Advertisement
ಸೂಚನಾ ಫಲಕಗಳೂ ಇಲ್ಲಈ ಜಂಕ್ಷನ್‌ನ ಎಡಕ್ಕೆ ಇರುವ ರಸ್ತೆಯಲ್ಲಿ ಕಂಡೂÉರು ಕಡೆಗೆ, ನೇರ ಹೋದರೆ ಜಪ್ತಿ, ಹುಣ್ಸೆಮಕ್ಕಿ, ಬಿದ್ಕಲ್‌ಕಟ್ಟೆಗೆ ತೆರಳಬಹುದು. ಇಲ್ಲಿ ವಾಹನ ಸವಾರರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಯಾವುದೇ ಸೂಚನಾ ಫಲಕಗಳನ್ನೂ ಅಳವಡಿಸಿಲ್ಲ. ವಾಹನಗಳ ವೇಗ ಕುಂಠಿತಗೊಳಿಸಲು ಹಂಪ್ಸ್‌ಗಳೂ ಸಹ ಇಲ್ಲ. ಈಗಾಗಲೇ ಹಲವು ಅಪಘಾತಗಳು ಇಲ್ಲಿ ಸಂಭವಿಸಿದ್ದರೂ ಸಂಬಂಧಪಟ್ಟ ಇಲಾಖೆ ಇದುವರೆಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎನ್ನುವುದು ಸ್ಥಳೀಯರ ದೂರು.
ಬಸ್ರೂರು-ಬಿ.ಎಚ್. ರಸ್ತೆ ತಿರುವು ಪ್ರಸ್ತುತ ಅಪಾಯಕಾರಿಯಾಗಿದ್ದು ಇಲ್ಲಿ ಪದೇ ಪದೇ ಅಪಘಾತಗಳು ಸಂಭವಿಸುತ್ತಿವೆ.ಸಂಬಂಧಿಸಿದ ಇಲಾಖೆ ತತ್‌ಕ್ಷಣ ಸೂಕ್ತ ಕ್ರಮ ತೆಗೆದುಕೊಂಡರೆ ಸಂಭವನೀಯ ಅಪಘಾತಗಳನ್ನು ತಡೆಯಬಹುದು.
-ರಾಮ ಪೂಜಾರಿ, ಸ್ಥಳೀಯ ನಿವಾಸಿ