Advertisement

ಸ್ಥಳೀಯ ಸಂಸ್ಥೆಗಳಲ್ಲಿ ಆಡಳಿತ ಯಂತ್ರ ದುರ್ಬಲ

01:59 AM Dec 30, 2021 | Team Udayavani |

ಬೆಂಗಳೂರು: ರಾಜ್ಯದ 273ಕ್ಕೂ ಹೆಚ್ಚು ನಗರ ಸ್ಥಳೀಯ ಸಂಸ್ಥೆಗಳ ಪೈಕಿ ಬಹುತೇಕ ಕಡೆ ಚುನಾಯಿತ ಆಡಳಿತ ವ್ಯವಸ್ಥೆ ಜಾರಿಯಲ್ಲಿದೆ. ಆದರೆ ಆಡಳಿತ ನಿರ್ವಹಣೆ ಮತ್ತು ಯೋಜನೆಗಳ ಅನುಷ್ಠಾನಕ್ಕೆ “ಆಡಳಿತ ಯಂತ್ರ’ ಇಲ್ಲದಂತಾಗಿದೆ.

Advertisement

ರಾಜ್ಯದ ಎಲ್ಲ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಬಹುದೊಡ್ಡ ಸಂಖ್ಯೆಯಲ್ಲಿ ಹುದ್ದೆಗಳು ಖಾಲಿ ಇರುವುದು ಇದಕ್ಕೆ ಪ್ರಮುಖ ಕಾರಣ. ಮಂಜೂರಾದ ಒಟ್ಟು 38,792 ಹುದ್ದೆಗಳಲ್ಲಿ 24,219 ಹುದ್ದೆಗಳು ಖಾಲಿ ಇವೆ. ಮುಖ್ಯವಾಗಿ ಕೆಳ ಹಂತದ ಆಡಳಿತ ನಿರ್ವಹಣೆ ಮತ್ತು ನಾಗರಿಕರಿಗೆ ಅಗತ್ಯ ಸೇವೆ-ಸೌಲಭ್ಯಗಳನ್ನು ಒದಗಿಸಲು ಜನರ ಮಧ್ಯೆ ಇರುವ
ಡಿ ಗ್ರೂಪ್‌ನ 16 ಸಾವಿರಕ್ಕೂ ಹೆಚ್ಚು ಹುದ್ದೆಗಳುಖಾಲಿ ಬಿದ್ದಿವೆ.

ಗುತ್ತಿಗೆ ನೌಕರರ “ದರ್ಬಾರ್‌’
ನಗರ ಸ್ಥಳೀಯ ಸಂಸ್ಥೆಗಳಲ್ಲಿ ಗುತ್ತಿಗೆ ನೌಕರರ “ದರ್ಬಾರ್‌’ ಹೆಚ್ಚಿದೆ. ಖಾಯಂ ಹುದ್ದೆಗಳಿಗಿಂತ ಗುತ್ತಿಗೆ, ಹೊರಗುತ್ತಿಗೆ ಹುದ್ದೆಗಳೇ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯರ್ನಿಹಿಸುತ್ತಿವೆ. ಮಂಜೂರಾದ 38 ಸಾವಿರ ಹುದ್ದೆಗಳಲ್ಲಿ 14,573 ಹುದ್ದೆಗಳು ಕಾರ್ಯನಿರ್ವಹಿಸುತ್ತಿದ್ದು, ಗುತ್ತಿಗೆ, ಹೊರಗುತ್ತಿಗೆ, ನೇರಪಾವತಿ, ಸಮಾನ ಕೆಲಸಕ್ಕೆ ಸಮಾನ ವೇತನ, ದಿನಗೂಲಿ ಸೇರಿ 16 ಸಾವಿರ ಮಂದಿ ಗುತ್ತಿಗೆ ನೌಕರರಿದ್ದಾರೆ. ಅದರಲ್ಲೂ ಡಿ ಗ್ರೂಪ್‌ 12 ಸಾವಿರ ಮಂದಿಯಿದ್ದಾರೆ. ಉಳಿದಂತೆ ಒಟ್ಟು ಹುದ್ದೆಗಳಲ್ಲಿ ಎ ಗ್ರೂಪ್‌ನ 118, ಬಿ ಗ್ರೂಪ್‌ನ 342, ಸಿ ಗ್ರೂಪ್‌ನ 7,563, ಡಿ ಗ್ರೂಪ್‌ನ 16,196 ಸೇರಿ 24,219 ಹುದ್ದೆಗಳು ಖಾಲಿ ಇವೆ. ಬೆಂಗಳೂರು ನಗರ, ಶಿವಮೊಗ್ಗ, ದಕ್ಷಿಣ ಕನ್ನಡ, ಬೆಳಗಾವಿ, ಬಾಗಲಕೋಟೆ ಜಿಲ್ಲೆಗಳಲ್ಲಿ ಹೆಚ್ಚು ಹುದ್ದೆಗಳು ಖಾಲಿ ಇವೆ.

ಇದನ್ನೂ ಓದಿ:ಮಹಾರಾಷ್ಟ್ರದಲ್ಲಿ ವಿವಿಯಂತೆ ಕಾರ್ಯ ನಿರ್ವಹಿಸುತ್ತಿರುವ ಗೋಶಾಲೆ: ಪ್ರಭು ಚೌಹಾಣ್

ಜಿಲ್ಲಾವಾರು ಖಾಲಿ ಹುದ್ದೆಗಳ ವಿವರ
ಬೆಂಗಳೂರು ನಗರ-1,023, ಬೆಂಗಳೂರು ಗ್ರಾಂ-596, ತುಮಕೂರು- 466, ಚಿತ್ರದುರ್ಗ-691, ದಾವಣಗೆರೆ-343, ಚಿಕ್ಕಬಳ್ಳಾಪುರ-680, ಶಿವಮೊಗ್ಗ-1,978, ರಾಮನಗರ-651, ಕೋಲಾರ-936, ಮೈಸೂರು- 955, ಮಂಡ್ಯ-672, ಹಾಸನ-597, ದಕ್ಷಿಣ ಕನ್ನಡ-1,002, ಕೊಡಗು- 163, ಉಡುಪಿ-508, ಚಿಕ್ಕಮಗಳೂರು-493, ಚಾಮರಾಜ ನಗರ- 282, ಬೆಳಗಾವಿ-3,472, ಬಾಗಲಕೋಟೆ-1,309, ಉತ್ತರ ಕನ್ನಡ-935, ಹಾವೇರಿ-833, ಧಾರವಾಡ-145, ಗದಗ-722, ವಿಜಯಪುರ- 559, ಕಲಬುರಗಿ-595, ಬಳ್ಳಾರಿ-800, ಕೊಪ್ಪಳ-630, ಯಾದಗಿರಿ- 506, ಬೀದರ್‌-747, ರಾಯಚೂರು-930 ಹುದ್ದೆಗಳು ಖಾಲಿ ಇವೆ.

Advertisement

ಭರ್ತಿಗೆ ಕ್ರಮ
ಕರ್ನಾಟಕ ಲೋಕಸೇವಾ ಆಯೋಗದಿಂದ ಬಿ ಮತ್ತು ಸಿ ಗ್ರೂಪ್‌ನ 1,104 ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗಿದ್ದು, 721 ಅಭ್ಯರ್ಥಿಗಳು ಕರ್ತವ್ಯಕ್ಕೆ ವರದಿ ಮಾಡಿಕೊಂಡಿದ್ದಾರೆ. ವಿವಿಧ ವೃಂದದ 69 ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಚಾಲ್ತಿಯಲ್ಲಿದೆ. 591 ಹುದ್ದೆಗಳ ಆಯ್ಕೆ ಪಟ್ಟಿ ಕೆಪಿಎಸ್‌ಸಿಯಿಂದ ಸ್ವೀಕೃತವಾಗಬೇಕಿದೆ. ನೇರ ನೇಮಕಾತಿಯಡಿ ಮೂಲ ವೃಂದದ 293 ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪೌರಾಡಳಿತ ಇಲಾಖೆ ತಿಳಿಸಿದೆ.

 -ರಫೀಕ್‌ ಅಹ್ಮದ್‌

Advertisement

Udayavani is now on Telegram. Click here to join our channel and stay updated with the latest news.

Next