 17, 2020 | mahesh |

ವಾಷಿಂಗ್ಟನ್‌: ಜಗತ್ತಿನಲ್ಲಿ ಸದ್ಯಕ್ಕೆ ಲಭ್ಯವಿರುವ ಯಾವುದೇ ಅತ್ಯಾಧುನಿಕ ಯುದ್ಧ ವಿಮಾನಕ್ಕಿಂತ ಅತಿ ಶಕ್ತಿಶಾಲಿ, ಅತ್ಯಾಧುನಿಕ ತಂತ್ರಜ್ಞಾನವುಳ್ಳ ಯುದ್ಧವಿಮಾನವೊಂದನ್ನು ಅಮೆರಿಕ ಸದ್ದಿಲ್ಲದೆ ಅಭಿವೃದ್ಧಿಪಡಿಸಿದ್ದು, ಇತ್ತೀಚೆಗೆ ಅದರ ಪರೀಕ್ಷಾರ್ಥ ಪ್ರಯೋಗವನ್ನೂ ನಡೆಸಿದೆ ಎಂದು ಎಂದು “ಡಿಫೆನ್ಸ್‌ ನ್ಯೂಸ್‌’ ಎಂಬ ವೆಬ್‌ಸೈಟ್‌ ವರದಿ ಮಾಡಿದೆ.

Advertisement

ಅದಕ್ಕೆ, “ಫೈಟರ್‌ ಜೆಟ್‌ಗೆ ನೆಕ್ಸ್ಟ್ ಜನರೇಶನ್‌ ಏರ್‌ ಡಾಮಿನನ್ಸ್‌’ (ಎನ್‌ಜಿಎಡಿ) ಎಂಬ ಹೆಸರನ್ನಿಡಲಾಗಿದ್ದು ಅದನ್ನು “6ನೇ ತಲೆಮಾರಿನ ಯುದ್ಧ ವಿಮಾನದ ಮಾದರಿ’ ಎಂದು ಅಮೆರಿಕದ ಸೇನಾ ತಜ್ಞರು ಬಣ್ಣಿಸಿದ್ದಾರೆ.  ಅಂದಹಾಗೆ, ಈಗ ಸಿದ್ಧವಾಗಿರುವ ಜೆಟ್‌ ಫೈಟರ್‌, ಒಂದು ಮಾದರಿ ಯುದ್ಧ ವಿಮಾನವಾಗಿದ್ದು, 2025ರ ಹೊತ್ತಿಗೆ ಪೂರ್ಣಪ್ರಮಾಣದ 6ನೇ ತಲೆಮಾರಿನ ಫೈಟರ್‌ ಜೆಟ್‌ಗಳು ಸಿದ್ಧವಾಗುತ್ತದೆ ಎಂದು ವರದಿಯಲ್ಲಿ ಉಲ್ಲೇಖೀಸಲಾಗಿದೆ. ಅಲ್ಲದೆ, ಇಡೀ ಯೋಜನೆಗೆ 5.8 ಸಾವಿರ ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ.

ಏನಿದರ ವಿಶೇಷ?: ಈ ವಿಮಾನಗಳು ಅತ್ಯಾಧುನಿಕ ತಂತ್ರಜ್ಞಾನವುಳ್ಳವಾಗಿದ್ದು, ಶತ್ರುಗಳ ದಾಳಿಯಿಂದ ಬದುಕುಳಿಯುವ ಸಾಮರ್ಥ್ಯ ಹೊಂದಿರಲಿವೆ. ಇದಲ್ಲದೆ, ಇವುಗಳಿಗೆ ಎದುರಾಳಿಗಳ ಮೇಲೆ ಮಾರಕ ದಾಳಿ ನಡೆಸುವ ಛಾತಿಯಿದ್ದು, ನಿರಂತರವಾಗಿ ದಾಳಿ ನಡೆಸುವ ಕ್ಷಮತೆಯನ್ನೂ ಹೊಂದಿರಲಿವೆ.

ಡ್ರೋನ್‌, ಲೇಸರ್‌, ಚಾಲಕ ರಹಿತ! 6ನೇ ತಲೆಮಾರಿನ ಯುದ್ಧ ವಿಮಾನಗಳಲ್ಲಿ ಡ್ರೋನ್‌ಗಳನ್ನು ಅಳವಡಿಸಲು ನಿರ್ಧರಿಸಲಾಗಿದ್ದು, ಯುದ್ಧ ವಿಮಾನ ಮಾತ್ರವಲ್ಲದೆ ಡ್ರೋನ್‌ಗಳ ಮೂಲಕವೂ ದಾಳಿ ನಡೆಸಬಹುದಾಗಿದೆ. ಇನ್ನು, ಸಾಮಾನ್ಯವಾಗಿ ಬಳಸಲಾಗುವ ಕ್ಷಿಪಣಿಗಳ ಜೊತೆಗೆ, ಅವುಗಳಲ್ಲಿ ಲೇಸರ್‌ ಶಸ್ತ್ರಾಸ್ತ್ರಗಳನ್ನೂ ಅಳವಡಿಸಲಾಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಇವು, ಚಾಲಕ ರಹಿತ ಯುದ್ಧ ವಿಮಾನಗಳಾಗಿರಲಿವೆ ಎಂದು ವರದಿ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next