Advertisement
ನರಿಕೊಂಬು ವೀರಭದ್ರ ದೇವಸ್ಥಾನದ ಬ್ರಹ್ಮಕಲಶೋತ್ಸವದ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸೋಮಣ್ಣ. 10 ಲಕ್ಷ ಮನೆ ನಿರ್ಮಾಣದ ಕಾರ್ಯದ ಜೊತೆ ಪ್ರತಿ ಹಂತದ ಪರಿಶೀಲನೆ ನಡೆಸಲಾಗುವುದು ಮತ್ತು ಅರ್ಹರಿಗೆ ಸಿಗುವ ರೀತಿಯಲ್ಲಿ ಬೇಕಾದ ಎಲ್ಲಾ ವ್ಯವಸ್ಥೆ ಗಳನ್ನು ಮಾಡಲಾಗಿದೆ ಎಂದು ಅವರು ತಿಳಿಸಿದರು.
Related Articles
Advertisement
ಇದನ್ನೂ ಓದಿ: ಕತ್ತಲೆ ಕವಿದ ಬದುಕಿನಲ್ಲಿ ಬೆಳಕು ಮೂಡಿಸಿದ ಸ್ವ ಉದ್ಯೋಗ | Udayavani
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಅವರ ಕ್ರಿಯಾಶೀಲತೆ ಹಾಗೂ ಬಡವರ ಬಗೆಗಿನ ಕಾಳಜಿಯ ಹಿನ್ನೆಲೆಯಲ್ಲಿ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಪ್ರತಿ ಗ್ರಾ.ಪಂ.ಗೂ 50ರಂತೆ ಮನೆ ನೀಡುವ ಭರವಸೆ ನೀಡಿದ್ದೇನೆ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.
ಕೇಂದ್ರ ಮಾಜಿ ಸಚಿವ ಜನಾರ್ಧನ ಪೂಜಾರಿ ಭೇಟಿಗೆ ಸಚಿವ ಸೋಮಣ್ಣ ಅವರು ಮುಂದಾಗಿದ್ದರು. ಆದರೆ ಪೂಜಾರಿ ಅವರು ಬಂಟ್ವಾಳದ ಮನೆಯಲ್ಲಿರದ ಕಾರಣ ಭೇಟಿ ಕಾರ್ಯ ಕೊನೆಗಳಿಗೆಯಲ್ಲಿ ರದ್ದಾಯಿತು. ಪೂಜಾರಿ ಅವರ ಜೊತೆಗಿನ ಹಳೆಯ ಒಡನಾಟವನ್ನು ನೆನಪು ಮಾಡಿದ ಅವರು ಕಲ್ಲಡ್ಕ ಡಾ! ಪ್ರಭಾಕರ್ ಭಟ್ ಅವರು ನನಗೆ 40 ವರ್ಷಗಳಿಂದ ಗುರುಗಳು ಎಂಬ ಶಬ್ದವನ್ನು ಉಲ್ಲೇಖ ಮಾಡಿದರು.
ಇದನ್ನೂ ಓದಿ: ಸಲಾರ್ ಚಿತ್ರಕ್ಕೆ ಮುಹೂರ್ತ; ಹೈದರಾಬಾದ್‌ನಲ್ಲಿ ಕನ್ನಡ-ತೆಲುಗು ಚಿತ್ರರಂಗಗಳ ಮಹಾ ಸಮ್ಮಿಲನ