ಎಂ.ಡಿ. ತಳವಾರ ಕರೆ ನೀಡಿದರು.
Advertisement
ಚಿತ್ತಾಪುರ ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ಲಾಡ್ಲಾಪುರ ಗ್ರಾಪಂ ಆವರಣದಲ್ಲಿಏರ್ಪಡಿಸಲಾಗಿದ್ದ ಕಾನೂನು ಅರಿವು-ನೆರವು ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಾನೂನಿಗೆ ಗೌರವ ನೀಡುವ ಮೂಲಕ ಹಕ್ಕುಗಳನ್ನು ತಮ್ಮದಾಗಿಸಿಕೊಳ್ಳಬೇಕು. ಮಹಿಳೆಯರು ಪುರುಷ ದೌರ್ಜನ್ಯವನ್ನು ಸಹಿಸಿಕೊಳ್ಳಬಾರದು. ಪುರುಷರೂ ಮಹಿಳೆ ಮೇಲೆ ದೌರ್ಜನ್ಯ ಎಸಗಬಾರದು. ಜೀವನದಲ್ಲಿ ಎದುರಾಗುವ ಕೌಟುಂಬಿಕ ಸಮಸ್ಯೆಗಳಿಂದ ಮುಕ್ತಿ ಪಡೆಯಲು ಹೆಣ್ಣು-ಗಂಡು ಇಬ್ಬರೂ ಕಾನೂನು
ತಿಳಿವಳಿಕೆ ಹೊಂದುವ ಮೂಲಕ ಧೈರ್ಯವಾಗಿ ದೂರು ದಾಖಲಿಸಿ ನ್ಯಾಯದ ಹಕ್ಕುದಾರರಾಗಬೇಕು ಎಂದು ಹೇಳಿದರು.
Related Articles
ಭ್ರೂಣ ಹತ್ಯೆ ಹೆಚ್ಚಾಗುತ್ತಿದೆ. ಮಕ್ಕಳ ಹಕ್ಕುಗಳ ಹರಣವಾಗುತ್ತಿದೆ ಎಂದು ಹೇಳಿದರು.
Advertisement
ನ್ಯಾಯವಾದಿ ಸಂಗಣ್ಣಗೌಡ ಅನವಾರ ಹಾಗೂ ಹಿರಿಯ ನ್ಯಾಯವಾದಿ ಎಸ್.ಪಿ. ಸಾತನೂರಕರ್ ಮಾತನಾಡಿದರು.ವಕೀಲರ ಸಂಘದ ತಾಲೂಕು ಅಧ್ಯಕ್ಷ ಚಂದ್ರಶೇಖರ ಅವಂಟಿ ಕಾರ್ಯಕ್ರಮ ಉದ್ಘಾಟಿಸಿದರು. ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮಣ ಶೃಂಗೇರಿ, ಗ್ರಾಪಂ ಅಧ್ಯಕ್ಷ ಸಾಬಣ್ಣ ಆನೇಮಿ, ನಾಲವಾರ ಉಪ ತಹಶೀಲ್ದಾರ ರವಿಕುಮಾರ ಕೆ.ವೈ., ಕಂದಾಯ ನಿರೀಕ್ಷಕ ಕಾಶೀನಾಥ, ನ್ಯಾಯವಾದಿ ಮಲ್ಲಿಕಾರ್ಜುನ ಇಂಗಳಗಿ, ಶಿಕ್ಷಕ ಹುಸೇನಿ ರಾಠೊಡ, ಬಾಬುರಾವ ಚವ್ಹಾಣ, ಮುಖಂಡರಾದ ಸಾಬಣ್ಣ ಮುಸ್ಲಾ, ಈರಣ್ಣ ಮಲಕಂಡಿ, ಜಯಶ್ರೀ ಕುಂಬಾರ, ಮಂಜುಳಾ ಹಳಕರ್ಟಿ, ಜಗದೇವಿ, ಸಾಬಣ್ಣ ಗೊಡಗ, ಹುಸನಪ್ಪ ಮಗದಂಪೂರ, ಮಲ್ಲಣ್ಣ ದಂಡಭಾ ಪಾಲ್ಗೊಂಡಿದ್ದರು. ಪಿಡಿ0 ಗುರುನಾಥರೆಡ್ಡಿ ಸ್ವಾಗತಿಸಿದರು. ಶಾಂತಕುಮಾರ ಎಣ್ಣಿ ನಿರೂಪಿಸಿದರು .