ಪುರಾಣಗಳಲ್ಲಿ ಉಲ್ಲೇಖಗೊಂಡಿರುವಂತೆ ವಿಷ್ಣುವಿನ ಸುದರ್ಶನ ಚಕ್ರದಿಂದ ಛಿದ್ರಗೊಂಡ ಸತಿಯ ದೇಹ ಭಾಗಗಳು ಬಿದ್ದ 51 ಜಾಗಗಳಲ್ಲಿ ಶಕ್ತಿ ಪೀಠಗಳಾಗಿದ್ದು,
ಅವುಗಳಲ್ಲಿ 18 ಶಕ್ತಿ ಪೀಠಗಳು ಹೊರ ದೇಶಗಳಲ್ಲಿವೆ. ಪಾಕಿಸ್ಥಾನದ ಬಲುಚಿಸ್ಥಾನದಲ್ಲಿರುವ ಹಿಂಗ್ಲಾಜ್ ಶಕ್ತಿ ಪೀಠದಲ್ಲಿ ಸತಿಯ ತಲೆ ಭಾಗ ಬಿದ್ದಿದ್ದು, ಇಲ್ಲಿ ಕಲ್ಲಿಗೆ
ಪೂಜೆ ಸಲ್ಲುತ್ತದೆ, ಕರಾಚಿ ಸಮೀಪ ಕಣ್ಣುಗಳು ಬಿದ್ದ ಜಾಗ ಶಿವಹರ ಕರಾಯದಲ್ಲಿ ಮಹಿಷ ಮರ್ದಿನಿಗೆ ಪೂಜೆ ಸಲ್ಲುತ್ತದೆ.
ಬಾಂಗ್ಲಾದೇಶದಲ್ಲಿರುವ ಸುಗಂಧ ಶಕ್ತಿ ಪೀಠದಲ್ಲಿ ದೇವಿಯ ಮೂಗು ಬಿದ್ದ ಸ್ಥಳವಿದೆ. ಇಲ್ಲಿ ತ್ರಯಂಬಕ ರೂಪದಲ್ಲಿರುವ ದೇವಿಗೆ ಪೂಜೆ ಸಲ್ಲಿಸಲಾಗುತ್ತದೆ. ದೇವಿಯ ಮೊಣಕಾಲು ಬಿದ್ದ ಸ್ಥಳ ನೇಪಾಳದ ಗುಹೇಶ್ವರಿ ಶಕ್ತಿ ಪೀಠದಲ್ಲಿ ಮಹಾಶಿರ,ಕಪಾಲಿ ರೂಪದಲ್ಲಿ ದೇವಿಗೆ ಆರಾಧನೆ ನಡೆಯುತ್ತೆ.
ಟಿಬೆಟ್‌ನಲ್ಲಿರುವ ದಾಕ್ಷಾಯಿಣಿ ಶಕ್ತಿ ಪೀಠದಲ್ಲಿ ದೇವಿಯ ಬಲಗೈ ಬಿದ್ದಿರುವ ಕುರುಹು ಇದೆ. ನೇಪಾಲದ ಮುಕ್ತಿ ನಾ ಥದಲ್ಲಿ ಗಂಡಕಿ ಚಂಡಿ ಶಕ್ತಿ ಪೀಠದಲ್ಲಿ ದೇವಿಯ ಕೆನ್ನೆಯ ಭಾಗ ಬಿದ್ದಿದೆ.
ಬಾಂಗ್ಲಾದೇಶದಲ್ಲಿರುವ ಭವಾನಿ ಶಕ್ತಿ ಪೀಠವು ಸೀತಕುಂಡ ಚಂದ್ರನಾಥದಲ್ಲಿ ಸತಿ ದೇವಿಯ ತೋಳು ಬಿದ್ದಿದ್ದು, ಭವಾನಿ ರೂಪದಲ್ಲಿ ಪೂಜಿಸಲ್ಪಡುತ್ತಾಳೆ. ಎಡ ತೊಡೆ ಭಾಗ ಬಿದ್ದಿ ರುವ ಬಾಂಗ್ಲಾದೇಶದಲ್ಲಿ ಜಯಂತಿ ಶಕ್ತಿ ಪೀಠವಾಗಿದೆ, ಚಿತ್ತ ಗಾಂಗ್ ನಲ್ಲಿರುವ ಕುಮಾರಿ ಕುಂಡದಲ್ಲಿ ದೇವಿಯ ಬೆನ್ನು ಮೂಳೆ ಬಿದ್ದಿದ್ದು, ಶ್ರಾವಣಿ ಮತ್ತಿ ನಿಮಿಷ ದೇವಿಗೆ ಪೂಜೆ ಸಲ್ಲಿಸಲ ಗುತ್ತದೆ.
ಕುತ್ತಿಗೆ ಭಾಗ ಬಿದ್ದಿರುವ ಬಾಂಗ್ಲಾದೇಶದ ಮಹಾ ಲಕ್ಷ್ಮಿ ಶಕ್ತಿ ಪೀಠ ಜೌನ್ಪುರ್ ಗ್ರಾಮದ ಶ್ರೀಶೈಲ್‌ನಲ್ಲಿದೆ. ಬಾಗುರ ಜಿಲ್ಲೆಯ ಭವಾನಿಪುರದಲ್ಲಿ ದೇವಿಯ ಕಾಲಿನ ಕಡಗ ಬಿದ್ದಿದ್ದು, ಅಪರ್ಣಾ ದೇವಿಯನ್ನು ಪೂಜಿಸಲಾಗುತ್ತದೆ. ಸತಿ ದೇವಿಯ ಪಾದ ಮತ್ತು ಕೈಗಳು ಬಿದ್ದ ಜಾಗ ಬಾಂಗ್ಲಾ ದೇಶದ ಖುಲಾ ಜಿಲ್ಲೆಯ ಈಶ್ವರಿಪುರ ಗ್ರಾಮದಲ್ಲಿದೆ. ಇಲ್ಲಿ ಕಾಳಿ ದೇವಿಗೆ ಪೂಜೆ ಸಲ್ಲುತ್ತದೆ.