Advertisement

ಪಾಲಿಕೆ ಸೇವೆಗಳಿನ್ನು ಆನ್‌ಲೈನಲ್ಲೇ

11:58 AM Sep 02, 2018 | |

ಬೆಂಗಳೂರು: ಮುಂದಿನ ವರ್ಷದ ಜನವರಿ 1ರಿಂದ ಬಿಬಿಎಂಪಿ ಸೇರಿದಂತೆ ರಾಜ್ಯದ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳಲ್ಲಿ ನಾಗರಿಕರಿಗೆ ನೀಡುವ ಸೇವೆಗಳು  ಆನ್‌ಲೈನ್‌ನಲ್ಲಿ ಲಭ್ಯವಾಗಲಿದೆ. ಕಳೆದ ಫೆಬ್ರವರಿಯಲ್ಲಿ ಅಂದು ಮುಖ್ಯ ಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ಮಂಡಿಸಿದ್ದ 2018-19ನೇ  ಸಾಲಿನ ಬಜೆಟ್‌ ನಲ್ಲಿ ಈ ಕುರಿತು ಘೋಷಣೆ ಮಾಡಲಾಗಿತ್ತು. 

Advertisement

ಅದರಂತೆ ಸರ್ಕಾರಿ ಆದೇಶ ಹೊರಡಿಸಲಾ ಗಿದ್ದು, 2019ರ ಜ.1ರಿಂದ ಎಲ್ಲಾ ನಗರ  ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ, ವಹಿ-ನಕಲು (ಖಾತಾ), ಕಟ್ಟಡ ನಕ್ಷೆ ಅನು ಮೋದನೆ, ನೀರು ಮತು ¤ ವಿದ್ಯುತ್‌ ಸಂಪರ್ಕ, ರಸ್ತೆ  ತುಂಡರಿಸುವುದು ಸೇರಿದಂತೆ ನಾಗರಿಕ ಸೇವೆಗಳು ಆನ್‌ಲೈನ್‌ ಮೂಲಕ ಸಿಗಲಿವೆ. ಈ ನಿಟ್ಟಿನಲ್ಲಿ ತಂತ್ರಾಂಶ ಅಭಿವೃದ್ಧಿಪಡಿಸುವ ಕಾರ್ಯವನ್ನು  ಈಗಾಗಲೇ ಬಹುತೇಕ ಪೂರ್ಣಗೊಳಿಸಲಾಗಿದೆ.

2019ರ ಜ.1ರಿಂದ ಈ ಎಲ್ಲಾ ಸೇವೆಗಳನ್ನು ಆನ್‌ಲೈನ್‌ ಮೂಲಕವೇ ಒದಗಿಸುವುದು ಕಡ್ಡಾಯವಾಗಿದೆ.  ಅದಕ್ಕಾಗಿ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಈಗಾಗಲೇ ಅಭಿವೃದ್ಧಿಪಡಿಸಿರುವ ಕಟ್ಟಡ ಪರವಾನಗಿ ಮತ್ತು ಲೇಔಟ್‌ ಅನುಮೋದನಾ ವ್ಯವಸ್ಥೆಗಳನ್ನು ಗ್ರಾಹಕೀಕರಣಗೊಳಿಸಿ (ಕಸ್ಟಮೈಸೇಷನ್‌) ಬಳಸಿಕೊಳ್ಳಲು ಕೂಡ ಅನುಮತಿ ನೀಡಲಾಗಿದೆ. 

ತಂತ್ರಾಂಶ ಅಭಿವೃದ್ಧಿ ಪ್ರಕ್ರಿಯೆ ಪೂರ್ಣ: ನಾಗರಿಕ ಸೇವೆಗಳನ್ನು ಆನ್‌ಲೈನ್‌ ಮೂಲಕ ಕಲ್ಪಿಸಲು ಈಗಾಗಲೇ ತಂತ್ರಾಂಶ ಅಭಿವೃದ್ಧಿ ಪ್ರಕ್ರಿಯೆ  ಪೂರ್ಣಗೊಂಡಿದೆ. ನಗರ ಸ್ಥಳೀಯ ಸಂಸ್ಥೆಗಳ ಕಚೇರಿ ಕಾರ್ಯಚಟುವಟಿಕೆಗಳ ಸ್ವಯಂಚಾಲಿತ ನಿರ್ವಹಣೆಗಾಗಿ ಆನ್‌ಲೈನ್‌ ಉದ್ಯಮ ಸಂಪನ್ಮೂಲ  ಯೋಜನೆ ಅಭಿವೃದ್ಧಿಪಡಿಸಲು, ಕಟ್ಟಡ ಮತ್ತು ನಿವೇಶನಗಳ ಅನುಮೋದನಾ ಪ್ರಕ್ರಿಯೆಯ ಸ್ವಯಂಚಾಲಿತ ನಿರ್ವಹಣೆಗಾಗಿ ಆನ್‌ಲೈನ್‌ ತಂತ್ರಾಂಶ  ಅಭಿವೃದ್ಧಿಪಡಿಸಲು ಅನುಮೋದನೆ ನೀಡಲಾಗಿದೆ.

ಅದರಂತೆ ಕರ್ನಾಟಕ ಮುನ್ಸಿಪಲ್‌ ಸೊಸೈಟಿ ಮೂಲಕ ರಾಜ್ಯದ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳಲ್ಲಿ  ಕಟ್ಟಡ ಪರವಾನಗಿ ಮತ್ತು ಲೇಔಟ್‌  ಅನುಮೋದನಾ ವ್ಯವಸ್ಥೆ ತಂತ್ರಾಂಶವನ್ನು ಈಗಾಗಲೇ ಅಭಿವೃದ್ಧಿಪಡಿಸಲಾಗಿದೆ. ಬಿಬಿಎಂಪಿ  ವ್ಯಾಪ್ತಿಯಲ್ಲಿ ಈಗಾಗಲೇ ಎಂಟು ವಲಯ ಕಚೇರಿಗಳಲ್ಲಿ ಕಟ್ಟಡ ನಕ್ಷೆ ಮಂಜೂರಾತಿಯನ್ನು ಆನ್‌ಲೈನ್‌ ಮೂಲಕ ನೀಡಲು ಕ್ರಮ ಕೈಗೊಂಡು ಸಾರ್ವಜನಿಕ ಬಳಕೆಗೆ ಮುಕ್ತಗೊಳಿಸಲಾಗಿದೆ. 

Advertisement

ಆನ್‌ಲೈನ್‌ ವ್ಯವಸ್ಥೆ ಅನುಕೂಲವೇನು?: ನಗರ ಸ್ಥಳೀಯ ಸಂಸ್ಥೆಗಳಲ್ಲಿ ಲೇಔಟ್‌ ಅಥವಾ ಕಟ್ಟಡ ನಿರ್ಮಾಣ ಮಾಡಬೇಕಾದರೆ ಖಾತೆ, ಕಟ್ಟಡ ನಕ್ಷೆ ಅನುಮೋದನೆ, ವಿದ್ಯುತ್‌ ಸಂಪರ್ಕ ಮತ್ತು ನೀರಿನ  ಸಂಪರ್ಕಕ್ಕಾಗಿ ರಸ್ತೆ ತುಂಡರಿಸುವುದು ಸೇರಿ ವಿವಿಧ ಸೇವೆಗಳಿಗೆ ಬೇರೆ ಬೇರೆ ಇಲಾಖೆಗಳಿಗೆ ಅರ್ಜಿ ಸಲ್ಲಿಸಬೇಕಿತ್ತು. ನಕ್ಷೆ ಮಂಜೂರಾದರೂ ಅನುಮತಿ ತಡವಾಗುತ್ತಿತ್ತು. ಸಾರ್ವಜನಿಕರು ಕಚೇರಿಯಿಂದ ಕಚೇರಿಗೆ ಅಲೆಯಬೇಕಿತ್ತು. ಆನ್‌ಲೈನ್‌ ವ್ಯವಸ್ಥೆ ಜಾರಿಯಿಂದ ಒಮ್ಮೆ ಅರ್ಜಿ ಸಲ್ಲಿಸಿದರೆ ಸಾಕು.

ಆಯಾ ನಗರ ಸ್ಥಳೀಯ ಸಂಸ್ಥೆಗಳೇ ಎಲ್ಲಾ ಕೆಲಸಗಳಿಗೆ ಸಂಬಂಧಿಸಿದ ಇಲಾಖೆಗಳಿಂದ ನಿರಾಕ್ಷೇಪಣಾ ಪತ್ರ ಅಥವಾ ಅನುಮತಿ  ಪತ್ರ ಪಡೆದು, ಕೆಲವೇ ದಿನಗಳಲ್ಲಿ ಒದಗಿಸುತ್ತದೆ. ಇದಕ್ಕೆ 30ರಿಂದ 45 ದಿನ ನಿಗದಿಪಡಿಸಲಾಗುತ್ತದೆ. ಅರ್ಜಿ ತಿರಸ್ಕೃತವಾದರೆ ಮತ್ತೆ ಅರ್ಜಿ ಸಲ್ಲಿಸಬೇಕಾಗುತ್ತದೆ. ಅರ್ಜಿ ಇತ್ಯರ್ಥವಾಗದೇ ಇದ್ದರೆ ಅಥವಾ ಇಲಾಖೆಯಿಂದ ಯಾವುದೇ ಪ್ರತಿಕ್ರಿಯೆ ಬಾರದೇ ಇದ್ದರೆ ಅದನ್ನೇ ಅನುಮತಿ ಎಂದು  ಪರಿಗಣಿಸಿ ಕಟ್ಟಡ ನಿರ್ಮಾಣ ಸೇರಿದಂತೆ ಇತರೆ ಸೇವೆಗಳನ್ನು ಪಡೆದುಕೊ ಳ್ಳಲು ಅರ್ಜಿದಾರರು ಅರ್ಹರಾಗುತ್ತಾರೆ. 

ಯಾವ ಸೇವೆಗಳು ಆನ್‌ಲೈನ್‌ನಲ್ಲಿ ಲಭ್ಯ?: 2019ರ ಜ.1ರಿಂದ ಆಸ್ತಿ ತೆರಿಗೆ, ವಹಿ-ನಕಲು (ಖಾತಾ), ಕಟ್ಟಡ ನಕ್ಷೆ ಅನುಮೋದನೆ, ನೀರು ಮತು ವಿದ್ಯುತ್‌ ಸಂಪರ್ಕ, ರಸ್ತೆ ತುಂಡರಿಸುವುದು ಸೇರಿ ನಗರ ಸ್ಥಳೀಯ ಸಂಸ್ಥೆಯಿಂದ ಒದಗಿಸಲಾಗುವ ನಾಗರಿಕ ಸೇವೆಗಳು.

* ಪ್ರದೀಪ್‌ಕುಮಾರ್‌ ಎಂ.

Advertisement

Udayavani is now on Telegram. Click here to join our channel and stay updated with the latest news.

Next