Advertisement

Election ಬಿಜೆಪಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವುದೇ ಗುರಿ: ವಿಕಾಸ್ ಪುತ್ತೂರು

07:41 PM Oct 25, 2023 | Team Udayavani |

ಕೊಟ್ಟಿಗೆಹಾರ: ನೈರುತ್ಯ ಪದವೀಧರ,ಶಿಕ್ಷಕರ ಚುನಾವಣೆ 2024 ರ ಜೂನ್ ನಲ್ಲಿ ನಡೆಯಲಿದ್ದು ಬಿಜೆಪಿ ಬೆಂಬಲಿತ ಅಭ್ಯರ್ಥಿಗಳನ್ನು ಗೆಲ್ಲಿಸುವುದೇ ಪ್ರಥಮ ಗುರಿಯಾಗಿದೆ’ಎಂದು ಬಿಜೆಪಿ ಪಕ್ಷದ ಸಾಮಾಜಿಕ ಜಾಲತಾಣದ ರಾಜ್ಯಾಧ್ಯಕ್ಷ ವಿಕಾಸ್ ಪುತ್ತೂರು ಹೇಳಿದರು.

Advertisement

ಅವರು ಕೊಟ್ಟಿಗೆಹಾರದಲ್ಲಿ ಬುಧವಾರ ಪಕ್ಷದ ಮುಖಂಡರ ಜತೆ ಸಮಾಲೋಚನೆ ನಡೆಸಿ ಸುದ್ದಿಗಾರರೊಂದಿಗೆ ಮಾತನಾಡಿದರು.

ಪದವೀದರ ಹಾಗೂ ಶಿಕ್ಷಕರ ಎರಡೂ ಚುನಾವಣೆಯಲ್ಲಿ ಬಿಜೆಪಿ ಈ ಬಾರಿ ಜಯಭೇರಿ ಬಾರಿಸಲಿದ್ದು ಕಾಂಗ್ರೆಸ್ ಗೆ ಸರಿಯಾದ ಪಾಠ ಕಲಿಸಲಿದೆ.ಪ್ರತಿ ಹೋಬಳಿ ಮಟ್ಟದಲ್ಲಿ ಬೂತ್ ಸಂಘಟನೆ ಮಾಡಿ ಪಕ್ಷ ಗೆಲುವು ಸಾಧಿಸಲು ಪಕ್ಷದ ಮುಖಂಡರು, ಕಾರ್ಯಕರ್ತರು ಒಗ್ಗಟ್ಟಿನಿಂದ ಪಕ್ಷದ ಗೆಲುವಿಗೆ ಕಾರಣ ಕರ್ತರಾಗಬೇಕು. ಈಗಾಲೇ ಮತದಾರರ ನೋಂದಣಿ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.

ಕಾಂಗ್ರೆಸ್ಸಿನ ನಾಡ ವಿರೋಧಿ ಧೋರಣೆಗಳಿಗೆ ನಮ್ಮ ಕ್ಷೇತ್ರದ ಪ್ರತಿನಿಧಿಗಳು ಹೆಚ್ಚೆಚ್ಚು ವಿಜೇತರಾಗುವ ಅನಿವಾರ್ಯತೆ ಇದೆ.ಇದರಿಂದ ಪಕ್ಷದ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ನೋಂದಣಿ ಮಾಡಿಸಲು ಸಹಕರಿಸಬೇಕು. ಹಾಗೂ ಪಕ್ಷವನ್ನು ಹೆಚ್ಚಿನ ಮತಗಳಿಂದ ಗೆಲ್ಲಿಸಲು ಪಣ ತೊಡಬೇಕು’ ಎಂದರು.

ಈ ಸಂದರ್ಭದಲ್ಲಿ ಮುಖಂಡರಾದ ಸಂಜಯ್ ಗೌಡ,ಎ.ಆರ್.ಅಭಿಲಾಷ್,ಆದರ್ಶ್ ತರುವೆ, ಹರೀಶ್, ಎ.ಎಸ್.ಅಶ್ವತ್ಥ್, ಸಾಗರ್, ಪರೀಕ್ಷಿತ್ ಜಾವಳಿ,ವಿಕ್ರಂ ಗೌಡ, ಪ್ರವೀಣ್, ದೇವೇಂದ್ರ ಮತ್ತಿತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next