Advertisement

ಮಲಗಿದ್ದ ವೇಳೆ ಅಪ್ರಾಪ್ತೆಯನ್ನು ಹೊತ್ತೊಯ್ದು ಅತ್ಯಾಚಾರವೆಸಗಿದ್ದ ಆರೋಪಿಗೆ 20 ವರ್ಷ ಜೈಲು

02:51 PM Jun 17, 2022 | Team Udayavani |

ನಾಗಮಂಗಲ: ಕಳೆದ ಎರಡು ವರ್ಷಗಳ ಹಿಂದೆ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದ ಅಪರಾಧಿಗೆ ಜಿಲ್ಲಾ ಅಧಿಕ ಸತ್ರ ಮತ್ತು ತ್ವರಿತಗತಿ ಎರಡನೇ ನ್ಯಾಯಾಲಯದ ವಿಶೇಷ ನ್ಯಾಯಾಧೀಶರು 20ವರ್ಷ ಕಠಿಣ ಶಿಕ್ಷೆ ಜತೆಗೆ 80ಸಾವಿರ ರೂ. ದಂಡ ವಿಧಿಸಿದ್ದಾರೆ.

Advertisement

ಕೂಲಿ ಕೆಲಸ ಮಾಡುತ್ತಿದ್ದ: ಮೈಸೂರು ಜಿಲ್ಲೆ ಕೆ.ಆರ್‌ .ನಗರ ಟೌನ್‌ನ ಆಂಜನೇಯ ಬ್ಲಾಕ್‌ ವಾಸಿ ಅಶೋಕ ಅಲಿಯಾಸ್‌ ಸುಬ್ರಹ್ಮಣಿ ಅಲಿಯಾಸ್‌ ಪ್ರಕಾಶ್‌(40) ಎಂಬಾತನೇ ಪೋಕ್ಸೋ ಕಾಯ್ದೆಯಡಿ ಶಿಕ್ಷೆಗೊಳಗಾಗಿರುವ ಆರೋಪಿಯಾಗಿದ್ದು, ತಾಲೂಕಿನ ಆದಿಚುಂಚನಗಿರಿ ಮಠದಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ ಈತ ರಾತ್ರಿ ವೇಳೆ ಊಟ ಮುಗಿಸಿ ಚುಂಚನಹಳ್ಳಿಯಲ್ಲಿಯೇ ವಾಸ್ತವ್ಯ ಹೂಡುತ್ತಿದ್ದನು.

ಕಳೆದ 2020ರ ಜು.3ರಂದು ರಾತ್ರಿ 11ಗಂಟೆ ಸಮಯದಲ್ಲಿ ಚುಂಚನಹಳ್ಳಿ ಗ್ರಾಮದ ಮನೆಯಲ್ಲಿ ತನ್ನ ಅಜ್ಜಿ ಜತೆಯಲ್ಲಿ ಮಲಗಿದ್ದ ಅಪ್ರಾಪ್ತ ಬಾಲಕಿಯನ್ನು ಬಾಯಿಮುಚ್ಚಿ ಹೆಗಲ ಮೇಲೆ ಹೊತ್ತೂಯ್ದು ಗ್ರಾಮ ಹೊರವಲಯದ ನಿರ್ಜನ ಪ್ರದೇಶದ ಗುಡ್ಡದ ಮೇಲೆ ಅತ್ಯಾಚಾರವೆಸಗಿದ್ದನು.

ದೋಷಾರೋಪಣ ಪತ್ರ: ಸಂತ್ರಸ್ತ ಬಾಲಕಿ ನೀಡಿದ್ದ ದೂರಿನ ಅನ್ವಯ ಬೆಳ್ಳೂರು ಠಾಣೆಯ ಪೊಲೀಸರು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಘಟನೆ ನಡೆದ 24ಗಂಟೆಯೊಳಗೆ ಆರೋಪಿಯನ್ನು ಬಂಧಿಸಿ ಅಂದಿನ ನಾಗಮಂಗಲ ಡಿವೈಎಸ್‌ಪಿ ಕೆ.ಬಿ.ವಿಶ್ವನಾಥ್‌ ನ್ಯಾಯಾಲಯಕ್ಕೆ ದೋಷಾರೋಪಣ ಪತ್ರ ಸಲ್ಲಿಸಿದ್ದರು.

ಇದನ್ನೂ ಓದಿ:ದೈವದ ಜತೆ ಮಹಿಳೆಯರು ಕುಣಿಯುವ ವಿಡಿಯೋ ವೈರಲ್ ; ಸ್ಪಷ್ಟನೆ

Advertisement

ಅಪರಾಧಿಗೆ ದಂಡ: ಈ ವಿಶೇಷ ಪ್ರಕರಣ ಕೈಗೆತ್ತಿಕೊಂಡು ವಿಚಾರಣೆ ನಡೆಸಿದ ಜಿಲ್ಲಾ ಅಧಿಕ ಸತ್ರ ಮತ್ತು ತ್ವರಿತಗತಿ ಎರಡನೇ ನ್ಯಾಯಾಲಯದ ವಿಶೇಷ ನ್ಯಾಯಾಧೀಶರು ಆರೋಪಿ ಅಶೋಕ ಅಲಿಯಾಸ್‌ ಸುಬ್ರಹ್ಮಣಿ ಅಲಿಯಾಸ್‌ ಪ್ರಕಾಶ್‌ಗೆ 20ವರ್ಷ ಕಠಿಣ ಶಿಕ್ಷೆ ಜತೆಗೆ 80ಸಾವಿರ ರೂ.ದಂಡ ವಿಧಿಸಿ ಜೂ.14ರಂದು ತೀರ್ಪು ನೀಡಿದ್ದಾರೆ. ಸಂತ್ರಸ್ತೆ ಅಪ್ರಾಪ್ತ ಬಾಲಕಿ ಪರ ಸರ್ಕಾರಿ ಅಭಿಯೋಜಕಿ ಪಿ.ಕೆ.ಶಶಿಕಲಾ ಅಬೂಬಕರ್‌ ವಾದ ಮಂಡಿಸಿದ್ದರು. ಪ್ರಕರಣ ದಾಖಲಾದ 24ಗಂಟೆ ಯೊಳಗೆ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಪಾರದರ್ಶಕ ತನಿಖೆ ನಡೆಸಿ ಅಪರಾಧಿಗೆ ಶಿಕ್ಷೆ ವಿಧಿಸುವಲ್ಲಿ ಯಶಸ್ವಿಯಾದ ಅಂದಿನ ಡಿವೈಎಸ್‌ಪಿ ಕೆ.ಬಿ.ವಿಶ್ವನಾಥ್‌, ಸಿಪಿಐ ಕೆ.ರಾಜೇಂದ್ರ, ಪಿಎಸ್‌ಐ ದಯಾನಂದ್‌, ಎಎಸ್‌ ಐಗಳಾದ ಶಿವಣ್ಣ, ಮರಿಸ್ವಾಮಿ, ಸಿದ್ದರಾಜು ಸಿಬ್ಬಂದಿಗಳಾದ ಮಂಜುನಾಥ್‌, ಮಹದೇವಸ್ವಾಮಿ, ಶಿವಮಲ್ಲು, ಸಿ.ಜೆ.ವಜ್ರ ಮತ್ತು ಸಂದೇಶ್‌ಪಟೇಲ್‌ ಅವರನ್ನು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎನ್‌ .ಯತೀಶ್‌, ಅಪರ ಜಿಲ್ಲಾ ಪೊಲೀಸ್‌ ಅಧೀಕ್ಷಕ ವೇಣುಗೋಪಾಲ್‌, ನಾಗಮಂಗಲ ಡಿವೈಎಸ್‌ಪಿ ನವೀನ್‌ಕುಮಾರ್‌ ಪ್ರಶಂಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next