ಚಿತ್ತಾಪುರ: ಪ್ರತಿಯೊಬ್ಬರ ಮನೆಯಲ್ಲಿ ಕಲೆ ಪ್ರತಿಭೆಗಳು ಅಡಕವಾಗಿರುತ್ತವೆ. ಅವುಗಳನ್ನು ಹೊರತರುವ ಕೆಲಸ ಇಂದು ಎಲ್ಲರೂ ಮಾಡಬೇಕೆಂದು ಹಲಕರ್ಟಿ ಕಟ್ಟಿಮನಿ ಹಿರೇಮಠದ ಪೀಠಾಧಿ ಪತಿ ಶ್ರೀ ಅಭಿನವ ಮುನೀಂದ್ರ ಮಹಾಸ್ವಾಮೀಜಿ ಹೇಳಿದರು.
ಪಟ್ಟಣದ ಅಕ್ಕಮಹಾದೇವಿ ಮಂದಿರದಲ್ಲಿ ದಿ. ವೀರಯ್ಯ ಸ್ವಾಮಿ ಅಲ್ಲೂರ ಸ್ಮಾರಕ ಕಲಾ ಅಕಾಡೆಮಿ ವತಿಯಿಂದ
ರಂಗಭೂಮಿ ಕಲಾವಿದರಿಗೆ ಹಮ್ಮಿಕೊಳ್ಳಲಾಗಿದ್ದ ಕಲಾ ಪ್ರಶಸ್ತಿ ಪ್ರದಾನ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು ಮಾತನಾಡಿದರು. ಕಲೆಗಳಿಗೆ ಬೆಲೆ ನೀಡಿದಾಗ ಕಲೆ ಉಳಿಯುತ್ತವೆ. ರಂಗಭೂಮಿಗೆ ಸರಕಾರ ಹೆಚ್ಚಿನ ಆಸಕ್ತಿವಹಿಸಿ ಕಲೆ, ಕಲಾವಿದರನ್ನು ಪ್ರೋತ್ಸಾಹಿಸಿ ಪ್ರಶಸ್ತಿ ನೀಡಬೇಕು ಎಂದು ಹೇಳಿದರು.
ಜಿಪಂ ಸದಸ್ಯ ಶಿವರುದ್ರ ಭೀಣಿ ಮಾತನಾಡಿ, ಇಂದು ಅಳಿವಿನಂಚಿನಲ್ಲಿರುವ ರಂಗ ಭೂಮಿ ಕಲೆ, ಕಲಾವಿದರನ್ನು ಉಳಿಸಿ ಬೆಳೆಸಬೇಕಾಗಿದೆ. ಸಿನಿಮಾ ಮತ್ತು ಸಿನಿಮಾ ಕಲಾವಿದರಿಗೆ ನೀಡುವ ಆದ್ಯತೆ ರಂಗಭೂಮಿ ಕಲೆ ಹಾಗೂ ಕಲಾವಿದರಿಗೆ ಸಿಗುತ್ತಿಲ್ಲ. ನಾಟಕಗಳು ನೋಡಲು ಕೈಬಿಸಿ ಜನರನ್ನು ಕರೆಯುವಂತಾಗಿದೆ ಎಂದರು.
ಕಲಬುರಗಿ ರಂಗಾಯಣ ನಿರ್ದೇಶಕ ಮಹೇಶ ಪಾಟೀಲ ಉದ್ಘಾಟಿಸಿದರು. ಅಧ್ಯಕ್ಷತೆ ವಹಿಸಿದ್ದ ಅಕಾಡೆಮಿ ಅಧ್ಯಕ್ಷ ಚಂದ್ರಶೇಖರ ಅವಂಟಿ, ನಿಕಟ ಪೂರ್ವ ಕಸಾಪ ಜಿಲ್ಲಾಧ್ಯಕ್ಷ ಮಹಿಪಾಲರೆಡ್ಡಿ ಮೂನ್ನೂರ, ರಾಯಚೂರು ಕೃಷಿ ವಿಶ್ವ ವಿದ್ಯಾಲಯ ನಿರ್ದೇಶಕ ವೀರಣ್ಣಗೌಡ ಪರಸರಡ್ಡಿ, ಪ್ರಶಸ್ತಿ ಪುರಸ್ಕೃತ ಶಂಕರಜೀ ಹಿಪ್ಪರಗಿ, ಬಾಬು ಕಾಶಿ, ಅಕಾಡೆಮಿ ಸಂಸ್ಥಾಪಕ ಸಂಚಾಲಕ ನಾಗಯ್ಯಸ್ವಾಮಿ ಅಲ್ಲೂರ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಪುರಸಭೆ ಅಧ್ಯಕ್ಷೆ ಅನ್ನಪೂರ್ಣ ಹೊತಿನಮಡಿ, ತಾಪಂ ಅಧ್ಯಕ್ಷ ಜಗಣ್ಣಗೌಡ ಪಾಟೀಲ್ ರಾಮತೀರ್ಥ, ಎನ್ ಈಕೆಆರ್‌ಟಿಸಿ ಮಾಜಿ ಅಧ್ಯಕ್ಷ ಭೀಮಣ್ಣ ಸಾಲಿ, ಉದ್ದಿಮೆದಾರ ನಾಗಣ್ಣಗೌಡ ಅಲ್ಲೂರ, ಶಂಕರ ಬಿರಾದಾರ, ಸಿದ್ದಲಿಂಗ ಬಾಳಿ, ರಾಜಶೇಖರ ಬಳ್ಳಾ, ವೀರಸಂಗಪ್ಪ ಸುಲೇಗಾಂವ, ಮಲ್ಲಿಕಾರ್ಜುನ ಎಮ್ಮೆನೋರ, ಬಸವರಾಜ ಚಿನ್ನಮಳ್ಳಿ, ಹಣಮಂತ ಸಂಕನೂರ, ಭೀಮಣ್ಣ ಹೋತಿನಮಡಿ, ಸಿದ್ದಯ್ಯಸ್ವಾಮಿ ದಿಗ್ಗಾಂವ, ಚಂದ್ರಶೇಖರ ಪಾಟೀಲ ಮಲಕೂಡ ಇದ್ದರು. ಕಾರ್ಯದರ್ಶಿ ವೀರೇಂದ್ರ ಕೊಲ್ಲೂರ್ ಸ್ವಾಗತಿಸಿದರು. ನರಸಪ್ಪ ಚಿನ್ನಕಟ್ಟಿ ನಿರೂಪಿಸಿದರು. ರಾಚಯ್ಯಸ್ವಾಮಿ ವಂದಿಸಿದರು.
ಪ್ರಶಸ್ತಿ ಪಡೆದ 14 ಕಲಾವಿದರು ಪ್ರಶಸ್ತಿ ಪುರಸ್ಕೃತ ರಂಗ ಕಲಾವಿದರಾದ ಲಿಂಗಪ್ಪ ಮಾಸ್ತರ ತಡಬಿಡಿ, ಸೂರ್ಯಕಾಂತ ಮಾಸ್ತರ ಹಂಗನಹಳ್ಳಿ, ಶಿವಕವಿ ಜೋಗೂರ, ಮಲ್ಲಿನಾಥ ಅಲೆಗಾಂವ್, ಪರಮೇಶ್ವರ ಲೆಂಡೆ, ಶಂಕರಜಿ ಹಿಪ್ಪರಗಿ, ಶೋಭಾ ರಂಜೋಳಿಕರ್, ಶಿವಣ್ಣ ಹಿಟ್ಟಿನ್, ಸಿದ್ದಲಿಂಗಯ್ಯ ಸ್ವಾಮಿ ಮಲಕೂಡ್, ಶಿವಶರಣಪ್ಪ ಶಿರವಾಳ, ಈರಣ್ಣ ಮಾಸ್ತರ ಅಲ್ಲೂರ, ಬಾಬು ಕಾಶಿ, ಅಯ್ಯಣ್ಣ ಮಾಸ್ತರ ಅಳ್ಳೋಳ್ಳಿ, ಕಾಶಿನಾಥ ಬಿರಾದಾರ ಅವರಿಗೆ 2017ರ ಕಲಾ ಪ್ರಶಸ್ತಿ ಪ್ರದಾನ ಮಾಡಲಾಯಿತು.